ಕರ್ನಾಟಕದಲ್ಲಿ ಸಕ್ಕರೆ, ಮದ್ಯ, ಪಾನೀಯ, ಪ್ರವಾಸೋದ್ಯಮ ಉದ್ಯಮಗಳಿಗೆ ಸಂಕಷ್ಟ: ಅಧ್ಯಯನ ವರದಿ 

ಅಧಿಕ ನಿಯಂತ್ರಣ, ಕಬ್ಬಿನ ಕಾರ್ಖಾನೆಗಳಲ್ಲಿನ ಬೆಲೆ ನಿಗದಿ, ಮದ್ಯ ಮತ್ತು ಪಾನೀಯ ಉದ್ಯಮದಲ್ಲಿ ಅನಿಯಮಿತ ಬೆಳವಣಿಗೆ, ಪ್ರವಾಸೋದ್ಯಮ ಉದ್ಯಮಗಳಲ್ಲಿ ಪರವಾನಗಿಯ ಏಕರೂಪತೆಯ ಕೊರತೆ ಇವೆಲ್ಲಾ ಕರ್ನಾಟಕದಲ್ಲಿ ಒತ್ತಡದಲ್ಲಿವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಕರ್ನಾಟಕದಲ್ಲಿ ಸಕ್ಕರೆ, ಮದ್ಯ, ಪಾನೀಯ, ಪ್ರವಾಸೋದ್ಯಮ ಉದ್ಯಮಗಳಿಗೆ ಸಂಕಷ್ಟ: ಅಧ್ಯಯನ ವರದಿ 

ಬೆಂಗಳೂರು: ಅಧಿಕ ನಿಯಂತ್ರಣ, ಕಬ್ಬಿನ ಕಾರ್ಖಾನೆಗಳಲ್ಲಿನ ಬೆಲೆ ನಿಗದಿ, ಮದ್ಯ ಮತ್ತು ಪಾನೀಯ ಉದ್ಯಮದಲ್ಲಿ ಅನಿಯಮಿತ ಬೆಳವಣಿಗೆ, ಪ್ರವಾಸೋದ್ಯಮ ಉದ್ಯಮಗಳಲ್ಲಿ ಪರವಾನಗಿಯ ಏಕರೂಪತೆಯ ಕೊರತೆ ಇವೆಲ್ಲಾ ಕರ್ನಾಟಕದಲ್ಲಿ ಒತ್ತಡದಲ್ಲಿರುವ ಉದ್ಯಮಗಳಾಗಿವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.


ಪಹ್ಲೆ ಇಂಡಿಯಾ ಫೌಂಡೇಶನ್ ನಡೆಸಿದ ಸುಲಭ ಉದ್ಯಮಕ್ಕೆ ಆಂತರಿಕ ಸರಪಳಿಯ ಮೌಲ್ಯ:ಸಕ್ಕರೆ, ಮದ್ಯ ಮತ್ತು ಪಾನೀಯ ಉದ್ಯಮಗಳ ಅಧ್ಯಯನ ಮತ್ತು ಪ್ರವಾಸೋದ್ಯಮ ವರದಿ ನಿನ್ನೆ ನಗರದಲ್ಲಿ ಬಿಡುಗಡೆಗೊಂಡಿತು. ಅಲ್ಕೋಹಾಲ್ ಸುಂಕ 2013ರಿಂದ ಶೇಕಡಾ 6ರಷ್ಟು ಏರಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ ಅದು ಹೆಚ್ಚಾಗುತ್ತಿದ್ದು ಅನಿಯಮಿತವಾಗಿದೆ. ಇದರಿಂದ ಉದ್ಯಮ ಯೋಜನೆ ಮತ್ತು ಮುಂದುವರಿಕೆಗೆ ಕಷ್ಟವಾಗುತ್ತದೆ. ಮದ್ಯಗಳ ಚಲನವಲನ ಮತ್ತು ಉತ್ಪಾದನೆಗೆ 44 ಹಂತಗಳು ಮತ್ತು ಅನುಮೋದನೆಗಳು ಬೇಕಾಗುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.


ಇನ್ನು ಸಕ್ಕರೆ ಉದ್ಯಮಕ್ಕೆ ಸಂಬಂಧಿಸಿದಂತೆ ಕೈಗಾರಿಕೆಗಳು ತೀವ್ರ ಒತ್ತಡದಲ್ಲಿವೆ. ಕಬ್ಬಿನ ಬೆಲೆ ಸಕ್ಕರೆ ಕಾರ್ಖಾನೆಗಳ ಮುಖ್ಯ ಸಮಸ್ಯೆಯಾಗಿದೆ. ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆ ಮಾಲೀಕರ ಮಧ್ಯೆ ಆದಾಯ ಹಂಚಿಕೆ ವಿಧಾನವನ್ನು ತರಬೇಕೆಂದು ರಂಗರಾಜನ್ ಸಮಿತಿ ಶಿಫಾರಸು ಮಾಡಿದೆ. ಅದನ್ನು ಜಾರಿಗೆ ತರುವ ಅಗತ್ಯವಿದೆ ಎಂದು ವರದಿ ಸಲಹೆ ನೀಡಿದೆ. 


ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ದೇಶಿ ಪ್ರವಾಸೋದ್ಯಮ ಏರಿಕೆಯಾಗಿದ್ದು ವಿದೇಶಿ ಪ್ರವಾಸೋದ್ಯಮ ಕುಸಿತ ಕಂಡುಬಂದಿದೆ. ವರದಿಯಲ್ಲಿ ಸಕ್ಕರೆ, ಮದ್ಯ-ಪಾನೀಯ ಮತ್ತು ಪ್ರವಾಸೋದ್ಯಮ ವಲಯಗಳ ಮಧ್ಯೆ ಅಂತರ ಸಂಬಂಧವನ್ನು ತಿಳಿಸಲಾಗಿದೆ. ಇವೆಲ್ಲವೂ ಒಂದಕ್ಕೊಂದು ಕೊಂಡಿಯಂತೆ ಕೆಲಸ ಮಾಡುತ್ತಿವೆ ಎಂದು ಫೌಂಡೇಶನ್ ನ ಮುಖ್ಯಸ್ಥೆ ನಿರುಪಮಾ ಸೌಂದರರಾಜನ್ ಹೇಳಿದ್ದಾರೆ.


ನಾವು ನೀಡಿದ ಶಿಫಾರಸು ಮೇರೆಗೆ ಮಹಾರಾಷ್ಟ್ರ 35 ಸುಧಾರಣೆಗಳನ್ನು ಜಾರಿಗೆ ತಂದಿದ್ದು, ಉತ್ತರ ಪ್ರದೇಶ 10 ಶಿಫಾರಸುಗಳನ್ನು ತಂದಿದೆ. ಕರ್ನಾಟಕ ಸರ್ಕಾರ ಕೂಡ ಶಿಫಾರಸುಗಳನ್ನು ಪರಿಗಣಿಸುತ್ತದೆ ಎಂದು ನಾವು ನಂಬಿದ್ದೇವೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com