ದುರ್ಬಲ ಆರೋಗ್ಯ ವ್ಯವಸ್ಥೆ: ರಾಜ್ಯಾದ್ಯಂತ ಅನಾರೋಗ್ಯದಿಂದ ಬಳಲುತ್ತಿರುವವರ ಸೇವೆಗೆ ಬೇಕು ಹೆಚ್ಚೆಚ್ಚು ಐಸಿಯು!

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಹಾಗೂ ಇತರ ರೋಗಿಗಳಿಗೆ ಹಾಸಿಗೆ ಇಲ್ಲ ಎಂದು ಹೇಳುತ್ತಿರುವುದು ರಾಜ್ಯದ ಆರೋಗ್ಯ ವ್ಯವಸ್ಥೆಯ ನೈತಿಕ ಅಧಃಪತನದ ಹಾದಿಯನ್ನು ತೋರಿಸುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಹಾಗೂ ಇತರ ರೋಗಿಗಳಿಗೆ ಹಾಸಿಗೆ ಇಲ್ಲ ಎಂದು ಹೇಳುತ್ತಿರುವುದು ರಾಜ್ಯದ ಆರೋಗ್ಯ ವ್ಯವಸ್ಥೆಯ ನೈತಿಕ ಅಧಃಪತನದ ಹಾದಿಯನ್ನು ತೋರಿಸುತ್ತಿದೆ. ಇಂತಹ ಪರಿಸ್ಥಿತಿಯು ಕೆಲ ರೋಗಿಗಳ ಸಾವಿಗೂ ಕಾರಣವಾಗುತ್ತಿದ್ದು, ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. 

ಭಾನುವಾರ ಉಸಿರಾಟದ ತೊಂದರೆಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.ಸುಮಾರು 9 ಗಂಟೆಯ ಅವಧಿಯಲ್ಲಿ 30 ಆಸ್ಪತ್ರೆಗಳಿಗೆ ಅಲೆದಾಡಿದ್ದೇವೆ. ಆದರೂ  ಹಾಸಿಗೆ ಇಲ್ಲ ಎಂದು ಹೇಳಿ ಕಳುಹಿಸಲಾಯಿತು ಎಂದು ಆತನ ಸಂಬಂಧಿಕರು ರಾಜ್ಯದ ಆರೋಗ್ಯ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಸೋಮವಾರ ಮುಂಜಾನೆ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಲು ಮೂರು ಆಸ್ಪತ್ರೆಗಳು ನಿರಾಕರಿಸಿದ ವಿಷಯವನ್ನು ಮೃತ ವ್ಯಕ್ತಿಯ ಕುಟುಂಬ ಸದಸ್ಯರು ತಿಳಿಸಿದ್ದಾರೆ. 

52 ವರ್ಷದ ತನ್ನ ಸಂಬಂಧಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು ನಗರ್ತಪೇಟೆಯ ದಿನೇಶ್ ಜೈನ್ ಎಂಬವರು 12 ಗಂಟೆ ಕಾಲ ಅಲೆದಾಡಿ 50 ಖಾಸಗಿ ಆಸ್ಪತ್ರೆಗಳ ಮೆಟ್ಟಿಲು ಹತ್ತಿದ್ದಾರೆ.ಆದರೆ, ಎಲ್ಲಾ ಆಸ್ಪತ್ರೆಗಳು ಹಾಸಿಗೆ ಇಲ್ಲ ಎಂದು ಹೇಳಿ ಕೈ ಚೆಲ್ಲಿವೆ. ಇದರಿಂದಾಗಿ ದಿನೇಶ್ ಅಂಕಲ್ ಭಾನುವಾರ ಮೃತಪಟ್ಟಿದ್ದಾರೆ. 

