ರಾಜ್ಯದಲ್ಲಿ ಒಂದೇ ದಿನ 918 ಕೋವಿಡ್ ಪ್ರಕರಣಗಳು, ಬೆಂಗಳೂರು ಒಂದರಲ್ಲೇ 596 ಸೋಂಕಿತರು

ರಾಜ್ಯದಲ್ಲಿ ಒಂದೇ ದಿನ ಬರೋಬ್ಬರಿ 918 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ಒಂದರಲ್ಲೇ 596 ಪ್ರಕರಣಗಳು ದೃಢಪಟ್ಟಿವೆ.
ರಾಜ್ಯದಲ್ಲಿ ಒಂದೇ ದಿನ 918 ಕೋವಿಡ್ ಪ್ರಕರಣಗಳು, ಬೆಂಗಳೂರು ಒಂದರಲ್ಲೇ 596 ಸೋಂಕಿತರು

ಬೆಂಗಳೂರು:  ರಾಜ್ಯದಲ್ಲಿ ಒಂದೇ ದಿನ ಬರೋಬ್ಬರಿ 918 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ಒಂದರಲ್ಲೇ 596 ಪ್ರಕರಣಗಳು ದೃಢಪಟ್ಟಿವೆ.

ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,923 ತಲುಪಿದೆ. ಕಳೆದ 24 ದಿನಗಳಲ್ಲಿ 11 ಮಂದಿ ಮೃತಪಟ್ಟಿದ್ದಾರೆ.

ಒಟ್ಟು 7287 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟು 195 ಮಂದಿ ಮೃತಪಟ್ಟಿದ್ದಾರೆ. ಸದ್ಯ 4441 ಸಕ್ರಿಯ ಪ್ರಕರಣಗಳಿದ್ದು, 197 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್?
ಬೆಂಗಳೂರು ನಗರ -596, ದಕ್ಷಿಣ ಕನ್ನಡ -49, ಕಲಬುರಗಿ -33, ಬಳ್ಳಾರಿ -24, ಗದಗ -24, ಧಾರವಾಡ -19, ಬೀದರ್ -17,, ಉಡುಪಿ -14, ಹಾಸನ -14, ಕೋಲಾರ -14 ಯಾದಗಿರಿ, ಶಿವಮೊಗ್ಗ, ತುಮಕೂರು, ಚಾಮರಾಜನಗರ -13, ಮಂಡ್ಯ 12, ಮೈಸೂರು -12 ಪ್ರಕ್ರಣಗಳು ಬೆಳಕಿಗೆ ಬಂದಿದೆ.

ಕೊಡಗು 9, ರಾಯಚೂರು ಮತ್ತು ದಾವಣಗೆರೆ 6, ಬೆಂಗಳೂರು ಗ್ರಾಮಾಂತರ 5 ಪ್ರಕರಣಗಳು ವರದಿಯಾಗಿದೆ.

ಉತ್ತರಕನ್ನಡ, ಬಾಗಲಕೋಟೆ, ಚಿಕ್ಕಮಗಳೂರು, ಚಿತ್ರದುರ್ಗ ತಲಾ 2 ಬೆಳಗಾವಿ , ಚಿಕ್ಕಬಳ್ಳಾಪುರ , ಕೊಪ್ಪಳ ಮತ್ತು , ಹಾವೇರಿ ತಲಾ  1 ಕೇಸ್ ಪತ್ತೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com