ದೊರೆಸ್ವಾಮಿ
ದೊರೆಸ್ವಾಮಿ

ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದರೆ ಪೆನ್ಶನ್ ಯಾಕೆ?

ಎಚ್.ಎಸ್.ದೊರೆಸ್ವಾಮಿ ಸ್ವಾತಂತ್ರ್ಯ ಹೋರಾ ಟಗಾರರಲ್ಲ ಎಂದರೇ ಮತ್ಯಾಕೆ ಪಿಂಚಣಿ ಕೊಡ್ತಿದ್ದೀರಿ? ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ಬೆಂಗಳೂರು: ಎಚ್.ಎಸ್.ದೊರೆಸ್ವಾಮಿ ಸ್ವಾತಂತ್ರ್ಯ ಹೋರಾ ಟಗಾರರಲ್ಲ ಎಂದರೇ ಮತ್ಯಾಕೆ ಪಿಂಚಣಿ ಕೊಡ್ತಿದ್ದೀರಿ? ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಯಾಕೆ ಅವರನ್ನು ಕ್ರಿಮಿನಲ್ ರೀತಿ ನಡೆಸಿ ಕೊಳ್ತಿದ್ದೀರಿ. ಯಾರಿಗೆ ಎಷ್ಟು ಗೌರವ ಕೊಡಬೇಕೋ ಅಷ್ಟು ಗೌರವ ಕೊಡಬೇಕು. 

ದೊರೆಸ್ವಾಮಿ ಅವರನ್ನು ಕ್ರಿಮಿನಲ್ ರೀತಿ ಬಿಂಬಿಸಲು ಮುಂದಾಗಿರುವುದು ಸರಿಯಲ್ಲ. ಅವರ ಸೇವೆ ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಪ್ರತಿಯೊಬ್ಬರು ಸ್ಮರಿಸಬೇಕು. ಬರೀ ಯತ್ನಾಳ್ ಹೇಳಿಕೆ ಮಾತ್ರವಲ್ಲ, ಇಡೀ ಬಿಜೆಪಿಗರು ಅವರ ಹೇಳಿಕೆ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.

ನಮ್ಮನ್ನು ಬೆಂಬಲಿಸುವರು ಮಾತ್ರ ಒಳ್ಳೆಯವರು ಎನ್ನುವುದು ಸರಿಯಲ್ಲ. ಅಲ್ಲದೆ, ದೊರೆಸ್ವಾಮಿ ಅವರಂತಹ ವ್ಯಕ್ತಿಗಳು ಹೋರಾಟ ಮಾಡಿದ ಕಾರಣದಿಂದಲೇ ನಾವು ಇಂದು ಶಾಸಕರಾಗಿ ಸದನದೊಳಗೆ ಇದ್ದೇವೆ ಎಂದು ಅವರು ಹೇಳಿದರು

ನನಗೂ 59 ವರ್ಷ ಆಯ್ತು ಈಗ, ಕೆಲವು ಮೆಂಟಲ್ ಕೇಸ್ ಗಳು ಏನೇ ನೋ ಮಾತಾಡ್ತಾರೆ ಬಿಡಿ, ಮಾತಾಡಲಿ. ಮಾತಾಡಿ ದವರ ವಿರುದ್ಧ ಮೂರ್ನಾಲ್ಕು ಕೋಟಿ ಕೇಸ್ ಹಾಕಿದಿನಿ. ನೋಡಿ ರಾಜಕಾರಣದಲ್ಲಿ ಹೀರೋಗಳೆಲ್ಲ ಝಿರೋ ಆಗ್ತಾರೆ, ಝಿರೋಗಳೆಲ್ಲ ಹೀರೋ ಆಗ್ತಾರೆ ಎಂದು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com