ಇವರು ವಿದ್ಯಾರ್ಥಿಗಳ ಪಾಲಿಗೆ 'ಸ್ವಾಮಿ';ಲಾಕ್ ಡೌನ್ ಸಮಯದಲ್ಲಿ ಮಕ್ಕಳ ಮನೆ ಮನೆಗೆ ಹೋಗಿ ಪಾಠ ಮಾಡಿದ ಶಿಕ್ಷಕ!

ಈ ವರ್ಷ ಕೋವಿಡ್-19ನಿಂದ ಮನುಷ್ಯನ ಜೀವನ ರೀತಿಯೇ ಕಳೆದ ಮೂರು ತಿಂಗಳಿನಿಂದ ಬದಲಾಗಿದೆ ಎನ್ನಬಹುದು. ಇನ್ನು ಲಾಕ್ ಡೌನ್ ಕಾರಣದಿಂದ ಮಾರ್ಚ್ 25ರಂದು ಶಾಲಾ-ಕಾಲೇಜುಗಳು ಹಠಾತ್ತನೆ, ಅರ್ಧಕ್ಕೆ ನಿಂತುಹೋಯಿತು. ಆಗುತ್ತಿದ್ದ ಪರೀಕ್ಷೆಗಳು ರದ್ದಾದವು.
ಬಾಗಿಲು ಹಾಕಿರುವ ಅಂಗಡಿಯೊಂದರ ಮುಂದೆ ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕ ಸ್ವಾಮಿ ಎಸ್ ಎಂ
ಬಾಗಿಲು ಹಾಕಿರುವ ಅಂಗಡಿಯೊಂದರ ಮುಂದೆ ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕ ಸ್ವಾಮಿ ಎಸ್ ಎಂ

ಚಿತ್ರದುರ್ಗ;ಈ ವರ್ಷ ಕೋವಿಡ್-19ನಿಂದ ಮನುಷ್ಯನ ಜೀವನ ರೀತಿಯೇ ಕಳೆದ ಮೂರು ತಿಂಗಳಿನಿಂದ ಬದಲಾಗಿದೆ ಎನ್ನಬಹುದು. ಇನ್ನು ಲಾಕ್ ಡೌನ್ ಕಾರಣದಿಂದ ಮಾರ್ಚ್ 25ರಂದು ಶಾಲಾ-ಕಾಲೇಜುಗಳು ಹಠಾತ್ತನೆ, ಅರ್ಧಕ್ಕೆ ನಿಂತುಹೋಯಿತು. ಆಗುತ್ತಿದ್ದ ಪರೀಕ್ಷೆಗಳು ರದ್ದಾದವು.

ಆಗ ಈ ಶಿಕ್ಷಕ ಮಾತ್ರ ಶಾಲೆ ನಿಂತು ಹೋಯಿತು, ಮಕ್ಕಳಿಗೆ ರಜೆ ಸಿಕ್ಕಾಯಿತು ಎಂದು ತಮ್ಮ ಪಾಡಿಗೆ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಚಿತ್ರದುರ್ಗ ಜಿಲ್ಲೆಯ ಮಾದನಾಯಕನಹಳ್ಳಿ ಪಟೇಲ್ ಬಸಣ್ಣ ಹೈಸ್ಕೂಲ್ ನ ಶಿಕ್ಷಕ ಮೃತ್ಯುಂಜಯ ಸ್ವಾಮಿ ಎಸ್ ಎಂ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಪಾಠ ಹೇಳಿಕೊಟ್ಟಿದ್ದಾರೆ. ಕೊರೋನಾ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಯಾನಿಟೈಸರ್ ಬಳಸಿ ಶುಚಿತ್ವ ಕಾಪಾಡುತ್ತಾ ತಮ್ಮ ಕಾಯಕವನ್ನು ಮೃತ್ಯುಂಜಯ ಸ್ವಾಮಿ ಮುಂದುವರಿಸಿದ್ದಾರೆ.

ಅದು ನ್ಯೂಟನ್ ನ ಲಾ ಥಿಯರಿಯಾಗಿರಬಹುದು ಅಥವಾ ಆವರ್ತಕ ಕೋಷ್ಠಕವಾಗಿರಲಿ ಮಕ್ಕಳಿಗೆ ಏನೇ ಸಂಶಯಗಳಿದ್ದರೂ ಅಲ್ಲಿಗೆ ಹೋಗಿ ಈ ಶಿಕ್ಷಕ ಮಕ್ಕಳ ಸಂಶಯ ಬಗೆಹರಿಸಲು ಇದ್ದಾರೆ. ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರಗಳನ್ನು ಮಕ್ಕಳಿಗೆ ಹೇಳಿಕೊಡುತ್ತಾರೆ. ಮಾಡನಾಯಕನಹಳ್ಳಿ ಮಾತ್ರವಲ್ಲದೆ ಹುಣಸೆಕಟ್ಟೆ, ಚಿಕ್ಕಪ್ಪನಹಳ್ಳಿ ಮತ್ತು ಬಂಗಾರಕ್ಕನಹಳ್ಳಿ ಗ್ರಾಮಗಳಿಗೆ ಹೋಗಿ ಅಲ್ಲಿನ ಮಕ್ಕಳಿಗೆ ಸಹ ಪಾಠ ಮಾಡುತ್ತಾರೆ.

ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯ ಜಂಟಿ ನಿರ್ದೇಶಕಿ ಪ್ರತಿಮಾ ಅವರ ಮಾತುಗಳು ನನಗೆ ಬಹಳ ಹಿಡಿಸಿದವು. ಅವರು ಇಂದು ಇಲ್ಲ, ಆದರೂ ಅವರು ಹೇಳಿದ್ದ ಗ್ರಾಮೀಣ ಭಾಗಗಳ ಮಕ್ಕಳನ್ನು ಉದ್ಧಾರ ಮಾಡಬೇಕೆಂಬ ಮಾತುಗಳು ನನಗೆ ಪ್ರೋತ್ಸಾಹ, ಉತ್ಸಾಹ ನೀಡಿದವು.ಅವರು ನಮ್ಮ ಶಾಲೆಗೆ ಬಂದಾಗಲೆಲ್ಲ ನೀವು ತೆಗೆದುಕೊಳ್ಳುವ ಸಂಬಳಕ್ಕೆ ನ್ಯಾಯ ಒದಗಿಸುತ್ತಿದ್ದೀರಿ ಎಂದು ಅನಿಸುತ್ತಿದ್ದೆಯೇ ಎಂದು ಯೋಚನೆ ಮಾಡಿ, ಇಲ್ಲದಿದ್ದರೆ ನಿಮ್ಮಷ್ಟಕ್ಕೆ ಆತ್ಮಾವಲೋಕನ ಮಾಡಿಕೊಂಡು ಮಕ್ಕಳಿಗೆ ಪಾಠ ಮಾಡಿ ಎಂದು ಹೇಳುತ್ತಿದ್ದರು ಎನ್ನುತ್ತಾರೆ ಮೃತ್ಯುಂಜಯ ಸ್ವಾಮಿ.

ಸ್ವಾಮಿಯವರು ವಿದ್ಯಾರ್ಥಿಗಳಿಗೆ ಸೃಜನಾತ್ಮಕವಾಗಿ ಪಾಠ ಮಾಡುತ್ತಾರೆ, ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ಬಳಸಿಕೊಂಡು, ಮನೆಯಲ್ಲಿರುವ ಉಪಕರಣಗಳಿಂದ ಪ್ರಾಯೋಗಿಕವಾಗಿ ಹೇಳಿಕೊಡುವುದೆಂದರೆ ಅವರ ಪಾಠಗಳು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಬಹಳ ಅಚ್ಚುಮೆಚ್ಚು. ಲ್ಯಾಬ್ ಪ್ರಯೋಗಗಳು, ವಿಡಿಯೊ ಮತ್ತು ದೃಶ್ಯ ಮಾಧ್ಯಮಗಳ ಸಹಾಯದಿಂದ ಗಣಿತ, ವಿಜ್ಞಾನದ ವಿಷಯಗಳನ್ನು ಆಸಕ್ತಿದಾಯಕವಾಗಿ ಹೇಳಿಕೊಡುತ್ತಾರೆ. ಅದರೊಟ್ಟಿಗೆ ವಾರದ ಕೊನೆಗೆ ರಸಪ್ರಶ್ನೆ, ಅಣಕು ಪರೀಕ್ಷೆಗಳನ್ನು ಮಾಡುತ್ತಾರೆ.

ದೃಗ್ವಿಜ್ಞಾನ, ನ್ಯೂಟನ್‌ನ ಸಾರ್ವತ್ರಿಕ ಗುರುತ್ವಾಕರ್ಷಣೆಯ ನಿಯಮ ಮತ್ತು ಕೆಲವು ರಸಾಯನಶಾಸ್ತ್ರ ವಿಷಯಗಳಲ್ಲಿ ನಾನು ದುರ್ಬಳಲಾಗಿದ್ದೆ. ಇಂದು ನನಗೆ ಸ್ವಾಮಿ ಸರ್ ಹೇಳಿಕೊಟ್ಟಿದ್ದರಿಂದ ಸುಲಭವಾಗುತ್ತಿದೆ ಎಂದು ಚಿಕ್ಕಪ್ಪನಹಳ್ಳಿ ವಿದ್ಯಾರ್ಥಿನಿ ಅನುಷಾ ಹೆಚ್ ಹೇಳುತ್ತಾಳೆ. ಅವರ ಕೋಚಿಂಗ್ ಪಡೆದು ಈ ಬಾರಿ 24 ಮಕ್ಕಳು ಎಸ್ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದಾರೆ.

ಸ್ವಾಮಿಯವರು ಸತತ 12 ಗಂಟೆಗಳ ಕಾಲ ಮಕ್ಕಳಿಗೆ ಲಾಕ್ ಡೌನ್ ಸಮಯದಲ್ಲಿ ಉಚಿತವಾಗಿ ಹೇಳಿಕೊಟ್ಟಿದ್ದಾರೆ. ಕೋವಿಡ್-19 ಮಧ್ಯೆ ಪ್ರತಿದಿನ 30ರಿಂದ 40 ಕಿಲೋ ಮೀಟರ್ ಓಡಾಡಿ ಮಕ್ಕಳಿಗೆ ಮನೆ ಮನೆಗಳಲ್ಲಿ ಪಾಠ ಮಾಡಿದ್ದಾರೆ. ಆರಂಭದ ದಿನಗಳಲ್ಲಿ ಪೊಲೀಸರು ಚೆಕ್ ಪಾಯಿಂಟ್ ಗಳಲ್ಲಿ ತಡೆದು ನಿಲ್ಲಿಸುತ್ತಿದ್ದರಂತೆ. ಮಕ್ಕಳಿಗೆ ಪಾಠ ಮಾಡಲು ಹೋಗುತ್ತಿದ್ದೇನೆ ಎಂದಾಗ ಬಿಡುತ್ತಿದ್ದರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com