ಬೆಂಗಳೂರಿನಲ್ಲಿ ಮತ್ತೋರ್ವ ಎಎಸ್ಐ ಬಲಿ ಪಡೆದ ಕೊರೊನಾ

ಸಿಲಿಕಾನ್ ಸಿಟಿ ಪೊಲೀಸರನ್ನು ಬೆಂಬಡದೇ ಬೇತಾಳದಂತೆ ಕಾಡುತ್ತಿರುವ ಕೊರೊನಾ, ಇದೀಗ ಮತ್ತೋರ್ವ ಎಎಸ್ ಐ ಯನ್ನು ಬಲಿ ಪಡೆದುಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿ ಪೊಲೀಸರನ್ನು ಬೆಂಬಡದೇ ಬೇತಾಳದಂತೆ ಕಾಡುತ್ತಿರುವ ಕೊರೊನಾ, ಇದೀಗ ಮತ್ತೋರ್ವ ಎಎಸ್ ಐ ಯನ್ನು ಬಲಿ ಪಡೆದುಕೊಂಡಿದೆ.

ಈ ಮೂಲಕ ಕೋವಿಡ್-19 ಗೆ ಬಲಿಯಾದ ಪೊಲೀಸರ ಸಂಖ್ಯೆ 5ಕ್ಕೆ ಏರಿಕೆ ಆಗಿದೆ. ನಗರದ ವೈಟ್ ಫೀಲ್ಡ್ ನ‌ 57 ವರ್ಷದ ಎಎಸ್ಐ ಕೊರೊನಾಗೆ ಬಲಿಯಾಗಿದ್ದಾರೆ.

ಶನಿವಾರ ರಾತ್ರಿ ಅವರು ಏಕಾಏಕೀ ಮನೆಯ ಶೌಚಾಲಯ ಕೋಣೆಯಲ್ಲಿ ಕುಸಿದುಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ತಪಾಸಣೆ ಮಾಡಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com