ಬೆಂಗಳೂರು: ಸಿಬ್ಬಂದಿಗೆ ಕೊರೋನಾ, ಮೂರು ದಿನ ಸಂಚಾರಿ ಕೇಂದ್ರ ಕಚೇರಿ ಸೀಲ್ ಡೌನ್

ನಗರ ಪೊಲೀಸ್ ಆಯುಕ್ತರ ಕಚೇರಿಯುಲ್ಲಿ ಕೊರೋನಾ ಸೋಂಕು ಪತ್ತೆಯಾದ ಬೆನ್ನಲ್ಲೇ ನಗರದ ಸಂಚಾರ ಪೂರ್ವ ವಿಭಾಗದ ಕೇಂದ್ರ ಕಚೇರಿಗೂ ಸೋಂಕು ವ್ಯಾಪಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಕಚೇರಿಯುಲ್ಲಿ ಕೊರೋನಾ ಸೋಂಕು ಪತ್ತೆಯಾದ ಬೆನ್ನಲ್ಲೇ ನಗರದ ಸಂಚಾರ ಪೂರ್ವ ವಿಭಾಗದ ಕೇಂದ್ರ ಕಚೇರಿಗೂ ಸೋಂಕು ವ್ಯಾಪಿಸಿದೆ.

ಪೂರ್ವ ವಿಭಾಗದ ಕೇಂದ್ರ ಕಚೇರಿಯ ಆವರಣದಲ್ಲಿ ಕರ್ತವ್ಯದಲ್ಲಿದ್ದ ಓರ್ವ ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಂಚಾರ ವಿಭಾಗದ ಪೊಲೀಸ್ ಕೇಂದ್ರ ಕಚೇರಿಯನ್ನು ಶನಿವಾರದಿಂದ ಜೂ. 30 ರವರೆಗೆ ಮೂರು ದಿನಗಳ ಕಾಲ ಮುಚ್ಚಲಾಗಿದೆ ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಡಾ.ಬಿ ಆರ್ ರವಿಕಾಂತೇಗೌಡ ತಿಳಿಸಿದ್ದಾರೆ.

ಇನ್ನು, ಕಚೇರಿಯ ಕಟ್ಟಡದಲ್ಲಿರುವ ಸಂಚಾರ ನಿಯಂತ್ರಣ ಕೊಠಡಿಯಲ್ಲಿ ಸೀಮಿತ ಸಿಬ್ಬಂದಿಯೊಂದಿಗೆ ಸಂಚಾರ ವಿಭಾಗ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ. 

ಇನ್ನು, ನಗರದ ಕೆ ಆರ್ ಮಾರುಕಟ್ಟೆ ಸಂಚಾರಿ ಪೊಲೀಸ್ ಠಾಣೆ, ಕುಮಾರಸ್ವಾಮಿ ಸಂಚಾರಿ ಪೊಲೀಸ್ ಠಾಣೆ, ಕೆಂಗೇರಿ ಸಂಚಾರಿ ಠಾಣೆ, ಅಶೋಕ ನಗರ ಸಂಚಾರಿ ಪೊಲೀಸ್ ಠಾಣೆ, ಬಾಣಸವಾಡಿ, ಹಲಸೂರು ಗೇಟ್, ಮಾರತಹಳ್ಳಿ ಠಾಣೆ, ಕಲಾಸಿಪಾಳ್ಯ, ಸಿಟಿ ಮಾರುಕಟ್ಟೆ, ಚಾಮರಾಜಪೇಟೆ, ನಂದಿನಿ ಲೇಔಟ್ ಠಾಣೆ, ಕೋರಮಂಗಲ, ಬಂಡೆಪಾಳ್ಯ, ಸುದ್ದಗುಂಟೇಪಾಳ್ಯ, ಪುಟ್ಟೇನಹಳ್ಳಿ ಠಾಣೆ, ಡಿಜೆ ಹಳ್ಳಿ ಠಾಣೆ, ಸಿಸಿಬಿ ಕಚೇರಿ ಸೇರಿ 23 ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ.

ನಗರದಲ್ಲಿ 125 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ್ದು, 12 ಪೊಲೀಸರು ಗುಣಮುಖರಾಗಿದ್ದಾರೆ. 
ನಾಲ್ವರು ಪೊಲೀಸರು ಸೋಂಕಿಗೆ ಬಲಿಯಾಗಿದ್ದು, 107 ಸೋಂಕಿತ ಪೊಲೀಸರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com