ಕೋವಿಡ್-19: ಸೋಂಕಿತರ ಆರೈಕೆಗೆ ಮಾರಾಟವಾಗದ ಬಿಡಿಎ ಫ್ಲ್ಯಾಟ್'ಗಳ ಬಳಕೆ, ಸರ್ಕಾರದ ನಿರ್ಧಾರಕ್ಕೆ ನಿವಾಸಿಗಳ ಬೇಸರ

ಮಾರಾಟವಾಗದೆ ಖಾಲಿ ಉಳಿದಿರುವ ಬಿಡಿಎ ಫ್ಲ್ಯಾಟ್'ಗಳನ್ನು ಕೋವಿಡ್ ಕೇರ್ ಸೆಂಟರ್ ಗಳನ್ನಾಗಿ ಮಾರ್ಪಡಿಸಲು ಮುಂದಾಗಿದ್ದು, ಸರ್ಕಾರ ನಿರ್ಧಾರಕ್ಕೆ ಕೆಲ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಾರಾಟವಾಗದೆ ಖಾಲಿ ಉಳಿದಿರುವ ಬಿಡಿಎ ಫ್ಲ್ಯಾಟ್'ಗಳನ್ನು ಕೋವಿಡ್ ಕೇರ್ ಸೆಂಟರ್ ಗಳನ್ನಾಗಿ ಮಾರ್ಪಡಿಸಲು ಮುಂದಾಗಿದ್ದು, ಸರ್ಕಾರ ನಿರ್ಧಾರಕ್ಕೆ ಕೆಲ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುದಾಕರ್ ಅವರು, ಮಾರಾಟಗೊಳ್ಳದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಫ್ಲ್ಯಾಟ್'ಗಳನ್ನು ಕೊರೋನಾ ಕೇರ್ ಸೆಂಟರ್ ಗಳನ್ನಾಗಿ ಮಾರ್ಪಡಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದರು. 

ನಗದಲ್ಲಿ 2013ರಿಂದ ನಿರ್ಮಾಣಗೊಂಡಿರುವ 10,075 ಫ್ಲ್ಯಾಟ್'ಗಳಲ್ಲಿ  ಇನ್ನೂ 2,283 ನಿವೇಶನಗಳು ಮಾರಾಟಗೊಳ್ಳದೆ ಖಾಲಿ ಉಳಿದಿವೆ. ಫ್ಲ್ಯಾಟ್ ಗಳ ಖರೀದಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಪ್ರಸ್ತುತ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಮಾರಾಟಗೊಳ್ಳದ ಫ್ಲ್ಯಾಟ್'ಗಳನ್ನು ಕೊರೋನಾ ಕೇರ್ ಕೇಂದ್ರಗಳನ್ನಾಗಿ ಮಾರ್ಪಡಿಸಲು ಸರ್ಕಾರ ಮುಂದಾಗಿದೆ. 

ಇನ್ನು ಸರ್ಕಾರದ ಈ ನಿರ್ಧಾರಕ್ಕೆ ಈಗಾಗಲೇ ಬಿಡಿಎ ಫ್ಲ್ಯಾಟ್ಗಳಲ್ಲಿ ನೆಲೆಸಿರುವ ನಿವಾಸಿಗಳು ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದಾರೆ. 

ಬಿಡಿಎ ಫ್ಲ್ಯಾಟ್ ಗಳು ಬಹುಮಹಡಿ ಕಟ್ಟಡಗಳಾಗಿದ್ದು, ಮಾರಾಟಗೊಳ್ಳದೇ ಇರುವ ಇಡೀ ಕಟ್ಟಡಗಳಾವುದೂ ಇಲ್ಲ. ಒಂದು ಫ್ಲ್ಯಾಟ್ ಖಾಲಿಯಿದ್ದಲೆ ಅದೇ ಪಕ್ಕದಲ್ಲಿರುವ ಫ್ಲ್ಯಾಟ್ ನಲ್ಲಿ ಮತ್ತೊಬ್ಬರು ನೆಲೆಯೂರಿರುತ್ತಾರೆ. ಈಗಾಗಲೇ ಕಟ್ಟಡದಲ್ಲಿ ಶೇ.12ರಷ್ಟು ಫ್ಲ್ಯಾಟ್ ಗಳು ನಮ್ಮ ಕಟ್ಟಡದಲ್ಲಿ ಮಾರಾಟಗೊಂಡಿವೆ. ಈಗಾಗಲೇ ಸಾಕಷ್ಟು ಮಂದಿ ನೆಲೆಯೂರಿದ್ದಾರೆ. ಸರ್ಕಾರದ ಇಂತಹ ನಿರ್ಧಾರಕ್ಕೆ ನಾವು ಒಪ್ಪುವುದಿಲ್ಲ ಎಂದು ನಿವಾಸಿಯೊಬ್ಬರು ಹೇಳಿದ್ದಾರೆ. 

ಅಧಿಕಾರಿಯೊಬ್ಬರು ಮಾತನಾಡಿ, ಸರ್ಕಾರ ಈ ನಡೆ ಫ್ಲ್ಯಾಟ್'ಗಳ ಮಾರಾಟದ ಮೇಲೆ ಭಾರೀ ಹೊಡೆತವನ್ನು ನೀಡಲಿದೆ. ಕೋವಿಡ್ ಕೇರ್ ಕೇಂದ್ರಗಳನ್ನಾಗಿ ಮಾರ್ಪಡಿಸಿದ ಬಳಿಕ ಆ ಫ್ಲ್ಯಾಟ್ ಹೊಸದು ಎಂದು ಜನರಿಗೆ ಹೇಗೆ ಮಾರಾಟ ಮಾಡಲು ಸಾಧ್ಯ? ಕೊರೋನಾ ಲಕ್ಷಣ ಇರುವ ಜನರು ಅಲ್ಲಿಗೆ ಬಂದ ಬಳಿಕ ಸಮಸ್ಯೆ ದೊಡ್ಡದಾಗುತ್ತದೆ. ಜನರು ಫ್ಲ್ಯಾಟ್ ಖರೀದಿ ಮಾಡಲು ಮುಂದಕ್ಕೆ ಬರುವುದಿಲ್ಲ. ಕನ್ಮಿನಿಕೆ ಮತ್ತು ಕೊಮ್ಮಘಟ್ಟದಲ್ಲಿರುವ ಫ್ಲ್ಯಾಟ್ ಗಳು ಮಾತ್ರ ಇನ್ನೂ ಮಾರಾಟಗೊಂಡಿಲ್ಲ. ಇದು ನಗರದಿಂದ ಬಹಳ ದೂರದಲ್ಲಿದೆ. ತಾತ್ಕಾಲಿಕ ವಿದ್ಯುತ್ ಸೇವೆಯನ್ನು ಅಲ್ಲಿ ನೀಡಲಾಗಿದ್ದು, ಬೋರ್ವೆಲ್ ನೀರಿನ ಸಂಪರ್ಕ ನೀಡಲಾಗಿದೆ. ದೊಡ್ಡ ಸಂಖ್ಯೆಯಲ್ಲಿ ಜನರು ಫ್ಲ್ಯಾಟ್ ಖರೀದಿ ಮಾಡಿದ ಬಳಿಕ ಅಗತ್ಯ ಸೇವೆಗಳನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com