ಕೊರೋನಾ ಸಂಕಷ್ಟದ ನಡುವೆಯೇ ರಾಜ್ಯಕ್ಕೆ ಎದುರಾದ ಪ್ರವಾಹ ಭೀತಿ!

ಕೊರೋನಾ ವೈರಸ್ ನಿಂದಾಗಿ ನಲುಗಿ ಹೋಗುತ್ತಿರುವ ರಾಜ್ಯಕ್ಕೆ ಮತ್ತೊಂದು ಸಂಕಷ್ಟ ಕೂಡ ಎದುರಾಗಲಿದೆ. ರಾಜ್ಯದಲ್ಲಿ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇದೀಗ ಪ್ರವಾಹ ಭೀತಿ ಎದುರಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ನಿಂದಾಗಿ ನಲುಗಿ ಹೋಗುತ್ತಿರುವ ರಾಜ್ಯಕ್ಕೆ ಮತ್ತೊಂದು ಸಂಕಷ್ಟ ಕೂಡ ಎದುರಾಗಲಿದೆ. ರಾಜ್ಯದಲ್ಲಿ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇದೀಗ ಪ್ರವಾಹ ಭೀತಿ ಎದುರಾಗಿದೆ. 

ಈ ಕುರಿತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಎಚ್ಚರಿಕೆ ನೀಡಿದ್ದು, ಕರ್ನಾಟಕದಲ್ಲಿ ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಪ್ರವಾಹ ಎದುರಾಗಬಹುದು ಎಂದು ತಿಳಿಸಿದೆ. 

ಕಳೆದ ವರ್ಷ ಕೂಡ ಿದೇ ಸಂದರ್ಭದಲ್ಲಿ ರಾಜ್ಯ ಪ್ರವಾಹದಿಂದಾಗಿ ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸಿತ್ತು. ಪ್ರವಾಹದಿಂದಾಗಿ ಸಾಕಷ್ಟು ನಷ್ಟ ಎದುರಾಗಿತ್ತು. ಈಗಲೂ ಆ ನಷ್ಟವನ್ನು ಸರಿಪಡಿಸುವ ಕಾರ್ಯಗಳು ನಡೆಯುತ್ತಲೇ ಇದ್ದು, ಇದೀಗ ಮತ್ತೆ ಪ್ರವಾಹ ಭೀತಿ ಎದುರಾಗಿದೆ. 

ಮಾರ್ಚ್ ಮತ್ತು ಏಪ್ರಿಲ್ ತಿಗಳವರೆಗೂ ರಾಜ್ಯದಲ್ಲಿ 37 ಎಂಎಂ ಮಳೆಯಾಗಿದೆ. ಕಳೆದ ವರ್ಷದ ಶೇ.45ರಷ್ಟು ಮಳೆಯಾಗಿತ್ತು. ರಾಜ್ಯದ ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿಯೇ ಇದೆ. ಇನ್ನು ಜೂನ್.1 ರಿಂದ ಜೂನ್25ರವರೆಗೂ ಸಾಮಾನ್ಯವಾಗಿ 160 ಎಂಎಂ ಮಳೆಯಾಗುತ್ತಿತ್ತು. ಆದರೆ, ಈ ಬಾರಿ 146 ಎಂಎಂ ನಷ್ಟು ಮಳೆಯಾಗಿದೆ. ಇದರೊಂದಿಗೆ ಶೇ.9ರಷ್ಟು ಮಾತ್ರ ಕೊರತೆ ಎದುರಾಗಿದೆ. ಈ ನಡುವೆ ಹೇಳಿಕೆ ನೀಡಿರುವ ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ ರೆಡ್ಡಿಯವರು ಶೇ.19ವರೆಗಿನ ಕೊರತೆ ಸಾಮಾನ್ಯವೆಂದು ಹೇಳಿದ್ದಾರೆ. 

ಭಾರೀ ಮಳೆಯಾಗುವ ಹಾಗೂ ಪ್ರವಾಹ ಭೀತಿಯನ್ನು ತಳ್ಳಿಹಾಕುವಂತಿಲ್ಲ. ಈಗಾಗಲೇ ರಾಜ್ಯದ ಹಲವು ಅನೇಕ ಅಣೆಕಟ್ಟುಗಳು ಭರ್ತಿಯಾಗಿವೆ. ಕೆಲ ಹಳ್ಳಿಗಳಲ್ಲಿ ಈಗಾಗಲೇ ಪ್ರವಾಹ ಪರಿಸ್ಥಿತಿ ಎದುರಿಸುತ್ತಿವೆ. ಈಗಾಗಲೇ ಅಧಿಕಾರಿಗಳೊಂದಿಗೆ ಮೂರು ಸಬೆ ನಡೆಸಿ ಪರಿಸ್ಥಿತಿ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com