ಇಂದಿನಿಂದ ಬಜೆಟ್ ಅಧಿವೇಶನ- ಸಿಎಎ ಪರ ನಿರ್ಣಯ ಅಂಗೀಕಾರಕ್ಕೆ ಸಿದ್ದತೆ

ಬಿಜೆಪಿಯೇತರ ರಾಜ್ಯ ಸರ್ಕಾರಗಳು ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿಗೆ ವಿರುದ್ಧವಾಗಿ ನಿರ್ಣಯ ಅಂಗೀಕರಿಸುತ್ತಿದ್ದು ಇದಕ್ಕೆ ಪ್ರತಿಯಾಗಿ ಕರ್ನಾಟಕ ಸರ್ಕಾರ ಸಿಎಎಗೆ ಬೆಂಬಲ ನೀಡುವ ನಿರ್ಣಯ ರೂಪಿಸಲು ಮುಂದಾಗಿದೆ. ಸೋಮವಾರದಿಂದ ಪ್ರಾರಂಭವಾಗುವ ಒಂದು ತಿಂಗಳ ಕರ್ನಾಟಕ ಶಾಸಕಾಂಗ ಅಧಿವೇಶನದಲ್ಲಿ ಸರ್ಕಾರ ಸಿಎಎ ಪರ ನಿರ್ಣಯ ಮಂಡಿಸುವ ಸೂಚನೆ ಇದ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಿಜೆಪಿಯೇತರ ರಾಜ್ಯ ಸರ್ಕಾರಗಳು ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿಗೆ ವಿರುದ್ಧವಾಗಿ ನಿರ್ಣಯ ಅಂಗೀಕರಿಸುತ್ತಿದ್ದು ಇದಕ್ಕೆ ಪ್ರತಿಯಾಗಿ ಕರ್ನಾಟಕ ಸರ್ಕಾರ ಸಿಎಎಗೆ ಬೆಂಬಲ ನೀಡುವ ನಿರ್ಣಯ ರೂಪಿಸಲು ಮುಂದಾಗಿದೆ. ಸೋಮವಾರದಿಂದ ಪ್ರಾರಂಭವಾಗುವ ಒಂದು ತಿಂಗಳ ಕರ್ನಾಟಕ ಶಾಸಕಾಂಗ ಅಧಿವೇಶನದಲ್ಲಿ ಸರ್ಕಾರ ಸಿಎಎ ಪರ ನಿರ್ಣಯ ಮಂಡಿಸುವ ಸೂಚನೆ ಇದೆ.

ವಿಧಾನಸಭೆ ಅಧಿವೇಶನದಲ್ಲಿ  ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ವಿವಿಧ ವಿಷಯಗಳ ಬಗ್ಗೆ ಪ್ರಶ್ನಿಸಲು ಸಜ್ಜಾಗಿರುವ ಪ್ರತಿಪಕ್ಷಗಳು ಕರ್ನಾಟಕಕ್ಕೆ ಕೇಂದ್ರ ನಿಧಿ ಹಂಚಿಕೆಯಲ್ಲಿ ತಾರತಮ್ಯವಾಗಿರುವುದನ್ನು ಮುನ್ನೆಲೆಗೆ ತರಲು ಯೋಜಿಸಿದೆ. . ಹಿಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಿಸಲಾದ ಕೃಷಿ ಸಾಲ ಮನ್ನಾಕ್ಕಾಗಿ ಆಗ್ರಹಿಸುವ ಸಾಧ್ಯತೆಯೂ ಇದೆ.

ಇತ್ತೀಚೆಗೆ 78 ನೇ ವರ್ಷಕ್ಕೆ ಕಾಲಿಟ್ಟ ಯಡಿಯೂರಪ್ಪಸಂವಿಧಾನದ ಬಗ್ಗೆ ನಿಗದಿತ ಚರ್ಚೆಯ ಒಂದು ದಿನದ ನಂತರ ಮಾರ್ಚ್ 5 ರಂದು ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಒತ್ತಾಯದ ಮೇರೆಗೆ, ಸಂವಿಧಾನ ಅಂಗೀಕಾರವಾದ 70 ವರ್ಷಗಳನ್ನು ಗುರುತಿಗಾಗಿ ಸದನದಲ್ಲಿ ಒಂದು ದಿನದ ಚರ್ಚೆ ಆಯೋಜನೆಗೊಂಡಿದೆ. 

