ಕೊರೋನಾ ಮುಂಜಾಗ್ರತೆ ವಹಿಸುವಲ್ಲಿ ಇಡೀ‌ ದೇಶದಲ್ಲೇ ಒನ್ ಆಫ್ ದಿ ಬೆಸ್ಟ್ ಸ್ಟೇಟ್ ನಮ್ಮದು: ಡಾ.ಸುಧಾಕರ್ 

ಕೋವಿಡ್ 19 ವೈರಾಣು ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಳ್ಳುವಲ್ಲಿ ನಮ್ಮ ರಾಜ್ಯ ಇಡೀ‌ ದೇಶದಲ್ಲೇ ಒನ್ ಆಫ್ ದಿ ಬೆಸ್ಟ್ ಸ್ಟೇಟ್ ಎನ್ನುವ ಹೆಗ್ಗಳಿಕೆ ಪಡೆದಿದೆ ಹಾಗಾಗಿ ಯಾರೂ ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ
ಡಾ.ಸುಧಾಕರ್
ಡಾ.ಸುಧಾಕರ್

ಬೆಂಗಳೂರು: ಕೋವಿಡ್ 19 ವೈರಾಣು ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಳ್ಳುವಲ್ಲಿ ನಮ್ಮ ರಾಜ್ಯ ಇಡೀ‌ ದೇಶದಲ್ಲೇ ಒನ್ ಆಫ್ ದಿ ಬೆಸ್ಟ್ ಸ್ಟೇಟ್ ಎನ್ನುವ ಹೆಗ್ಗಳಿಕೆ ಪಡೆದಿದೆ ಹಾಗಾಗಿ ಯಾರೂ ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ‌ ಧರ್ಮಸೇನಾ,ಸೀನು ಬಂದರೆ, ಕೆಮ್ಮಿದ್ರೆ ಕೊರೊನಾ ವೈರಸ್ ಹರಡುತ್ತದೆ ಎಂದು ತಿಳಿದು ಬಂದಿದೆ ಹೀಗಾಗಿ ನಾನು ಸೀನುವುದಕ್ಕೂ ಭಯವಾಗ್ತಿದೆ ಎಂದರು. ಬಿಜೆಪಿ‌ ಸದಸ್ಯ ಪ್ರಾಣೇಶ್ ಮಾತನಾಡಿ, ಇದೊಂದು ಗಂಭೀರ ವಿಚಾರ. ಇದರ ಬಗ್ಗೆ ಗಂಭೀರ ಚರ್ಚೆ ಮಾಡಬೇಕು.ಸರ್ಕಾರ ವೈರಸ್ ನಿಯಂತ್ರಣ ಮಾಡಲು ಸೂಕ್ತ ಕ್ರಮ ವಹಿಸಬೇಕು.ಮಾಸ್ಕ್ಗಳನ್ನು ಉಚಿತವಾಗಿ ವಿತರಿಸಬೇಕು ಎಂದರು. ಕಾಂಗ್ರೆಸ್ ನ ಐವಾನ್ ಡಿಸೋಜ,ಮಾಸ್ಕ್ ಮಾರಾಟದಲ್ಲಿ ಮೋಸ ಆಗುತ್ತಿದೆ. ಗಡಿಗಳಲ್ಲಿ ಹೆಚ್ಚಿನ ಬೆಲೆಗೆ ಮಾಸ್ಕ್ ಮಾರಾಟ ಮಾಡುತ್ತಿದ್ದಾರೆ ಇದನ್ನು ತಡೆಗಟ್ಟಬೇಕು ಎಂದರು.

 ಬಿಜೆಪಿಯ ನಾರಾಯಣ ಸ್ವಾಮಿ, ಕೊರೊನಾ ವೈರಸ್ ಗೆ ಆಯುರ್ವೇದದಲ್ಲಿ ಔಷಧಿ ಇದ್ಯಾ...? ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಆರ್ಯುವೇದ ಔಷಧಿ ಮಾರಾಟ ಮಾಡುತ್ತಿದ್ದಾರೆ.ಇದಕ್ಕೆ ಕಡಿವಾಣ ಹಾಕಬೇಕು ಎಂದರು.

ಮಾಸ್ಕ್ ಧಾರಣೆ ಅನಗತ್ಯವಾಗಿದ್ದು, ಜನರಲ್ಲಿ ಭೀತಿ ಹುಟ್ಟಿಸುತ್ತದೆ
ಕೊರೋನಾ ವೈರಸ್ ಭೀತಿಯಿಂದಾಗಿ ಧರಿಸುವ ಮಾಸ್ಕ್ ಗಳು ಅನಗತ್ಯವಾಗಿದ್ದು, ಜನರಲ್ಲಿ ಭೀತಿ ಹುಟ್ಟಿಸುತ್ತದೆ. ಹೀಗಾಗಿ ಅಗತ್ಯತೆ ಇಲ್ಲದವರು ಮಾಸ್ಕ್ ಧರಸದಿರುವಂತೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಕರ್ನಾಟಕದಲ್ಲಿ ಈ ವರೆಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಈ ವರೆಗೆ ಅಂತರಾಷ್ಟ್ರೀ ವಿಮಾನ ನಿಲ್ದಾಣಗಲಲ್ಲಿ ವಿವಿಧ ದೇಸಗಳಿಂದ ಬಂದ 42 ಸಾವಿರಕ್ಕೂ ಹೆಚ್ಚು ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದೆ. ಈ ಪೈಕಿ ಕೊರೋನಾ ಬಾಧಿತ 11 ದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದ 468 ಪ್ರಯಾಣಿಕರನ್ನು ಗುರ್ತಿಸಿ ತಪಾಸಣೆ ನಡೆಸಿ ಮನೆಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಅವರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಲ್ಲಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು ಎಂದು ವಿವರಿಸಿದ್ದಾರೆ. 

ಕೊರೋನಾ ಬಾಧಿತ ವ್ಯಕ್ತಿಗಳನ್ನು 14 ದಿನಗಳ ಕಾಲ ಪ್ರತ್ಯೇಕವಾಗಿ ಇರಿಸುವಂತೆ ವಿಶ್ವಸಂಸ್ಥೆ ಮಾರ್ಗಸೂಚಿ ನೀಡಿದ್ದರೂ, ರಾಜ್ಯದಲ್ಲಿ 28 ದಿನಗಳ ಕಾಲ ಪ್ರತ್ಯೇಕವಾಗಿರಿಸಿ, ವೈದ್ಯಕೀಯ ಸಲಹೆ ನೀಡಲಾಗುವುದು. ರಾಜ್ಯ ವಿವಿಧ 50 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ ಪ್ರತ್ಯೇಕ ಹಾಸಿಗೆಗಳನ್ನು ಚಿಕಿತ್ಸೆ ನೀಡಲು ಕಾಯ್ದಿರಿಸಲಾಗಿದೆ. ಆಸ್ಪತ್ರೆಗಲಿಗೆ ಅವಶ್ಯವಿರುವ ವೆಂಟಿಲೇಟರ್ಸ್, ಔಷಧಿಗಳು, ವೈಯಕ್ತಿಕ ರಕ್ಷಣಾ ಸಲಕರಣೆಗಲು ಮತ್ತು ಮಾಸ್ಕ್ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಮಟ್ಟದ ನೋಡಲ್ ತಂಡ ಹಾಗೂ ಎಲ್ಲಾ ಜಿಲ್ಲಗಳಲ್ಲಿ ತ್ವರಿತ ಪ್ರಕ್ರಿಯಾ ತಂಡ ರಚಿಸಲಾಗಿದೆ ಎಂದು ತಿಳಿಸಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com