ಸಾಮಾಜಿಕ ಜಾಲತಾಣಕ್ಕೆ ಮೋದಿ ವಿದಾಯ: ಟ್ವಿಟರ್ ಶುರುವಾಯ್ತು 'ನೋ ಸರ್' ಟ್ರೆಂಡ್

ಸಾಮಾಜಿಕ ಜಾಲತಾಣಗಳ ಮೂಲಕವೇ ದೇಶದಾದ್ಯಂತ ಜನರನ್ನು ತಲುಪುವ ಮೂಲ ಜನಪ್ರಿಯರಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದೀಗ ಸಾಮಾಜಿಕ ಜಾಲತಾಣಗಳಿಗೆ ವಿದಾಯ ಹೇಳುವ ಘೋಷಣೆ ಮಾಡಿದ್ದು, ಮೋದಿಯವರು ಈ ನರ್ಧಾರ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ: ಸಾಮಾಜಿಕ ಜಾಲತಾಣಗಳ ಮೂಲಕವೇ ದೇಶದಾದ್ಯಂತ ಜನರನ್ನು ತಲುಪುವ ಮೂಲ ಜನಪ್ರಿಯರಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದೀಗ ಸಾಮಾಜಿಕ ಜಾಲತಾಣಗಳಿಗೆ ವಿದಾಯ ಹೇಳುವ ಘೋಷಣೆ ಮಾಡಿದ್ದು, ಮೋದಿಯವರು ಈ ನರ್ಧಾರ ಭಾರೀ ಕುತೂಹಲಕ್ಕೆ ಕಾರಣವಾಗಿದೆ. 

ನಾನು ಎಲ್ಲಾ ಸಾಮಾಜಿಕ ಜಾಲತಾಣಗಳಿಂದ ಹೊರಬರುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಹೇಳಿ ಅವರು ಮಾಡಿರುವ ಟ್ವೀಟ್ ಇದೀಗ ನಾನಾ ಅನುಮಾನಗಳಿಗೆ ಕಾರಣವಾಗಿದೆ. 

ಭಾನುವಾರವಷ್ಟೇ ಟ್ವೀಟ್ ಮಾಡಿದ್ದ ಮೋದಿಯವರು ನಾನು ನನ್ನ ಫೇಸ್ ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಗೆ ವಿದಾಯ ಹೇಳುವ ಬಗ್ಗೆ ಚಿಂತಿಸುತ್ತಿದ್ದೇನೆ. ಈ ಬಗ್ಗೆ ಮತ್ತೆ ನಾನು ನಿಮಗೆ ತಿಳಿಸುತ್ತೇನೆಂದು ಹೇಳಿದ್ದರು. ಈ ಟ್ವೀಟ್ ಇದೀಗ ಭಾರೀ ವೈರಲ್ ಆಗುತ್ತಿದೆ. ಜೊತೆಗೆ ಈ ಟ್ವೀಟ್ ನ ಅರ್ಥ ಏನು ಎಂಬ ವಿಶ್ಲೇಷಣಗಳೂ ಭಾರೀ ಪ್ರಮಾಣದಲ್ಲಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಸೋಷಿಯಲ್ ಮೀಡಿಯಾದಲ್ಲಿ ಕೋಟ್ಯಾಂತರ ಅಭಿಮಾನಿಗಳು, ಹಿಂಬಾಲಕರನ್ನು ಹೊಂದಿರುವ ಮೋದಿ ನಿಜವಾಗಿಯೂ ಹೊರಹೋಗುತ್ತಾರಾ? ಅಥವಾ ಬೇರಾನಾದರೂ ನಿಗೂಢ ಅರ್ಥ ಇದೆಯಾ ಎಂಬ ಕುತೂಹಲ ಮೂಡತೊಡಗಿದೆ. 

ಸಾಮಾಜಿಕ ಜಾಲತಾಣಕ್ಕೆ ಮೋದಿಯವರು ವಿದಾಯ ಹೇಳುವ ಘೋಷಣೆ ಮಾಡುತ್ತಿದ್ದಂತೆಯೇ ಇದೀಗ ಟ್ವಿಟರ್ ನಲ್ಲಿ ನೋ ಸರ್ ಎಂಬ ಹೊಸ ಟ್ರೆಂಡ್ ಶುರುವಾಗಿದೆ. ಸುಮಾರು 26,000ಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. 

ವಿಶ್ವದೆಲ್ಲೆಡೆ ಇರುವ ಸಾಕಷ್ಟು ಜನರು ನಿಮ್ಮನ್ನು ಪ್ರೀತಿಸುತ್ತಾರೆ. ಲವ್ ಯು ಸೋ ಮಚ್ ಮೋದಿ ಜೀ. ನಿಮಗೆ ಬೇಕೆನಿಸದರೆ, ಕೆಲ ಕಾಲ ಸಾಮಾಜಿಕ ಜಾಲತಾಣಗಳಿಂದ ಬ್ರೇಕ್ ತೆಗೆದುಕೊಳ್ಳಿ. ಆದರೆ, ವಿದಾಯ ಹೇಳಬೇಡಿ ನಿಮಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ, #ನೋಸರ್ ಎಂದು ಜನರು ಟ್ವೀಟ್ ಮಾಡುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com