ತುಮಕೂರು: ಎರಡೂವರೆ ವರ್ಷದ ಮಗುವನ್ನು ಕೊಂದಿದ್ದ ಚಿರತೆ ಸೆರೆ

ತುಮಕೂರು ತಾಲೂಕಿ ಹೆಬ್ಬರೂ ಹೋಬಳಿಯ ಬೈಚೇನಳ್ಳಿಯ ತೋಟದ ಮನೆಯ ಎರಡೂವರೆ ವರ್ಷದ ಮಗುವನ್ನು ಹೊತ್ತೊಯ್ದು ಕೊಂದು ಹಾಕಿದ್ದ ನರಭಕ್ಷಕ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ.
ತುಮಕೂರು: ಎರಡೂವರೆ ವರ್ಷದ ಮಗುವನ್ನು ಕೊಂದಿದ್ದ ಚಿರತೆ ಸೆರೆ
ತುಮಕೂರು: ಎರಡೂವರೆ ವರ್ಷದ ಮಗುವನ್ನು ಕೊಂದಿದ್ದ ಚಿರತೆ ಸೆರೆ

ತುಮಕೂರು: ತುಮಕೂರು ತಾಲೂಕಿ ಹೆಬ್ಬರೂ ಹೋಬಳಿಯ ಬೈಚೇನಳ್ಳಿಯ ತೋಟದ ಮನೆಯ ಎರಡೂವರೆ ವರ್ಷದ ಮಗುವನ್ನು ಹೊತ್ತೊಯ್ದು ಕೊಂದು ಹಾಕಿದ್ದ ನರಭಕ್ಷಕ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ.

ಇಲಾಖೆ ಇರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ. 

ಶನಿವಾರ ಚಿರತೆ  ಬೈಚೇನಳ್ಳಿಯ ತೋಟದ ಮನೆಯ ಶ್ರೀನಿವಾಸ್ ಹಾಗೂ ಶಿಲ್ಪಾ ದಂಪತಿಯ ಮಗಳು ಚಂದನಾಳನ್ನು ಹೊತ್ತೊಯ್ದು ಕೊಂದು ಹಾಕಿತ್ತು. ಮಗು ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. 

ಸುತ್ತಮುತ್ತಲ ಹಳ್ಳಿಗಳಲ್ಲಿ ಇತ್ತೀಚೆಗೆ ಈ ಚಿರತೆ ಉಪಟಳ ಹೆಚ್ಚಾಗಿದ್ದು ಗ್ರಾಮಸ್ಥರು ಆತಂಕದಿಂದ ಜೀವನ ಸಾಗಿಸುತ್ತಿದ್ದರು. 

ಸಧ್ಯ ಚಿರತೆ ಬೋನಿನಲ್ಲಿ ಸಿಕ್ಕಿ ಬಿದ್ದಿದ್ದು ಸ್ಥಳಕ್ಕಾಗಮಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸ್ಥಳಾಂತರಿಸುವ ಕಾರ್ಯ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com