ಕೋವಿಡ್ ಹೆಚ್ಚಳ ಹಿನ್ನೆಲೆ; ಜಯದೇವ ಆಸ್ಪತ್ರೆಯ ಹೊರರೋಗಿ ವಿಭಾಗ ಬಂದ್

ಬೆಂಗಳೂರು ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸ್ಪತ್ರೆಯ ಹೊರರೋಗಿ ವಿಭಾಗವನ್ನು ಜುಲೈ 4ರವರೆಗೆ ಮುಚ್ಚಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸ್ಪತ್ರೆಯ ಹೊರರೋಗಿ ವಿಭಾಗವನ್ನು ಜುಲೈ 4ರವರೆಗೆ ಮುಚ್ಚಲಾಗಿದೆ.

ಕೆಲ ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ಕಂಡುಬಂದಿದ್ದರಿಂದ, ಹೊರರೋಗಿ ವಿಭಾಗವನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.

ಆದರೆ, ತುರ್ತು ಸೇವೆಗಳು ದಿನದ 24 ಗಂಟೆಗಳು ತೆರೆದಿರಲಿದ್ದು, ಟೆಲಿಮೆಡಿಸಿನ್‌ ಕೂಡ ಲಭ್ಯವಿರಲಿದೆ. ತಪಾಸಣೆ ಅಗತ್ಯವಿರುವ ರೋಗಿಗಳು 080-22977400, 267, 433, 456ಗೆ ಕರೆ ಮಾಡಿ ಸಂಬಂಧಪಟ್ಟ ವೈದ್ಯರ ಸಮಯವನ್ನು ನಿಗದಿಪಡಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com