ಮಾಸ್ಕ್ ಹಾಕಿಲ್ಲ ಎಂದರೆ ಬೀಳುತ್ತೆ ಕ್ರಿಮಿನಲ್ ಕೇಸು ಜೋಕೆ!

ಬೆಂಗಳೂರು ನಗರದಲ್ಲಿ ಇನ್ನು ಸಾರ್ವಜನಿಕವಾಗಿ ಸಂಚಾರ ಮಾಡುವಾಗ ಕಡ್ಡಾಯವಾಗಿ ಮಾಸ್ಕ್ ಹಾಕಬೇಕು ಇಲ್ಲವಾದರೆ ಕ್ರಿಮಿನಲ್ ಪ್ರಕರಣ ಎದುರಿಸಬೇಕಾಗುತ್ತದೆ ಎಚ್ಚರ!
ಭಾಸ್ಕರ್ ರಾವ್
ಭಾಸ್ಕರ್ ರಾವ್

ಬೆಂಗಳೂರು: ಬೆಂಗಳೂರು ನಗರದಲ್ಲಿ ಇನ್ನು ಸಾರ್ವಜನಿಕವಾಗಿ ಸಂಚಾರ ಮಾಡುವಾಗ ಕಡ್ಡಾಯವಾಗಿ ಮಾಸ್ಕ್ ಹಾಕಬೇಕು ಇಲ್ಲವಾದರೆ ಕ್ರಿಮಿನಲ್ ಪ್ರಕರಣ ಎದುರಿಸಬೇಕಾಗುತ್ತದೆ ಎಚ್ಚರ!

ಮಾಸ್ಕರ್ ಕಡ್ಡಾಯ ಜಾರಿಗಾಗಿ ಇನ್ನು ಮುಂದೆ ಮಾರ್ಷೆಲ್ ಗಳಿಗೆ ಪೊಲೀಸರು ಸಾಥ್ ಕೊಡಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ. ಅಷ್ಟೆ ಅಲ್ಲ ಡಿಸಿಪಿಗಳು ಸಹ ಖುದ್ದಾಗಿ ಫೀಲ್ಡಿಗಿಳಿಯಲಿದ್ದಾರೆ ಎಂದು ಎಚ್ಚರಿಸಿದರು. 

ಒಂದು ವೇಳೆ ಮಾಸ್ಕ್ ಹಾಕದಿದ್ದರೆ ರೆ ಅಂತಹವರ ವಿರುದ್ದ ಕ್ಕಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುತ್ತದೆ ಎಂದೂ ಎಚ್ಚರಿಸಿದ್ದಾರೆ. 

ಕರೋನಾ ನಿಯತ್ರಣ ಮಾಡಲು ಬೆಂಗಳೂರು ಜನತೆ ಮಾಸ್ಕ್ ಧರಿಸಲೇ ಬೇಕು ಒಂದು ವೇಳೆ ಆ ವಿಚಾರವಾಗಿ ವಾದ ಮಾಡಿದರೆ 100 ಕಾಲ್ ಮಾಡಿ ದೂರು ನೀಡಬಹುದಾಗಿದೆ ಎಂದು ಸೂಚನೆ ಕೊಡಲಾಗಿದೆ ಎಂದರು. ಮಾಸ್ಕ್ ಇಲ್ಲ ದವರಿಗೆ ಮಾಸ್ಕ್ ವಿತರಕರು ಮಾಸ್ಕ್ ನೀಡುವಂತೆಯೂ ಅವರು ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com