ಹೋಮ್ ಕ್ವಾರಂಟೈನ್ ಸ್ಕ್ವಾಡ್ ಸದಸ್ಯರಾಗಲು ಸುಮಾರು 4 ಸಾವಿರ ನಾಗರಿಕರ ಸಹಿ

ನಾಗರಿಕ ಕ್ವಾರಂಟೈನ್ ಸ್ಕ್ವಾಡ್ ಸದಸ್ಯರಾಗಲು ಬೆಂಗಳೂರಿನ ಜನತೆ ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದು, ಸುಮಾರು 4 ಸಾವಿರ ನಾಗರಿಕರು ಸಹಿ ಹಾಕಿದ್ದಾರೆ. 
ಹೋಮ್ ಕ್ವಾರಂಟೈನ್ ಸಾಂದರ್ಭಿಕ ಚಿತ್ರ
ಹೋಮ್ ಕ್ವಾರಂಟೈನ್ ಸಾಂದರ್ಭಿಕ ಚಿತ್ರ

ಬೆಂಗಳೂರು: ನಾಗರಿಕ ಕ್ವಾರಂಟೈನ್ ಸ್ಕ್ವಾಡ್ ಸದಸ್ಯರಾಗಲು ಬೆಂಗಳೂರಿನ ಜನತೆ ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದು, ಸುಮಾರು 4 ಸಾವಿರ ನಾಗರಿಕರು ಸಹಿ ಹಾಕಿದ್ದಾರೆ. 

 ಹೋಮ್ ಕ್ವಾರಂಟೈನ್ ಸ್ವ್ಕಾಡ್ ಉಸ್ತುವಾರಿ ಹಾಗೂ ಪಶು ಸಂಗೋಪನಾ ಇಲಾಖೆ ಕಾರ್ಯದರ್ಶಿ ಆಗಿರುವ ಕ್ಯಾಪ್ಟನ್
ಪಿ.ಮಣ್ಣಿವಣ್ಣನ್ ಅವರ ತಂಡದಲ್ಲಿ ಅನೇಕ ಸ್ವಯಂ ಸೇವಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ. 

ಈ ತಂಡ ಹೋಮ್ ಕ್ವಾರಂಟೈನ್ ನಲ್ಲಿರುವವರ ಪಟ್ಟಿಯನ್ನು ಪಡೆಯಲಿದೆ ಅಲ್ಲದೇ, ಅಂತವರ ಮನೆಗಳಿಗೆ ಭೇಟಿ ನೀಡಿ, ಅವರು ಮನೆಯಲ್ಲಿಯೇ ಇದ್ದಾರೆಯೇ ಅಥವಾ ನಿಯಮ ಉಲ್ಲಂಘಿಸಿದ್ದಾರೆಯೇ ಎಂಬುದರ ಬಗ್ಗೆ ತಪಾಸಣೆ ಮಾಡಲಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ದರೆ  ಪ್ರಕರಣ ದಾಖಲಿಸಲಾಗುತ್ತದೆ ಪೊಲೀಸ್ ಕೂಡಾ ಇವರೊಂದಿಗೆ ಇರಲಿದ್ದಾರೆ. ಜೂನ್ ಮಧ್ಯದಿಂದ ಈವರೆಗೂ 84 ಎಫ್ ಐಆರ್ ದಾಖಲಿಸಲಾಗಿದೆ. 

ಹೋಮ್ ಕ್ವಾರಂಟೈನ್ ನಲ್ಲಿರುವ ಮನೆಗಳ ಮೇಲೆ ಪೋಸ್ಟ್ ರ್ ಗಳನ್ನು ಈ ತಂಡ ಹಾಕಲಿದೆ. ಜೂನ್ 27ರವರೆಗೂ ರಾಜ್ಯದಲ್ಲಿ
1 ಲಕ್ಷದ 13 ಸಾವಿರದ 661 ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 65, 560 ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ.

