ಇಂದಿರಾ ಕ್ಯಾಂಟೀನ್ ಬೆಲೆ ಏರಿಕೆಯಿಂದ ಬಡಜನತೆಯ ಮೇಲಿನ ಬರೆ; ಎಎಪಿ ಆರೋಪ

ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ದರಗಳನ್ನು ಹೆಚ್ಚಿಸಲು ಮುಂದಾಗಿರುವ ಕ್ರಮಕ್ಕೆ ಆಮ್ ಆದ್ಮಿ ಪಕ್ಷ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ದರಗಳನ್ನು ಹೆಚ್ಚಿಸಲು ಮುಂದಾಗಿರುವ ಕ್ರಮಕ್ಕೆ ಆಮ್ ಆದ್ಮಿ ಪಕ್ಷ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಸರ್ಕಾರಬೆಳಗಿನ ಉಪಾಹಾರ 5 ರೂ. ಗಳಿಂದ 10 ರೂ.ಗಳಿಗೆ ಹಾಗೂ ಮಧ್ಯಾಹ್ನದ ಊಟವನ್ನು 10.ರೂಗಳಿಂದ 15 ರೂ .ಗಳಿಗೆ ಹೆಚ್ಚಿಸಲು ಮುಂದಾಗಿದ್ದು, ಬಡಜನರಿಗೆ ಇನ್ನಷ್ಟು ಬರೆ ಹಾಕಲು ಮುಂದಾಗಿದೆ ಎಂದು ಎಎಪಿ ಆರೋಪಿಸಿದದೆ.

ರಾಜ್ಯದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 2018 ರ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿದ್ದಾಗ ಮತದಾರರ ಮನ ಗೆಲ್ಲುವ ತರಾತುರಿಯಿಂದ ಆರಂಭಿಸಿದ ಇಂದಿರಾ ಕ್ಯಾಂಟೀನ್ ಯೋಜನೆ ಹತ್ತು ಹಲವು ವಿವಾದಗಳಿಗೆ ಸಿಲುಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com