ಬಾತ್ ರೂಂ, ಟಾಯ್ಲೆಟ್ ಗಳ ವಾಸನೆ ದೂರ ಮಾಡುವ ಪೆಟ್ಟಿಗೆ ತಯಾರಿಸಿದ ಐಐಟಿ ದೆಹಲಿ ವಿದ್ಯಾರ್ಥಿ!

ಸಾರ್ವಜನಿಕ ಶೌಚಾಲಯಗಳ ಬಹಳ ದೊಡ್ಡ ಸಮಸ್ಯೆ ಕೆಟ್ಟ ವಾಸನೆ. ಅಲ್ಲಿಂದ ಬರುವ ವಾಸನೆ ನೋಡಿ ಪ್ರಯಾಣಿಕರಿಗೆ ಅಲ್ಲಿಗೆ ಹೋಗುವುದೇ ಬೇಡ ಎನಿಸುತ್ತದೆ. ತೀರಾ ಅನಿವಾರ್ಯವಾದರೆ ಮಾತ್ರ ಸಾರ್ವಜನಿಕ ಶೌಚಾಲಯ ಬಳಸುತ್ತಾರೆ, ಇನ್ನು ಪಕ್ಕದಲ್ಲಿ ಹಾದುಹೋಗುವ ಪಾದಚಾರಿಗಳಿಗೆ ಸಹ ವಾಸನೆ ಸಮಸ್ಯೆಯಾಗುತ್ತದೆ.
ಬಾತ್ ರೂಂ, ಟಾಯ್ಲೆಟ್ ಗಳ ವಾಸನೆ ದೂರ ಮಾಡುವ ಪೆಟ್ಟಿಗೆ ತಯಾರಿಸಿದ ಐಐಟಿ ದೆಹಲಿ ವಿದ್ಯಾರ್ಥಿ!

ಬೆಂಗಳೂರು: ಸಾರ್ವಜನಿಕ ಶೌಚಾಲಯಗಳ ಬಹಳ ದೊಡ್ಡ ಸಮಸ್ಯೆ ಕೆಟ್ಟ ವಾಸನೆ. ಅಲ್ಲಿಂದ ಬರುವ ವಾಸನೆ ನೋಡಿ ಪ್ರಯಾಣಿಕರಿಗೆ ಅಲ್ಲಿಗೆ ಹೋಗುವುದೇ ಬೇಡ ಎನಿಸುತ್ತದೆ. ತೀರಾ ಅನಿವಾರ್ಯವಾದರೆ ಮಾತ್ರ ಸಾರ್ವಜನಿಕ ಶೌಚಾಲಯ ಬಳಸುತ್ತಾರೆ, ಇನ್ನು ಪಕ್ಕದಲ್ಲಿ ಹಾದುಹೋಗುವ ಪಾದಚಾರಿಗಳಿಗೆ ಸಹ ವಾಸನೆ ಸಮಸ್ಯೆಯಾಗುತ್ತದೆ.


ಈ ಸಮಸ್ಯೆಯನ್ನು ಬಗೆಹರಿಸಲು ದೆಹಲಿಯ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಪಿ ಎಚ್ ಡಿ ಮಾಡುತ್ತಿರುವ ಮೊಹಮ್ಮದ್ ಫರಾಝ್ ಸುಮಾರು 500 ರೂಪಾಯಿ ಬೆಲೆಬಾಳುವ ಒಡೊರ್ ಕಿಲ್ಲರ್ ಎಂಬ ವಾಸನೆಯನ್ನು ದೂರ ಮಾಡುವ ಪೆಟ್ಟಿಗೆಯೊಂದನ್ನು ತಯಾರಿಸಿದ್ದಾರೆ. ಇದು ಶೌಚಾಲಯಗಳಿಂದ ಬರುವ ಕೆಟ್ಟ ವಾಸನೆಯನ್ನು ಹೊಡೆದೋಡಿಸುತ್ತದೆ. 


ಸಾಮಾನ್ಯವಾಗಿ ಬಾತ್ ರೂಂ, ಟಾಯ್ಲೆಟ್ ಗಳಿಂದ ಬರುವ ಕೆಟ್ಟ ವಾಸನೆ ದೂರ ಮಾಡಲು ಜನರು ಬಳಸುವ ಡಿ-ಒಡರೈಸರ್ ನಲ್ಲಿ ಕಾಟ್ರಿಡ್ಝ್ ಗಳನ್ನು ಪ್ರತಿ ಎರಡು ತಿಂಗಳಿಗೊಮ್ಮೆ ಬದಲಾಯಿಸಬೇಕಾಗುತ್ತದೆ. ಅಆದರೆ ಇವರ ಈ ಸಾಧನಕ್ಕೆ ಎರಡು ವರ್ಷಗಳಿಗೊಮ್ಮೆ ಕಾಟ್ರಿಡ್ಜ್ ಗಳನ್ನು ಬದಲಾಯಿಸಿಕೊಂಡರೆ ಸಾಕು.


ಫರಝ್ ಅವರು ನೀರನ್ನು ಶುದ್ಧೀಕರಿಸುವ ವಾಟರ್ ಪ್ಯೂರಿಫೈರ್ ನ್ನು ಕೂಡ ವಿನ್ಯಾಸಗೊಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com