ಚೀನಾದ 'ಶೇರ್ ಇಟ್' ಗೆ ಸಡ್ಡು; ಧಾರವಾಡದ ವಿದ್ಯಾರ್ಥಿಯಿಂದ 'ಜೆಡ್ ಶೇರ್' ಆ್ಯಪ್ ಅಭಿವೃದ್ಧಿ

ಚೀನಾ ಮೂಲದ ಶೇರ್ ಇಟ್ ಆ್ಯಪ್ ಗೆ ಕರ್ನಾಟಕದ ಧಾರವಾಡ ಮೂಲದ ವಿದ್ಯಾರ್ಥಿ ಸಡ್ಡು ಹೊಡೆದು ತನ್ನದೇ ವಿನೂತನ ವೇಗದ ದತ್ತಾಂಶ ರವಾನೆ ಮತ್ತು ಸ್ವೀಕರಿಸಬಲ್ಲ ಆ್ಯಪ್ ಅನ್ನು ಸಿದ್ಧಪಡಿಸಿದ್ದಾರೆ.
ಜೆಡ್ ಶೇರ್ ಆ್ಯಪ್
ಜೆಡ್ ಶೇರ್ ಆ್ಯಪ್

ಹುಬ್ಬಳ್ಳಿ: ಚೀನಾ ಮೂಲದ ಶೇರ್ ಇಟ್ ಆ್ಯಪ್ ಗೆ ಕರ್ನಾಟಕದ ಧಾರವಾಡ ಮೂಲದ ವಿದ್ಯಾರ್ಥಿ ಸಡ್ಡು ಹೊಡೆದು ತನ್ನದೇ ವಿನೂತನ ವೇಗದ ದತ್ತಾಂಶ ರವಾನೆ ಮತ್ತು ಸ್ವೀಕರಿಸಬಲ್ಲ ಆ್ಯಪ್ ಅನ್ನು ಸಿದ್ಧಪಡಿಸಿದ್ದಾರೆ.

ಗಲ್ವಾನ್ ಸಂಘರ್ಷದ ಬಳಿಕ ಭಾರತ ಚೀನಾ ಸಂಬಂಧ ಹಳಸಿದ್ದು, ಇದರ ನಡುವೆಯೇ ಭಾರತ ಸರ್ಕಾರ ದೇಶದ ಆಂತರಿಕ ಭದ್ರತೆ ಮತ್ತು ದತ್ತಾಂಶ ಸೋರಿಕೆ ಕಾರಣ ನೀಡಿ ಚೀನಾದ 59 ಆ್ಯಪ್ ಗಳನ್ನು ನಿಷೇಧಿಸಿದೆ. ಚೀನಾ ಆ್ಯಪ್ ಗಳಿಗೆ ಕೇಂದ್ರ ಸರ್ಕಾರ ನಿಷೇಧ ಹೇರಿದ ಬೆನ್ನಲ್ಲೇ  ಚೀನಾ ಆ್ಯಪ್ ಗಳಿಗೆ ಪರ್ಯಾಯ ಆ್ಯಪ್ ಗಳ ಹುಡುಕಾಟ ಆರಂಭವಾಗಿದೆ. ಅಂತೆಯೇ ಪ್ರಮುಖ ಫೈಲ್ ಶೇರಿಂಗ್ ಆ್ಯಪ್ ಶೇರ್ ಇಟ್ ಗೆ ಪರ್ಯಾಯವಾಗಿ ಜೆಡ್ ಶೇರ್ ಆ್ಯಪ್ ಬಿಡುಗಡೆಯಾಗಿದೆ.

ಈ ಜೆಡ್ ಶೇರ್ ಆ್ಯಪ್ ಅನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕನ್ಸೂರು ಗ್ರಾಮದ ನಿವಾಸಿ ಶ್ರವಣ್ ವಂಸತ್ ಹೆಗ್ಡೆ ಜೆಡ್ ಅಭಿವೃದ್ಧಿ ಪಡಿಸಿದ್ದಾರೆ. ಶ್ರವಣ್ ವಂಸತ್ ಹೆಗ್ಡೆ ಧಾರವಾಡದ ಸಿಎಸ್ಐ ಕಾಲೇಜಿನಲ್ಲಿ ಬಿಸಿಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಜೆಡ್ ಶೇರ್ ಅ್ಯಪ್ ಅನ್ನು ಈ ವರೆಗೂ 1ಲಕ್ಷಕ್ಕೂ ಅಧಿಕ ಮಂದಿ ಇನ್ ಸ್ಟಾಲ್ ಮಾಡಿಕೊಂಡಿದ್ದು, ಪ್ಲೇ ಸ್ಟೋರ್ ನಲ್ಲಿ 3.9 ರೇಟಿಂಗ್ ಪಡೆದುಕೊಂಡಿಗೆ. ಅಂತೆಯೇ ಈ ಆ್ಯಪ್ ಕುರಿತಂತೆ ಸುಮಾರು 2 ಸಾವಿರ ರಿವ್ಯೂಗಳು ಬಂದಿದೆ.

ಈ ಬಗ್ಗೆ ಮಾತನಾಡಿರುವ ಶ್ರವಣ್ ವಂಸತ್ ಹೆಗ್ಡೆ 15 ದಿನಗಳ ಅಂತರದಲ್ಲಿ ಈ ಆ್ಯಪ್ ಅನ್ನು ತಯಾರಿಸಲಾಗಿದ್ದು, ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ ಎಂದು ಹೇಳಿದ್ದಾರೆ. ಅಂತೆಯೇ ಶ್ರವಣ್ ಈ ಹಿಂದೆ ಕರ್ನಾಟಕ ಯೂನಿವರ್ಸಿಟಿಗಾಗಿ ಹಲವು ಬಗೆಯ ಆ್ಯಪ್ ಗಳನ್ನು ತಯಾರಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶಿ ವಸ್ತುಗಳ ಕುರಿತು ಮಾತನಾಡಿದಾಗ ಸ್ವದೇಶಿ ಆ್ಯಪ್ ತಯಾರಿಸುವ ಆಸೆ ಹುಟ್ಟಿತು. ಜೂನ್ ತಿಂಗಳ ಆರಂಭದಲ್ಲಿ ಈ ಆ್ಯಪ್ ತಯಾರಿಕೆ ಆರಂಭಿಸಿದೆ. 2 ವಾರದಲ್ಲಿ ಆ್ಯಪ್ ಸಿದ್ಧವಾಯಿತು. ಝೆಡ್ ಶೇರ್ ಪ್ರತೀ ಸೆಕೆಂಡ್ ಗೆ 6 ರಿಂದ 10 ಎಂಬಿಪಿಎಸ್ ವರೆಗಿನ ವೇಗದಲ್ಲಿ ಫೈಲ್ ಶೇರ್ ಮಾಡುತ್ತದೆ. ಈ ಆ್ಯಪ್ ನಲ್ಲಿ ಎಲ್ಲ ರೀತಿಯ ಅಂದರೆ, ಫೋಟೋ, ವಿಡಿಯೋ, ಪಿಡಿಎಫ್, ಆ್ಯಪ್ ಗಳು ಸೇರಿದಂತೆ ಬಹುತೇಕ ಎಲ್ಲ ರೀತಿಯ ಫೈಲ್ ಗಳನ್ನು ಶೇರ್ ಮಾಡಬಹುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com