ಕೊರೋನಾ ಬಾಧಿತರಿಗೆ 28 ದಿನ ವೇತನ ಸಹಿತ ರಜೆ: ಕಾರ್ಮಿಕ ಇಲಾಖೆ ಸುತ್ತೋಲೆ

ಮಾರಕ ಕೊರೋನಾವೈರಸ್ ಬಾಧಿತ ಕಾರ್ಮಿಕರಿಗೆ 28 ದಿನ ವೇತನ ಸಹಿತ ರಜೆ ನಿಡಬೇಕೆಂದು ಖಾರ್ಮಿಕ ಇಲಾಖೆ ಸುತ್ತೋಲೆ ಹೊರಡಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾರಕ ಕೊರೋನಾವೈರಸ್ ಬಾಧಿತ ಕಾರ್ಮಿಕರಿಗೆ 28 ದಿನ ವೇತನ ಸಹಿತ ರಜೆ ನಿಡಬೇಕೆಂದು ಖಾರ್ಮಿಕ ಇಲಾಖೆ ಸುತ್ತೋಲೆ ಹೊರಡಿಸಿದೆ.

ದೇಶದಲ್ಲಿ ದಿನದಿನಕ್ಕೆ ಕೊರೋನಾ ಹಾವಳಿ ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ರಾಜ್ಯದ ಯಾವುದೇ ಕಾರ್ಮಿಕ ಅಥವಾ ಉದ್ಯೋಗಿ ಕೊರೋನಾ ಪೀಡಿತನಾಗಿದ್ದರೆ ಆತನಿಗೆ 28 ದಿನ ವೇತನ ಸಹಿತ ರಜೆ  ನೀಡಬೇಕೆಂದು ಕಾರ್ಮಿಕ ಇಲಾಖೆ ಆದೇಶಿಸಿದೆ.

ಕೊರೋಣಾ ಕಾರಣಕ್ಕೆ ರಜೆ ಪಡೆಯಬೇಕಾದ ಇಎಸ್‌ಐ ಕಾಯ್ದೆ ಅನ್ವಯವಾಗುವ ಸಂಸ್ಥೆಗಳ ಕಾರ್ಮಿಕರು, ತಮ್ಮ ಹತ್ತಿರದ ಇಎಸ್‌ಐ ಔಷಧಾಲಯ, ಆಸ್ಪತ್ರೆಗಳಿಗೆ ತೆರಳಿ, ಸದರಿ ಆಸ್ಪತ್ರೆಗಳಲ್ಲಿನ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರವನ್ನು ಪಡೆಯಬೇಕು  ಹೀಗೆ ಪ್ರಮಾಣ ಪತ್ರ ಪಡೆಯಲು ಬರುವ ಕಾರ್ಮಿಕರಿಗೆ ಎಲ್ಲಾ ಇಎಸ್‌ಐ ಅಧಿಕಾರಿಗಳೂ ತುರ್ತು ಪರೀಕ್ಷೆ ನಡೆಸಿ ಅಗತ್ಯ ಪ್ರಮಾಣ ಪತ್ರ ವಿತರಿಸಬೇಕು. 

ಹೀಗೆ ಕಾರ್ಮಿಕರು ಪ್ರಮಾಣಪತ್ರ ಪಡೆದು ಅದನ್ನು ತಮ್ಮ ಸಂಸ್ಥೆಗೆ ನೀಡಿದ ತಕ್ಷಣ ಅಂತಹಾ ಕಾರ್ಮಿಕರಿಗೆ 28 ದಿನಗಳ ರಜೆಯನ್ನು ಕಡ್ಡಾಯವಾಗಿ ಮಂಜೂರು ಮಾಡಬೇಕು 

ಇನ್ನು ಇಎಸ್‌ಐ ಕಾಯ್ದೆ ಅನ್ವಯಿಸದ ಕಾರ್ಮಿಕರಿಗೆ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಲಂ 15(3) ಅನ್ವಯ 28 ದಿನಗಳ ವೇತನ ಸಹಿತ ಅನಾರೋಗ್ಯದ ರಜೆ ಮತ್ತು ಇತರೆ ರಜೆಯನ್ನು ಕಡ್ಡಾಯವಾಗಿ ಮಂಜೂರು ಮಾಡಬೇಕು ಎಂದು ಸುತ್ತೋಲೆಯಲ್ಲಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com