ಕರೋನಾವೈರಸ್ ಭೀತಿ: ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ಗಳಿಗೆ ದಿಢೀರ್ ಭಾರಿ ಬೇಡಿಕೆ, ಬೆಲೆಯೂ ಏರಿಕೆ! 

ಕರ್ನಾಟಕ, ಬೆಂಗಳೂರಿನಲ್ಲಿ ಕರೋನಾ ವೈರಸ್ ಕಾಣಿಸಿಕೊಂಡಿರುವ ಸುದ್ದಿ ವರದಿಯಾಗುತ್ತಿರುವ ಬೆನ್ನಲ್ಲೇ ಜನರು ಸುರಕ್ಷತಾ ಕ್ರಮಗಳ ಮೊರೆ ಹೋಗುತ್ತಿದ್ದಾರೆ. 
ಕರೋನಾವೈರಸ್ ಭೀತಿ: ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ಗಳಿಗೆ ದಿಢೀರ್ ಭಾರಿ ಬೇಡಿಕೆ, ಬೆಲೆಯೂ ಏರಿಕೆ!
ಕರೋನಾವೈರಸ್ ಭೀತಿ: ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ಗಳಿಗೆ ದಿಢೀರ್ ಭಾರಿ ಬೇಡಿಕೆ, ಬೆಲೆಯೂ ಏರಿಕೆ!

ಬೆಂಗಳೂರು: ಕರ್ನಾಟಕ, ಬೆಂಗಳೂರಿನಲ್ಲಿ ಕರೋನಾ ವೈರಸ್ ಕಾಣಿಸಿಕೊಂಡಿರುವ ಸುದ್ದಿ ವರದಿಯಾಗುತ್ತಿರುವ ಬೆನ್ನಲ್ಲೇ ಜನರು ಸುರಕ್ಷತಾ ಕ್ರಮಗಳ ಮೊರೆ ಹೋಗುತ್ತಿದ್ದಾರೆ. 

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕರೋನಾ ವೈರಸ್ ಕೆಮ್ಮು, ಸೀನು ಹಾಗೂ ವೈರಾಣು ಪೀಡಿತ ವ್ಯಕ್ತಿ ಮಾತನಾಡುವುದರಿಂದಲೂ ಹರಡುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ, ನಗರದ ಜನತೆ ಫಾರ್ಮಸಿಗಳತ್ತ ದೌಡಾಯಿಸುತ್ತಿದ್ದು, ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಪರಿಣಾಮ ಈ ವಸ್ತುಗಳಿಗೆ ಫಾರ್ಮಸಿಗಳಲ್ಲಿ ದಿಢೀರ್ ಭಾರಿ ಬೇಡಿಕೆ ಉಂಟಾಗಿದೆ. 

ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮಾಸ್ಕ್, ಸ್ಯಾನಿಟೈಸರ್ ಗಳ ಉತ್ಪಾದಕರು ಹಾಗೂ ವಿತರಕರ ಬಳಿ ದಾಸ್ತಾನು ಖಾಲಿಯಾಗಿದ್ದು, ಕಳೆದ ಎರಡು ತಿಂಗಳಲ್ಲಿ ಪ್ರತಿ ಮಾಸ್ಕ್ ಗೆ 25 ಪೈಸೆಯಷ್ಟು ಏರಿಕೆಯಾಗಿದ್ದ ಬೆಲೆ ಈಗ ಒಮ್ಮೆಲೇ 80 ಪೈಸೆಗೆ ಏರಿಕೆಯಾಗಿದೆ. 

ವೈರಾಣುಗಳನ್ನು ನಿಗ್ರಹಿಸುವ ಸಾಮರ್ಥ್ಯ ಹೊಂದಿರುವ ಈ ಮಾಸ್ಕ್ ಗಳನ್ನು ಸೆಪ್ಟೆಂಬರ್ ನಲ್ಲಿ ಆಮದು ಮಾಡಿಕೊಳ್ಳಲಾಗಿತ್ತು, ಈಗ ಇದರ ಬೆಲೆ ಶೇ.100 ರಷ್ಟು ಏರಿಕೆಯಾಗಿದ್ದು, ಪೂರೈಕೆ ಕಡಿಮೆಯಾಗಿದ್ದರೆ, ಬೇಡಿಕೆ ಹೆಚ್ಚಿದೆ. ನಾವು ಚೀನಾದಿಂದ ಯಾವುದೇ ಮಾಸ್ಕ್ ಗಳನ್ನೂ ತರಿಸಿಲ್ಲ, ಭಾರತದಲ್ಲಿ ಉತ್ಪಾದನೆಯಾಗುತ್ತಿದೆ ಎನ್ನುತಾರೆ ಮಾಸ್ಕ್ ವಿತರಕ ಸಂಸ್ಥೆಯ ನಿರ್ದೇಶಕ ಗಗನ್ ಮೂರ್ತಿ. 

ಸರ್ಜಿಕಲ್ ಮಾಸ್ಕ್ ಹಾಗೂ N95 ಮಾಸ್ಕ್ ಗಳನ್ನು ವಿತರಿಸುವ ಶಾನ್ ಸರ್ಜಿಕಲ್ಸ್ ನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಮೋಹನ್ ಈ ಬಗ್ಗೆ ಮಾತನಾಡಿದ್ದು, ಸರ್ಕಾರ ಹೆಚ್ಚಿನ ಮಾಸ್ಕ್ ಗಳನ್ನು ಸಂಗ್ರಹಿಸದೇ ಇದ್ದಲ್ಲಿ ಪೂರೈಕೆ ಕುಗ್ಗುತ್ತದೆ. ಹಾಸ್ಪೆಟಲ್ ಗೌನ್ ಗಳೂ ಸದ್ಯಕ್ಕೆ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. 

ಭಾರತದಲ್ಲಿ ಕರೋನಾ ವೈರಸ್ ನ ಮೊದಲ ಪ್ರಕರಣ ಪತ್ತೆಯಾದ 24 ಗಂಟೆಗಳಲ್ಲೇ ಪ್ರತಿ ಮಾಸ್ಕ್ ನ ಬೆಲೆ 12 ರೂಪಾಯಿ ಏರಿಕೆಯಾಗಿತ್ತು. ಈಗ ಸಾಮಾನ್ಯ ಮಾಸ್ಕ್ ನ ದರ 28-30 ರೂಪಾಯಿಗಳಾಗಿದ್ದರೆ ಎನ್95 ಮಾಸ್ಕ್ ನ ದರ 250-800 ರೂಪಾಯಿ ವರೆಗೆ ಇದೆ ಎಂದು ರಾಜೇಶ್ ಮೋಹನ್ ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com