ನಾಗರಿಕ ಸ್ಕ್ವಾಡ್ ನ್ನು ಎರಡು ತಂಡಗಳಾಗಿ ಪ್ರತ್ಯೇಕಿಸಲಾಗಿದೆ. ಒಂದು ಟೆಲಿಗ್ರಾಮ್ ತಂಡ ಅವರ ವಾರ್ಡ್ ಗಳಲ್ಲಿಯೇ ಕೆಲಸ ಮಾಡಲಿದೆ. ಮತ್ತೊಂದು ಟೆಲಿಗ್ರಾಮ್ ತಂಡದಲ್ಲಿ ಎಂಟು ಬಿಬಿಎಂಪಿ ವಲಯ ಅಧಿಕಾರಿಗಳು, ತಂಡದ ಮುಖ್ಯಸ್ಥರು ಇರಲಿದ್ದು, ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸುವವರ ಬಗ್ಗೆ ಪ್ರತಿದಿನ ಸದಸ್ಯರಿಗೆ ಮಾಹಿತಿ ನೀಡಲಿದ್ದಾರೆ.

ಒಂದು ಬಾರಿ ಸ್ವಯಂ ಪ್ರೇರಿತವಾಗಿ ಹೆಸರು ನೋಂದಾಯಿಸಿಕೊಂಡ ನಂತರ ಕ್ವಾರಂಟೈನ್ ವಾಚ್ ಆ್ಯಪ್ ನಲ್ಲಿ ಹೋಮ್ ಕ್ವಾರಂಟೈನ್ ನಲ್ಲಿರುವ ಜನರ ಸಂಖ್ಯೆಯನ್ನು ನೋಡಲು ತಂಡಕ್ಕೆ ಸಾಧ್ಯವಾಗಲಿದೆ ಎಂದು ಬೆಂಗಳೂರು ಸಿಟಿಜನ್ ಸಮನ್ವಯಾಧಿಕಾರಿ ಸುಬೀರ್ ಸೆಹಗಲ್ ತಿಳಿಸಿದ್ದಾರೆ.

ಹೋಮ್ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಯ ಹೆಸರು ಮತ್ತು ವಿಳಾಸವನ್ನು ನೀಡಲಾಗುವುದು, ತಂಡ ಸ್ಥಳಕ್ಕೆ ಭೇಟಿ ನೀಡಿ ರೋಗಿಯ ಬಗ್ಗೆ ತಪಾಸಣೆ ನಡೆಸುತ್ತದೆ ಗೊತ್ತಾಗದ ರೀತಿಯಲ್ಲಿ ಭೇಟಿ ನೀಡುತ್ತೇವೆ. ಮನೆಯ ಹೊರಗಡೆ ನಿಂತು ರೋಗಿಯನ್ನು ಕರೆಯುತ್ತೇವೆ. ಒಂದು ವೇಳೆ ರೋಗಿ ಮನೆಯಿಂದ ಹೊರಗೆ ಬಂದರೆ ನಿಯಮ ಉಲ್ಲಂಘನೆಯಾಗಿಲ್ಲ ಎಂಬುದು ಗೊತ್ತಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳುತ್ತಾರೆ. 

14 ದಿನಗಳ ಹೋಮ್ ಕ್ವಾರಂಟೈನ್ ಕಡ್ಡಾಯ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಎಫ್ ಐಆರ್ ದಾಖಲಿಸಲಾಗುವುದು, ಈ ಸ್ವ್ಕಾಡ್ ಸೇರಲು ಆಸಕ್ತಿವುಳ್ಳವರು ವೆಬ್ ಸೈಟ್ www.quarantinesquad.in and ಸ್ವಯಂ ಸೇವಕರಾಗಲು ಹೆಸರು ನೋಂದಾಯಿಸಿಕೊಳ್ಳಲು register.quarantinesquad.in ಸಂಪರ್ಕಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com