ಕೊರೊನ ಭೀತಿ: ಹಂಪಿಯಲ್ಲಿ ಪ್ರವಾಸಿಗರ ಆರೋಗ್ಯ ತಪಾಸಣೆ

ಚೀನಾದಲ್ಲಿ ಮರಣ ಮೃದಂಗ ಬಾರಿಸಿರುವ ಕೊರೊನ ಭೀತಿ ವಿಶ್ವ ವಿಖ್ಯಾತ ಹಂಪಿಗೆ ಕೂಡ ತಟ್ಟಿದಂತೆ ಕಾಣುತ್ತಿದೆ. 
ಕೊರೊನ ಭೀತಿ: ಹಂಪಿಯಲ್ಲಿ ಪ್ರವಾಸಿಗರ ಆರೋಗ್ಯ ತಪಾಸಣೆ
ಕೊರೊನ ಭೀತಿ: ಹಂಪಿಯಲ್ಲಿ ಪ್ರವಾಸಿಗರ ಆರೋಗ್ಯ ತಪಾಸಣೆ

ಹೊಸಪೇಟೆ: ಚೀನಾದಲ್ಲಿ ಮರಣ ಮೃದಂಗ ಬಾರಿಸಿರುವ ಕೊರೊನ ಭೀತಿ ವಿಶ್ವ ವಿಖ್ಯಾತ ಹಂಪಿಗೆ ಕೂಡ ತಟ್ಟಿದಂತೆ ಕಾಣುತ್ತಿದೆ. 

ಕಳೆದ ಒಂದು ತಿಂಗಳಿನಿಂದ ಹಂಪಿಗೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ದಿನದಿನಕ್ಕೆ ಕಡಿಮೆಯಾಗುತಿದ್ದು ಹಂಪಿಯ ಪ್ರಮುಖ ಬೀದಿ ಪ್ರವಾಸಿಗರಿಲ್ಲದೆ ಬಣಗುಡುತ್ತಿದೆ. ಪ್ರತಿ ವರ್ಷ ಪೆಬ್ರವರಿ ಮಾರ್ಚ್ ತಿಂಗಳಲ್ಲಿ ವಿದೇಶಿ ಪ್ರವಾಸಿಗರು ಹಂಪಿಯಲ್ಲಿ ಹೆಚ್ಚಾಗಿ ಕಾಣ ಸಿಗುತಿದ್ರು, ಆದ್ರೆ ಈ ವರ್ಷ ಮಾರ್ಚ್ ತಿಂಗಳು ಆರಂಭದಲ್ಲಿ ಪ್ರವಾಸಿಗರ ಸಂಖ್ಯೆ ವಿರಳವಾಗುತ್ತಿದೆ. ಇದಕ್ಕೆ ಕಾರಣ ಕೊರೊನ ಭೀತಿ ಎನ್ನಲಾಗುತ್ತಿದೆ. 

ಇನ್ನು ಇತ್ತೀಚೆಗೆ ಕೊರೊನ ಸೋಂಕು ತಗುಲಿದ ವ್ಯಾಕ್ತಿ ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬುತಿದ್ದಂತೆ ಹಂಪಿಯಲ್ಲಿ ಆರೋಗ್ಯಧಿಕಾರಿಗಳು ಅಲರ್ಟ್ ಆಗಿದ್ದಾರೆ. ಹಂಪಿಯ ಪ್ರವಾಸಕ್ಕೆ ಬರುವ ವಿದೇಶಿ ಪ್ರವಾಸಿಗರ ಆರೋಗ್ಯ ತಪಾಸಣೆ ನಡೆಸುತಿದ್ದು, ಶೀತ ನೆಗಡಿ ಜ್ವರದಂತ ಲಕ್ಷಣಗಳು ಕಂಡು ಬಂದ್ರೆ ಹೆಚ್ಚಿನ ತಪಾಸಣೆಗೆ ಒಳಪಡಿಸುತಿದ್ದಾರೆ. 

ಡಾಕ್ಟರ್ ವಿನೋದ್ ನೇತೃತ್ವದ ಆರು ಜನ ಸಿಬ್ಬಂದಿಗಳು ಹಂಪಿಯ ಪ್ರಮುಖ ಸ್ಮಾರಕಗಳ ಬಳಿ ದೇಶ ವಿದೇಶಿಗರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ಇಂದು ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ವಿದೇಶಿಗರ ಆರೋಗ್ಯ ತಪಾಸಣೆ ಮಾಡಿದ ಆರೋಗ್ಯಾಧಿಕಾರಿಗಳು, ಪ್ರವಾಸಿಗರು ಯಾವ ದೇಶದಿಂದ ಬಂದಿದ್ದಾರೆ, ಎಷ್ಟು ದಿನಗಳ ಕಾಲ ಹಂಪಿಯಲ್ಲಿ ತಂಗಲಿದ್ದಾರೆ, ಮತ್ತು ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಮಾಹಿತಿಯನ್ನ ಸಹ ಕಲೆ ಹಾಕುತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com