ಆನ್ ಲೈನ್ ಕ್ಲಾಸ್ ಹೇಗೆ ಮಾಡಬೇಕು?: ಶಿಕ್ಷಣ ಇಲಾಖೆಗೆ ಸಮೀಕ್ಷಾ ವರದಿ ಸಲ್ಲಿಸಿದ ಬಿಎಸ್ ಸಿ

ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾಗದಿರುವುದರಿಂದ ಆನ್ ಲೈನ್ ನಲ್ಲಿ ಮಕ್ಕಳಿಗೆ ಯಾವ ರೀತಿ ಪಾಠ ಮಾಡಬಹುದು ಎಂದು ಬೆಂಗಳೂರು ಸ್ಟೂಡೆಂಟ್ ಕಮ್ಯೂನಿಟಿ ಶಿಕ್ಷಣ ಇಲಾಖೆಗೆ ಪತ್ರ ಬರೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾಗದಿರುವುದರಿಂದ ಆನ್ ಲೈನ್ ನಲ್ಲಿ ಮಕ್ಕಳಿಗೆ ಯಾವ ರೀತಿ ಪಾಠ ಮಾಡಬಹುದು ಎಂದು ಬೆಂಗಳೂರು ಸ್ಟೂಡೆಂಟ್ ಕಮ್ಯೂನಿಟಿ ಶಿಕ್ಷಣ ಇಲಾಖೆಗೆ ಪತ್ರ ಬರೆದಿದೆ.

ಬೆಂಗಳೂರು ಸ್ಟೂಡೆಂಟ್ ಕಮ್ಯೂನಿಟಿ ಈ ಸಂಬಂಧ ನಗರದಲ್ಲಿ ಸಮೀಕ್ಷೆ ನಡೆಸಿ 23 ಸಾವಿರ ಮಂದಿಯಿಂದ ಪ್ರತಿಕ್ರಿಯೆ ಪಡೆದಿತ್ತು. ಆನ್ ಲೈನ್ ತರಗತಿಗಳಿಂದ ಎದುರಾಗುತ್ತಿರುವ ಸಮಸ್ಯೆಗಳೇನು, ಮಾನಸಿಕ ತೊಂದರೆಗಳೇನು ಮತ್ತು ಪ್ರವೇಶ ಹಾಗೂ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಸಮೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳಲಾಗಿತ್ತು.

ಆನ್ ಲೈನ್ ತರಗತಿಗಳಿಗೆ ಭಾಗಿಯಾಗಲು ತಮ್ಮಲ್ಲಿ ಅದಕ್ಕೆ ಪೂರಕವಾದ ಸಾಧನಗಳು, ತಂತ್ರಜ್ಞಾನಗಳಿಲ್ಲ, ಇಂಟರ್ನೆಟ್ ಸಮಸ್ಯೆಯಿದೆ ಎಂದು ಶೇಕಡಾ 77ರಷ್ಟು ಮಂದಿ ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದ್ದಾರೆ. ಅದರ ಬದಲು ಮಾಹಿತಿಗಳನ್ನು ಹೊಂದಿದ ಅಧ್ಯಯನ ವಸ್ತುಗಳು, ವರ್ಕ್ ಶೀಟ್ ಗಳು ಮತ್ತು ಪ್ರತಿ ಶಿಕ್ಷಣ ಸಂಸ್ಥೆಯ ಸಂಪನ್ಮೂಲಗಳು ಮಕ್ಕಳಿಗೆ ಸಿಗುವಂತಾಗಬೇಕು ಎಂದು ಹೇಳಿದೆ. ಕೆಲವು ಶಿಕ್ಷಕರಿಗೆ ಆನ್ ಲೈನ್ ಕ್ಲಾಸ್ ಗಳನ್ನು ನಡೆಸಲು ಸರಿಯಾದ ಮಾಹಿತಿ ಇರುವುದಿಲ್ಲ, ಅಂಥವರಿಗೆ ಮೌಕಿಕ ತರಬೇತಿ ಕೊಡಿಸಬೇಕು ಎಂದು ಸಹ ಶಿಕ್ಷಕರು ಹೇಳಿದ್ದಾರೆ.

ನಿನ್ನೆ ಈ ಸಮೀಕ್ಷೆಯನ್ನು ಶಿಕ್ಷಣ ಇಲಾಖೆಯ ಆನ್ ಲೈನ್ ಶಿಕ್ಷಣ ಅಡಿಯಿರುವ ಸಮಗ್ರ ಶಿಕ್ಷಣ ಕರ್ನಾಟಕ ಮುಂದೆ ಮಂಡಿಸಲಾಗಿದೆ. ನಾವು ನೀಡಿದ ವರದಿಯನ್ನು ಒಪ್ಪಿ ಮುಂದಿನ ವಿಶ್ಲೇಷಣೆಗೆ ಶಿಕ್ಷಣ ಇಲಾಖೆಗೆ ಕಳುಹಿಸುತ್ತಾರೆ ಎಂದು ಬೆಂಗಳೂರು ಸ್ಟೂಡೆಂಟ್ ಕಮ್ಯೂನಿಟಿಯ ಸದಸ್ಯ ಧ್ರುವ ಜಟ್ಟಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com