ಕೊರೋನಾ ಭೀತಿ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆ ಪಡೆಯಲು ಹೋಮಿಯೋಪತಿ ಕೇಂದ್ರಗಳಿಗೆ ಮುಗಿಬೀಳುತ್ತಿರುವ ಜನತೆ!

ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಕೊರೋನಾ ಸೋಂಕು ತಗಲುವ ಭೀತಿಯಿಂದಾಗಿ ಇದೀಗ ಜನರು ಮುಂಜಾಗ್ರತಾ ಕ್ರಮವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮ್ಯಾಜಿಕ್ ಮಾತ್ರೆಗಳ ಪಡೆಯಲು ಹೋಮಿಯೋಪತಿ ಕೇಂದ್ರಗಳಿಗೆ ಮುಗಿಬೀಳುತ್ತಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಕೊರೋನಾ ಸೋಂಕು ತಗಲುವ ಭೀತಿಯಿಂದಾಗಿ ಇದೀಗ ಜನರು ಮುಂಜಾಗ್ರತಾ ಕ್ರಮವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮ್ಯಾಜಿಕ್ ಮಾತ್ರೆಗಳ ಪಡೆಯಲು ಹೋಮಿಯೋಪತಿ ಕೇಂದ್ರಗಳಿಗೆ ಮುಗಿಬೀಳುತ್ತಿದ್ದಾರೆ. 

ರಾಜ್ಯದಲ್ಲಿ ಅದರಲ್ಲೂ ಬೆಂಗಳೂರು ನಗರದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ. ಈಗಾಗಲೇ ಸರ್ಕಾರ ವೈರಸ್ ನಿಯಂತ್ರಿಸಲು ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಉಚಿತವಾಗಿ ಹೋಮಿಯೋಪತಿ ಕೇಂದ್ರಗಳಲ್ಲಿ ಮಾತ್ರೆಗಳನ್ನು ವಿತರಿಸುತ್ತಿದೆ. 

ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗುತ್ತಿರುವ ಜನತೆ ಇದೀಗ ಮಾತ್ರೆಗಳನ್ನು ಪಡೆದುಕೊಳ್ಳುವ ಸಲುವಾಗಿ ಹೋಮಿಯೋಪತಿ ಕೇಂದ್ರಗಳಿಗೆ ತೆರಳಿ ಸರದಿ ಸಾಲಿನಲ್ಲಿ ನಿಂತು ಮಾತ್ರೆ ಪಡೆದುಕೊಳ್ಳುತ್ತಿದ್ದಾರೆ. 

ಆದರೆ ಸರ್ಕಾರಿ ಹೋಮಿಯೋಪತಿ ಕೇಂದ್ರಗಳಲ್ಲಿರುವ ವೈದ್ಯರು ಈ ಹಿಂದೆ ಮಾತ್ರೆಗಳನ್ನು ಎಲ್ಲರಿಗೂ ಸಾಮಾನ್ಯವಾಗಿ ವಿತರಿಸುತ್ತಿಲ್ಲ. ಔಷಧಿಗಳನ್ನು ನೀಡುವುದಕ್ಕೂ ಮೊದಲು ಪ್ರತೀ ರೋಗಿಯ ಸ್ಥಿತಿಯನ್ನು ತಪಾಸಣೆ ನಡೆಸುತ್ತಿರುವ ಅವರು, ಐಎಲ್ಐ ಹಾಗೂ ಕೊರೋನಾ ಲಕ್ಷಣಗಳಿರುವ ಜನರನ್ನು ಫೀವರ್ ಕ್ಲಿನಿಕ್ ಗಳಿಗೆ ಕಳುಹಿಸುತ್ತಿದ್ದಾರೆ. 

ಈ ಹಿಂದೆ ಆರೋಗ್ಯ ಸಚಿವಾಲಯ ಕೆಲ ಸಲಹೆಗಳನ್ನು ನೀಡಿತ್ತು. ಎಲ್ಲಾ ರಾಜ್ಯಗಳು ಹೋಮಿಯೋಪತಿ ಕೇಂದ್ರಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳನ್ನು ಉಚಿತವಾಗಿ ನೀಡಬೇಕೆಂದು ಸೂಚಿಸಿತ್ತು. 

ಈಗಾಗಲೇ ಗುಜರಾತ್, ಕೇರಳ, ಮಧ್ಯಪ್ರದೇಶ ಹಾಗೂ ಆಂಧ್ರಪ್ರದೇಶ ರಾಜ್ಯಗಳು ಈ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ನಡೆಸುತ್ತಿದೆ. ಇದೊಂದು ಸಾಂಪ್ರದಾಯಿಕ ಔಷಧಿಯಾಗಿರುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿರುವುದರಿಲ್ಲ. ಔಷಧಿ ತೆಗೆದುಕೊಂಡ ಬಳಿಕ ರೋಗಿಗಳಲ್ಲಿಯೂ ಧನಾತ್ಮಕ ಬೆಳವಣಿಗೆಗಳು ಕಂಡು ಬರುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಕೊರೋನಾ ವಾರಿಯರ್ಸ್'ಗಳಿಗೆ ನೀಡುತ್ತಿರುವ ಔಷಧಿಗಳಂತೆಯೇ ಇವುಗಳೂ ಇವೆ. ಈ ಹಿಂದೆ ಈ ಔಷಧಿಗಳನ್ನು  ಗ್ರಾಮ ಕಲ್ಯಾಣ ಸಂಘಗಳ ಮನವಿ ಮೇರೆಗೆ ಗ್ರಾಮಗಳು ಮತ್ತು ಇತರ ಪ್ರದೇಶಗಳಲ್ಲಿ ವಿತರಿಸಲಾಗುತ್ತಿತ್ತು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರುವುದರಿಂದ ನಮಗೆ ಹೆಚ್ಚು ವಿತರಿಸಲು ಸಾಧ್ಯವಾಗುತ್ತಿಲ್ಲ. ಸಂಪೂರ್ಣ ಪರೀಕ್ಷೆಯ ನಂತರ ಮಾತ್ರ ಔಷಧಿಗಳನ್ನು ನೀಡಲಾಗುತ್ತಿದೆ ಎಂದು ಆಯುಷ್ ಇಲಾಖೆಯ ಆಯುಕ್ತೆ ಮೀನಾಕ್ಷಿ ನೆಗಿಯವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com