ಶನಿವಾರ ಸಂಜೆ ತಮ್ಮ ಅಂಕಲ್ ಗೆ ಉಸಿರಾಟದ ತೊಂದರೆ ಆದಾಗ ಕೂಡಲೇ 30 ಖಾಸಗಿ ಆಸ್ಪತ್ರೆಗಳಿಗೆ ದೌಡಾಯಿಸಿದ್ದೇವು. ಆದರೆ, ಅವರೆಲ್ಲರೂ ಹಾಸಿಗೆ ಇಲ್ಲ ಎಂದು ಹೇಳಿದರು. 50 ಆಸ್ಪತ್ರೆಗಳಿಗೆ ಕರೆ ಮಾಡಿ ಚಿಕಿತ್ಸೆ ನೀಡುವಂತೆ ಕೇಳಿಕೊಂಡರೂ ಯಾರು ಕರುಣೆ ತೋರಿಸಲಿಲ್ಲ, ಮಾರನೇ ದಿನ ಸರ್ಕಾರಿ ಆಸ್ಪತ್ರೆಗೆ  ಕರೆದೊಯ್ದರೂ ಅಲ್ಲಿಯೂ ಚಿಕಿತ್ಸೆ ನೀಡಲಿಲ್ಲ. ಪರಿಣಾಮ ನಮ್ಮ ಅಂಕಲ್ ಅಂಬ್ಯುಲೆನ್ಸ್ ನಲ್ಲಿಯೇ ಮೃತಪಟ್ಟರು ಎಂಬುದಾಗಿ ದಿನೇಶ್ ಜೈನ್ ಹೇಳಿದ್ದಾರೆ.

ಮತ್ತೊಂದು ಕೇಸಿನಲ್ಲಿ  ಟಿಸಿ ಪಾಳ್ಯದ 65 ವರ್ಷದ ವಿಲ್ಸನ್ ಪೌಲ್ ಎಂಬವರಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೆ ಭಾನುವಾರ ಮೃತಪಟ್ಟಿದ್ದಾರೆ. ಮೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ ಕಾರಣ ತಮ್ಮ ತಂದೆ ಸಾವನ್ನಪ್ಪಿದ್ದರು ಎಂಬುದಾಗಿ ಪೌಲ್ ಪುತ್ರ ಮಾರ್ಕ್ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯೆ ನೀಡಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್, ಕೋವಿಡ್-19 ರೋಗಿಗಳನ್ನು ಆಸ್ಪತ್ರೆಗೆ ರವಾನಿಸಲು ಕಾರ್ಯಪಡೆ ಇದೆ. ಒಂದು ಬಾರಿ ಅವರಿಗೆ ಮಾಹಿತಿ ನೀಡಿದರೆ ಸಾಕು ಅವರು ರೋಗಿಗಳನ್ನು ಕರೆದೊಯ್ಯುತ್ತಾರೆ. 108 ಕರೆ ಕರೆ ಮಾಡಿದರೆ ಸಾಕು ಕೂಡಲೇ ಅಂಬುಲೆನ್ಸ್ ಬರಲಿದೆ. ಕೋವಿಡ್ ಯೇತರ ರೋಗಿಗಳಿಂದ ದೂರುಗಳು ಹೆಚ್ಚಾಗಿ ಬರುತ್ತಿದ್ದು, ಚಿಕಿತ್ಸೆ 
ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಬೆಂಗಳೂರಿನ ಪ್ರದರ್ಶನಾ ಕೇಂದ್ರದಲ್ಲಿ 7 ಸಾವಿರ ಹಾಸಿಗೆವುಳ್ಳು ಕೋವಿಡ್ ಕೇರ್ ಸೆಂಟರ್ ಸ್ಥಾಪನೆಗೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ನಿರ್ದೇಶನ ನೀಡಿದ್ದಾರೆ. ಅರಮನೆ ಮೈದಾನದ ತ್ರಿಪುರಾ ವಾಸಿನಿಯಲ್ಲಿ 3 ಹಾಸಿಗೆ ಸೌಕರ್ಯವನ್ನು  ಕಲ್ಪಿಸಬೇಕು, ಬೆಂಗಳೂರು ವಿಶ್ವವಿದ್ಯಾಲಯದ ಹಾಸ್ಟೆಲ್ ಗಳಲ್ಲಿ 750 ಹಾಸಿಗೆ ವ್ಯವಸ್ಥೆ ಹಾಗೂ ಕೊರಮಂಗಲ ಒಳಾಂಗಣ ಕ್ರೀಡಾಂಗಣ ಮತ್ತು ದಯಾನಂದ ಸಾಗರ ವಿವಿಯಲ್ಲಿ ತಲಾ 250 ಹಾಸಿಗೆ ವ್ಯವಸ್ಥೆಯನ್ನು ಕಲ್ಪಿಸುವಂತೆ ಅವರು ಆದೇಶಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com