ಮಂಗಳೂರು ಪೋಲೀಸ್ ಫೈರಿಂಗ್: ಚಾರ್ಜ್ ಶೀಟ್ ಸಲ್ಲಿಕೆಯಾಗಿ ವಾರದ ನಂತರ ಪೋಲೀಸ್ ಆಯುಕ್ತ ಹರ್ಷ ವರ್ಗಾವಣೆ

ಡಿಸೆಂಬರ್ 19, 2019 ರಂದು ನಡೆದ ಮಂಗಳೂರು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ ಒಂದು ವಾರದ ನಂತರ ನಗರ ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ಅವರನ್ನು ವರ್ಗಾವಣೆ ಮಾಡಲಾಗಿದೆ.   ಸಿಎಎ ವಿರೋಧಿ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು. 
ಮಂಗಳೂರು ಪೋಲೀಸ್ ಫೈರಿಂಗ್: ಚಾರ್ಜ್ ಶೀಟ್ ಸಲ್ಲಿಕೆಯಾಗಿ ವಾರದ ನಂತರ ಪೋಲೀಸ್ ಆಯುಕ್ತ ಹರ್ಷ ವರ್ಗಾವಣೆ

ಮಂಗಳೂರು: ಡಿಸೆಂಬರ್ 19, 2019 ರಂದು ನಡೆದ ಮಂಗಳೂರು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ ಒಂದು ವಾರದ ನಂತರ ನಗರ ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ಅವರನ್ನು ವರ್ಗಾವಣೆ ಮಾಡಲಾಗಿದೆ.   ಸಿಎಎ ವಿರೋಧಿ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು. 

ಪೋಲೀಸರ ಮಿತಿ ಮೀರಿದ ವರ್ತನೆ ಸಂಬಂಧ ಕಮಿಷನರ್ ಹರ್ಷ ಅವರ ಮೇಲೆ ಆರೋಪ ಕೇಳಿಬಂದಿತ್ತು. ಪ್ರತಿಪಕ್ಷಗಳು ಮತ್ತು ಹಲವಾರು ಸಂಘಟನೆಗಳು ಅವರ ವರ್ಗಾವಣೆಗೆ ಆಗ್ರಹಿಸಿದ್ದವು.

ಘಟನೆ ಕುರಿತು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ವಿ ಗೋಪಾಲಗೌಡರ ನೇತೃತ್ವದ ಸಮಿತಿ ನೀಡಿದ ವರದಿಯಲ್ಲಿ, ಪೊಲೀಸ್ ಸಿಬ್ಬಂದಿಯ ಕ್ರಮವು ಅವರ ಅಧಿಕಾರಗಳ ಮಿತಿಯನ್ನು ಉಲ್ಲಂಘಿಸಿದೆ ಎನಿಸುತ್ತಿದೆ ಆದರೆ ಘಟನೆಯ ತನಿಖೆಗಾಗಿ ನ್ಯಾಯಾಂಗ ತನಿಖಾ ಆಯೋಗ ರಚಿಸಬೇಕು ಎಂದು ಒತ್ತಾಯಿಸಿದೆ.

ಘಟನೆಗೆ ಸಂಬಂಧಿಸಿದಂತೆ ಹರ್ಷ ಅವರ ಹಲವಾರು ಕ್ರಮಗಳು ಮತ್ತು ಹೇಳಿಕೆಗಳು ತನಿಖೆಗೆ ಒಳಗಾಗಿದ್ದು ನಿರ್ದಿಷ್ಟ ಸಮುದಾಯದ ವಿರುದ್ಧ ಪಕ್ಷಪಾತ ತೋರಿದೆಟನೆಗೆ ಸಂಬಂಧಿಸಿದ ಕೆಲವು ಎಫ್‌ಐಆರ್‌ಗಳಲ್ಲಿ, ಅಪರಿಚಿತ ಆರೋಪಿಗಳನ್ನು 'ಮುಸ್ಲಿಮರು' ಎಂದು ಹೆಸರಿಸಲಾಗಿದೆ.

ಬಂದರಿನ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಶಸ್ತ್ರಾಸ್ತ್ರ ಸಮೇತ ಅಂಗಡಿಗಳಿಗೆ ನುಗ್ಗಿದವರ ಮೇಲೆ  ಗುಂಡು ಹಾರಿಸುವುದನ್ನು ಬಿಟ್ಟು ಪೊಲೀಸರಿಗೆ ಬೇರೆ ದಾರಿ ಇರಲಿಲ್ಲ ಎಂದು  ಹರ್ಷ ಈ ಹಿಂದೆ ಸ್ಪಷ್ಟಪಡಿಸಿದ್ದರು. ಆದಾಗ್ಯೂ, ಘಟನೆಯ ನಂತರ ವರದಿಗಾರರು ಸ್ಥಳಕ್ಕೆ ಭೇಟಿ ನೀಡಿದಾಗ ಅವಾವುದೂ ನಿಜವೆಂದು ಕಂಡುಬಂದಿರಲಿಲ್ಲ. ಕಲ್ಲು ಮತ್ತು ಮಾರಕ ಆಯುಧಗಳಿಂದ ಶಸ್ತ್ರಸಜ್ಜಿತವಾದ 7,000 ಕ್ಕೂ ಹೆಚ್ಚು ಪ್ರತಿಭಟನಾಕಾರರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ, ಸ್ಥಳದಿಂದ  ತರಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಸ್ಥಳದಲ್ಲಿದ್ದ ಜನರ ಸಂಖ್ಯೆ ಹರ್ಷ ಹೇಳಿದ ನಾಲ್ಕನೇ ಒಂದಂಶ ಸಹ ಇರಲಿಲ್ಲ.

ಇದಲ್ಲದೆ ಘಟನೆ ಬಗ್ಗೆ ಸಮರ್ಥನೆ ಮಾಡಿಕೊಳ್ಳಲು ಅಂದು ಸ್ಥಳಕ್ಕೆ ಆಗಮಿಸಿದ್ದ ಕೇರಳ ಪತ್ರಕರ್ತರನ್ನು  ಹರ್ಷ ಅವರು 'ಸಮಾಜ ವಿರೋಧಿ' ಗಳೆಂದು ಕರೆದಿದ್ದರು. ಹಲವಾರು ಸುತ್ತಿನ ಗುಂಡಿನ ದಾಳಿಯ ಹೊರತಾಗಿಯೂ ಯಾರೂ ಯಾಕೆ ಕೊಲ್ಲಲ್ಪಟ್ಟಿಲ್ಲ ಎಂದು ಇನ್ಸ್ಪೆಕ್ಟರ್ ತನ್ನ ಸಹೋದ್ಯೋಗಿಗಳನ್ನು ಕೇಳುವ ವಿಡಿಯೋ ತುಣುಕೂ ಸಹ ಗುಂಡಿನ ದಾಳಿ ಹಿಂದಿನ ಪೊಲೀಸರ ಉದ್ದೇಶದ ಬಗ್ಗೆ ಅನುಮಾನ ಹುಟ್ಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com