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ  ಎಚ್.ಎಸ್. ದೊರೆಸ್ವಾಮಿ  ಮೇಲೆ ಮಾಡಿರುವ ಟೀಕೆ, ವದೆಹಲಿಯಲ್ಲಿ, ಸೇರಿದಂತೆ ರಾಷ್ಟ್ರವ್ಯಾಪಿ, ಸಿಎಎ ವಿರುದ್ಧ ಪ್ರತಿಭಟನೆ, ಹಿಂಸಾಚಾರ  ರಾಜ್ಯದಲ್ಲಿ ಕೇಂದ್ರ-ಪ್ರಾಯೋಜಿತ ಯೋಜನೆಗಳಿಗೆ ಕೇಂದ್ರ ಸರ್ಕಾರದ ನಿಧಿಯ ಕಡಿತ ರ್ನಾಟಕಕ್ಕೆ ಜಿಎಸ್ಟಿ ಪರಿಹಾರದಲ್ಲಿ ಕಡಿತ  ಸೇರಿ ಇತರೆ ವಿಚಾರಗಳನ್ನು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಲಲಿದೆ ಎನ್ನಲಾಗಿದೆ. 

ಮತ್ತೊಂದೆಡೆ, ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಇಬ್ಬರ ಸಾವಿಗೆ ಕಾರಣವಾದ ಸಿಎಎ  ವಿರುದ್ಧದ ಮಂಗಳೂರು ಹಿಂಸಾಚಾರದ ಬಗ್ಗೆ ಗಮನಹರಿಸಲಿದೆ. ಅಲ್ಲದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಿದ ಕೃಷಿ ಸಾಲ ಮನ್ನಾಕ್ಕಾಗಿ  ಮುಡಿಪಾಗಿಟ್ಟ ಹಣವನ್ನು ಬಿಜೆಪಿ ಸರ್ಕಾರ ಬೇರೆ ಉದ್ದೇಶಕ್ಕೆ ಬಳಸಿಕೊಂಡಿದೆ ಎಂದು ಆರೋಪಿಸುವ ಯೋಜನೆ ಹೊಂದಿದೆ. 

ತಮ್ಮ ಐದನೇ ಬಜೆಟ್ ಅನ್ನು ಮಂಡಿಸುತ್ತಿರುವ ಯಡಿಯೂರಪ್ಪ  ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವ ನಿಧಿಯ ಕೊರತೆ ಮತ್ತು ಕೇಂದ್ರ ಸರ್ಕಾರದ ಹಣ ಹಂಚಿಕೆಯಲ್ಲಿನ ಕಡಿತದ ನಡುವೆ ಹಣಕಾಸು ನಿರ್ವಹಿಸುವ ಕಠಿಣ ಕೆಲಸವನ್ನು ಹೊಂದಿದ್ದಾರೆ.ಫೆಬ್ರವರಿಯಲ್ಲಿ ನಡೆದ ಒಂದು ಸಣ್ಣ ಅಧಿವೇಶನದಲ್ಲಿ ರಾಜ್ಯಪಾಲ ವಜುಭಾಯಿ ವಾಲಾಅವರ ಭಾಷಣದ ಕುರಿತು ಚರ್ಚೆಗೆ ಹೆಚ್ಚಿನ ಸಮಯವನ್ನು ಪಡೆಯಲು ಪ್ರತಿಪಕ್ಷಗಳು ಸಜ್ಜಾಗಿವೆ. ಭಾಷಣಕ್ಕೆ ಸರ್ಕಾರದ ಪ್ರತಿಕ್ರಿಯೆ ಇನ್ನೂ ಬಾಕಿ ಇದೆ. ಹೊಸದಾಗಿ ನೇಮಕಗೊಂಡ ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ಧದ ಪ್ರಕರಣಗಳನ್ನು ಎತ್ತಿ ತೋರಿಸಿರುವ ಕಾಂಗ್ರೆಸ್ಸಿಗೆ, ಸದನದ  ಒಳಗೆ ಆರೋಪವನ್ನು ಪುನರ್ ಉಚ್ಚರಿಸುವುದು ಇನ್ನೊಂದು ಆದ್ಯತೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com