ಚಿನ್ನಸ್ವಾಮಿ ಕ್ರೀಡಾಂಗಣ ಬಾಂಬ್‌ ಸ್ಫೋಟ ಪ್ರಕರಣ, ಇಬ್ಬರು ಅಪರಾಧಿಗಳಿಗೆ 8 ವರ್ಷ ಜೈಲುಶಿಕ್ಷೆ

ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತಪ್ಪನ್ನು ಒಪ್ಪಿಕೊಂಡಿದ್ದ ಇಬ್ಬರು ಆರೋಪಿಗಳಿಗೆ  8 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಎನ್​ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ. 
ಚಿನ್ನಸ್ವಾಮಿ ಕ್ರೀಡಾಂಗಣ ಬಾಂಬ್‌ ಸ್ಫೋಟ
ಚಿನ್ನಸ್ವಾಮಿ ಕ್ರೀಡಾಂಗಣ ಬಾಂಬ್‌ ಸ್ಫೋಟ

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತಪ್ಪನ್ನು ಒಪ್ಪಿಕೊಂಡಿದ್ದ ಇಬ್ಬರು ಆರೋಪಿಗಳಿಗೆ  8 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಎನ್​ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ. 

ಅಹಮ್ಮದ್‌ ಜಮಾಲ್‌ ಮತ್ತು ಆಫ್ತಾಬ್‌ ಆಲಮ್‌ ಅಲಿಯಾಸ್‌ ಫಾರೂಕ್ ಅವರುಗಳಿಗೆ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ ಮಾತ್ರವಲ್ಲದೆ  4 ಲಕ್ಷ ರೂ. ದಂಡ ಸಹ ವಿಧಿಸಿದೆ.

ಸೋಮವಾರ ಈ ಇಬ್ಬರೂ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು ಮಂಗಳವಾರ ಶಿಕ್ಷೆ ಪ್ರಕಟವಾಗಿದೆ. 

ವಿಶೇಷ ನ್ಯಾಯಾಲಯ ನ್ಯಾಯಾಧೀಶ ವೆಂಕಟೇಶ್‌ ಆರ್‌. ಹುಲಗಿ ಈ ತೀರ್ಪು ನೀಡಿದ್ದಾರೆ. 

ಈ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ನಾಲ್ವರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದು ಅವರಿಗೆ ನ್ಯಾಯಾಲಯ ಏಳು ವರ್ಷ ಜೈಲುಶಿಕ್ಷೆ ವಿಧಿಸಿ 2018ರಲ್ಲಿ ತೀರ್ಪು ನೀಡಿತ್ತು.  ಇದುವರೆಗೆ 6 ಆರೋಪಿಗಳಿಗೆ ಶಿಕ್ಷೆಯಾಗಿದ್ದು ಇನ್ನೂ ನಾಲ್ವರ ವಿರುದ್ಧ ಸಿಸಿಬಿ ತನಿಖೆ ನಡೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com