ಕೊರೋನಾ ವೈರಸ್ ಭೀತಿ: ಎಲ್ಲೆಡೆ ಕಟ್ಟೆಚ್ಚರ, ವದಂತಿ ಹರಡುವವರ ವಿರುದ್ಧ ಕಠಿಣ ಕ್ರಮ

ಹೈದರಾಬಾದ್ ಟೆಕಿ ಮೂಲಕ ರಾಜ್ಯಕ್ಕೂ ಕೊರೋನಾ ವೈರಸ್ ಭೀತಿ ಹೆಚ್ಚಿದ್ದು, ಎಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ, ಕೊರೋನಾ ಕುರಿತು ಯಾವುದೇ ರೀತಿಯಲ್ಲಿ ವದಂತಿ ಹಬ್ಬಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹೈದರಾಬಾದ್ ಟೆಕಿ ಮೂಲಕ ರಾಜ್ಯಕ್ಕೂ ಕೊರೋನಾ ವೈರಸ್ ಭೀತಿ ಹೆಚ್ಚಿದ್ದು, ಎಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ, ಕೊರೋನಾ ಕುರಿತು ಯಾವುದೇ ರೀತಿಯಲ್ಲಿ ವದಂತಿ ಹಬ್ಬಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. 

ಕರ್ನಾಟಕದಲ್ಲಿ ಕೊರೋನಾ ಸೋಂಕಿತ ಆತಂಕ ಇಲ್ಲ. ವೈರಸ್ ಕುರಿತು ಯಾವುದೇ ರೀತಿಯಲ್ಲಿ ವದಂತಿ ಹಬ್ಬಿಸಿದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆಂದು ಆರೋಗ್ಯ ಇಲಾಖೆ ಆಯುಕ್ತ ಪಂಕಚ್ ಕುಮಾರ್ ಪಾಂಟೆ ಎಚ್ಚರಿಕೆ ನೀಡಿದ್ದಾರೆ. 

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ಮಾತನಾಡಿರುವ ಅವರು, ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದರೆ ಆರೋಗ್ಯ ಇಲಾಖೆ ಸಹಾಯವಾಣಿ 104ಕ್ಕೆ ಸಂಪರ್ಕಿಸಿ ಎಂದು ತಿಳಿಸಿದ್ದಾರೆ. 

ಈ ನಡುವೆ ರಾಜ್ಯಾದ್ಯಂತ ಆತಂಕಕ್ಕೆ ಕಾರಣಾಗಿದ್ದ ತೆಲಂಗಾಣದ ಕೊರೋನಾ ಸೋಂಕಿನ ಟೆಕ್ಕಿಯ ಬೆಂಗಳೂರಿನ ಪ್ಲ್ಯಾಟ್'ಮೇಟ್ ಹಾಗೂ ಸಹೋದ್ಯೋಗಿ ಸೇರಿ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಗೆ ದಾಖಲಾಗಿದ್ದ 5 ಶಂಕಿತರಿಗೂ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಹೀಗಾಗಿ ರಾಜ್ಯ ಸದ್ಯಕ್ಕೆ ಕೊರೋನಾದಿಂದ ಸುರಕ್ಷಿತವಾಗಿದೆ. 

ಕೊರೋನಾ ಸೋಂಕಿನ ಸಂಕೆಯಿಂದಾಗಿ ಹೈದರಾಬಾದ್ನಲ್ಲಿ ಸೋಂಕು ದೃಢಪಟ್ಟಿದ್ದ ಟೆಕ್ಕಿಯ ಬೆಂಗಲೂರಿನ ಫ್ಲ್ಯಾಟ್'ಮೇಟ್ ಹಾಗೂ ಸಹೋದ್ಯೋಗಿಯನ್ನು ಈ ಹಿಂದೆ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com