ಗಂಗಾವತಿ: ನಿಷೇಧಾಜ್ಞೆ ಮಧ್ಯೆ ಅಕ್ರಮ ರೆಸಾರ್ಟ್ ತೆರವು ಕಾರ್ಯಚರಣೆ

ಸುಪ್ರಿಂ ಕೋರ್ಟ್‌ ನಿರ್ದೇಶನದ‌ ಮೆರೆಗೆ ತಾಲ್ಲೂಕಿನ ವಿರುಪಾಪುರ ಗಡ್ಡೆಯಲ್ಲಿನ ಅನಧಿಕೃತ ರೆಸಾರ್ಟ್ ತೆರವು ಕಾರ್ಯಚರಣೆ ಇಂದು ಬೆಳ್ಳಂಬೆಳಗ್ಗೆ ಆರಂಭವಾಯಿತು.
ಅಕ್ರಮ ರೆಸಾರ್ಟ್ ಗಳ ತೆರವು
ಅಕ್ರಮ ರೆಸಾರ್ಟ್ ಗಳ ತೆರವು

ಗಂಗಾವತಿ: ಸುಪ್ರಿಂ ಕೋರ್ಟ್‌ ನಿರ್ದೇಶನದ‌ ಮೆರೆಗೆ ತಾಲ್ಲೂಕಿನ ವಿರುಪಾಪುರ ಗಡ್ಡೆಯಲ್ಲಿನ ಅನಧಿಕೃತ ರೆಸಾರ್ಟ್ ತೆರವು ಕಾರ್ಯಚರಣೆ ಇಂದು ಬೆಳ್ಳಂಬೆಳಗ್ಗೆ ಆರಂಭವಾಯಿತು.

ಸುಮಾರು 200ಕ್ಕೂ ಹೆಚ್ಚು ಪೊಲೀಸರ ಸರ್ಪಗಾವಲಿನಲ್ಲಿ ತಹಸೀಲ್ದಾರ್ ಎಲ್.ಡಿ. ಚಂದ್ರಕಾಂತ್ ನೇತೃತ್ವದಲ್ಲಿ ತೆರವು ಕಾರ್ಯಚರಣೆ ಆರಂಭವಾಯಿತು. ಬೆಳಗ್ಗೆ ಮೂರು ಗಂಟೆಯಿಂದಲೇ ಕಂದಾಯ, ಪೊಲೀಸ್, ಹಂಪಿ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ನಾನಾ ಇಲಾಖೆಗಳ ಸಿಬ್ಬಂದಿ ಗಡ್ಡಿಗೆ ಆಗಮಿಸಿದರು. 

ಎಲ್ಲಾ ಸಿದ್ಧತೆಗಳನ್ನು‌ ಮಾಡಿಕೊಂಡು ಬೆಳಗ್ಗೆ ಏಳು ಗಂಟೆಯಿಂದಲೇ ತೆರವು  ಕಾರ್ಯಚರಣೆ ಆರಂಭವಾಯಿತು. ಮೇಲು ಉಸ್ತುವಾರಿ ವಹಿಸಿಕೊಂಡಿದ್ದ  ಜಿಲ್ಲಾಧಿಕಾರಿ ಸುನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಅಧೀನ ಅಧಿಕಾರಿಗಳಿಗೆ ಡಿಸಿ ನಿರ್ದೇಶನ ನೀಡಿದರು. ಮೂರು ದಿನಕಾಲ ತೆರವು ಕಾರ್ಯಚರಣೆ ಮುಂದುವರೆಯಲಿದೆ. ಆದರೆ ಸುಪ್ರಿಂ ಕೋರ್ಟ್ ಜ.24ರಂದು ಮಾಡಿದ್ದ ಆದೇಶದ ‌ಹಿನ್ನೆಲೆ ಈಗಾಗಲೆ ಗಡ್ಡಿಯಲ್ಲಿ ಶೇ.40ರಷ್ಟು ಹೊಟೇಲ್‌ ಮಾಲಿಕರು ಸ್ವಯಂ ಪ್ರೇರಣೆಯಿಂದ ತೆರವು ಮಾಡಿಕೊಂಡಿದ್ದರು. ಇನ್ನುಳಿದ ಹೊಟೇಲ್ ಗಳ ತೆರವು ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com