ಮದ್ದೂರಿನಲ್ಲಿ ಪುಲ್ವಾಮಾ ಹುತಾತ್ಮ ಗುರು ಸ್ಮಾರಕ
ಮದ್ದೂರಿನಲ್ಲಿ ಪುಲ್ವಾಮಾ ಹುತಾತ್ಮ ಗುರು ಸ್ಮಾರಕ

ಮದ್ದೂರಿನಲ್ಲಿ ಪುಲ್ವಾಮಾ ಹುತಾತ್ಮ ಗುರು ಸ್ಮಾರಕ 

ಕಳೆದ ವರ್ಷ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿದ್ದ ಯೋಧ ಎಚ್. ಗುರುವಿಗೆ ಮಂಡ್ಯದ ಮದ್ದೂರಿನಲ್ಲಿ ಸ್ಮಾರಕವನ್ನು ನಿರ್ಮಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ 25 ಲಕ್ಷ ರೂ.ಬಿಡುಗಡೆ ಮಾಡಿದ್ದಾರೆ.

ಬೆಂಗಳೂರು: ಕಳೆದ ವರ್ಷ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿದ್ದ ಯೋಧ ಎಚ್. ಗುರುವಿಗೆ ಮಂಡ್ಯದ ಮದ್ದೂರಿನಲ್ಲಿ ಸ್ಮಾರಕವನ್ನು ನಿರ್ಮಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ 25 ಲಕ್ಷ ರೂ.ಬಿಡುಗಡೆ ಮಾಡಿದ್ದಾರೆ.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ನಲವತ್ತು ಯೋಧರಲ್ಲಿ  ಮದ್ದೂರಿನ ಗುಡಿಗರೆ ಗ್ರಾಮದವರಾದ 33 ವರ್ಷದ ಗುರು ಸಹ ಒಬ್ಬರಾಗಿದ್ದರು.

ಗುರು ಅವರ ಪತ್ನಿ ಕಲಾವತಿ ಮತ್ತು ಇತರ ಕುಟುಂಬ ಸದಸ್ಯರು ಸ್ಮಾರಕಕ್ಕೆ ಹಣ ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿದ್ದಾರೆ. 

ಮದ್ದೂರಿನಲ್ಲಿ ಗುರು ಹೆಸರಲ್ಲಿ ಸ್ಮಾರಕವನ್ನು ನಿರ್ಮಿಸಲು ಸರ್ಕಾರ ಹಣವನ್ನು ಬಿಡುಗಡೆ ಮಾಡಿದೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ. ಸ್ಮಾರಕಕ್ಕಾಗಿ ತಹಶೀಲ್ದಾರ್ ಸ್ಥಳವನ್ನು ಗುರುತಿಸಿದ್ದಾರೆ ಎಂದು ಸಿಎಂ ಹೇಳಿದರು. 

ಇತ್ತೀಚೆಗೆ, ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಅವರು ಸಚಿವರಿಗೆ ಪತ್ರವೊಂದನ್ನು ಬರೆದಿದ್ದು ಗುರು ಮರಣದ ವರ್ಷದ ಬಳಿಕವೂ ಯೋಧನ ಚಿತಾಭಸ್ಮ ವಿಸರ್ಜನೆ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿದ್ದರು.

Related Stories

No stories found.

Advertisement

X
Kannada Prabha
www.kannadaprabha.com