ವಿಧಾನಸೌಧದಲ್ಲಿ ನಕಲಿ ಪತ್ರಕರ್ತ ಮುಖೇಶ್ ರಾವ್ ಎಂಬಾತನ ವಿರುದ್ಧ ಅಭಿಲೇಖನಾಧಿಕಾರಿ ದೂರು

ವಿಧಾನಸೌಧದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಪಾರ್ಟಿ ಮಾಡಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಬ್ಲ್ಯಾಕ್ ಮೇಲ್ ಮಾಡಿದ ನಕಲಿ ಪತ್ರಕರ್ತನ ವಿರುದ್ಧ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ‌.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಧಾನಸೌಧದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಪಾರ್ಟಿ ಮಾಡಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಬ್ಲ್ಯಾಕ್ ಮೇಲ್ ಮಾಡಿದ ನಕಲಿ ಪತ್ರಕರ್ತನ ವಿರುದ್ಧ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ‌.

ಜ.25ರಂದು ಮಧ್ಯಾಹ್ನ ತಾವು, ತಮ್ಮ ಸಿಬ್ಬಂದಿ ಊಟ ಮಾಡುವ ವೇಳೆ ಅನಧಿಕೃತವಾಗಿ ವ್ಯಕ್ತಿಯೋರ್ವ ತಾನು ಪತ್ರಕರ್ತರ ಎಂದು ಊಟ ಮಾಡುತ್ತಿರುವ ವಿಡಿಯೋ ಚಿತ್ರೀಕರಿಸಿಕೊಂಡಿದ್ದ. ನಂತರ ಆತ ಸುಳ್ಳಿನ ಕಥೆ ಕಟ್ಟಿ ಪಾರ್ಟಿ ಮಾಡಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಕೆಲ ಮಾಧ್ಯಮಗಳಿಗೆ ವಿಡಿಯೋ ನೀಡಿ ಬ್ಲ್ಯಾಕ್ ಮೇಲ್ ಮಾಡುವ ದಂಧೆಯಲ್ಲಿ ತೊಡಗಿದ್ದ ಎಂದು ಆರೋಪಿಸಿ ಮುಖೇಶ್ ರಾವ್ ಎಂಬಾತನ ವಿರುದ್ಧ ವಿಧಾನ ಸಭೆ ಸಚಿವಾಲಯದ ಅಭಿಲೇಖನಾಧಿಕಾರಿ ವಿಧಾನ ಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಲ್ಲಿ ತಾವು ಯಾವುದೇ ಪಾರ್ಟಿಮಾಡಿರಲಿಲ್ಲ. ಕೇವಲ ಐದಾರೂ ಜನ ಊಟ ಮಾಡಿದ್ದೇವು ಅಷ್ಟೇ. ಅದನ್ನೇ ವಿಡಿಯೋ ಮಾಡಿ 25 ಜನ ಸೇರಿ ಪಾರ್ಟಿ ಮಾಡಿದ್ದು, ಮಾಂಸಹಾರ ಸೇವಿಸಲಾಗಿದೆ ಎಂದು ವಿಡಿಯೋ ವನ್ನು ಕೆಲ ಮಾಧ್ಯಮಗಳಿಗೆ ನೀಡಿ ತಮ್ಮ ವಿರುದ್ಧ ತೇಜೋವಧೆ ಮಾಡಿದ್ದ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಮುಖೇಶ್ ಎಂಬಾತ ನಕಲಿ ಪತ್ರಕರ್ತನಾಗಿದ್ದು, ವಿಧಾನಸೌಧದಲ್ಲಿ ಕಾರ್ಯ ನಿರ್ವಹಿಸುವ ಅನೇಕ ಸಿಬ್ಬಂದಿ ಗೆ ಆತ ಸುಮಾರು ವರ್ಷಗಳಿಂದ ಬ್ಲ್ಯಾಕ್ ಮೇಲ್ ಮಾಡುತ್ತಾ ಬಂದಿದ್ದಾನೆ. ಆದ್ದರಿಂದ ಮುಖೇಶ್ ವಿಧಾನಸೌಧಕ್ಕೆ ಪ್ರತಿ ದಿನ ಹೇಗೆ ಪ್ರವೇಶಿಸುತ್ತಾನೆ?. ಅನುಮತಿ ನೀಡಿದವರು ಯಾರು? ಈತ ನಿಜವಾಗಲೂ ಯಾರು ಎಂಬುದನ್ನು  ಪತ್ತೆ ಹಚ್ಚಿ, ನಕಲಿ ಪತ್ರಕರ್ತನ ವಿರುದ್ಧ ಕೂಡಲೇ ಮೊಕದ್ದಮೆ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ವಿಧಾನಸಭೆ ಸಚಿವಾಲಯದ ಅಭಿಲೇಖನಾಧಿಕಾರಿ ಅನಂತ್ ಎ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com