ಉಪನ್ಯಾಸಕರಿಂದ ಚಿತ್ರಹಿಂಸೆ: ಹೆಬ್ರಿ ಸರ್ಕಾರಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ!

ಕಾಲೇಜು ಉಪನ್ಯಾಸಕ ವರ್ಗದಿಂದ ತನಗೆ ಅವಮಾನವಾಗಿದೆ, ಎಂದು ಆರೋಪಿಸಿ ವಿದ್ಯಾರ್ಥಿಯೊಬ್ಬ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರ ಪೋಲೀಸ್ ಠಾಣೆ ಮಿತಿಯಲ್ಲಿ ನಡೆದಿದೆ.
ಉಪನ್ಯಾಸಕರಿಂದ ಚಿತ್ರಹಿಂಸೆ: ಹೆಬ್ರಿ ಸರ್ಕಾರಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ!
ಉಪನ್ಯಾಸಕರಿಂದ ಚಿತ್ರಹಿಂಸೆ: ಹೆಬ್ರಿ ಸರ್ಕಾರಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ!

ಉಡುಪಿ: ಕಾಲೇಜು ಉಪನ್ಯಾಸಕ ವರ್ಗದಿಂದ ತನಗೆ ಅವಮಾನವಾಗಿದೆ, ಎಂದು ಆರೋಪಿಸಿ ವಿದ್ಯಾರ್ಥಿಯೊಬ್ಬ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರ ಪೋಲೀಸ್ ಠಾಣೆ ಮಿತಿಯಲ್ಲಿ ನಡೆದಿದೆ.

ಮೃತನನ್ನು 19 ವರ್ಷದ ಚರಣ್ ಶೆಟ್ಟಿ ಎಂದು ಗುರುತಿಸಲಾಗಿದ್ದು ಈತ ತಂದೆ, ತಾಯಿ ಹಾಗೂ ತಂಗಿಯೊಡನೆ ವಾಸವಿದ್ದನು. ಅಲ್ಲದೆ ಚರಣ್ ಹೆಬ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. 

ಮೂಲಗಳ ಪ್ರಕಾರ, ಚರಣ್ ತರಗತಿಗಳಿಗೆ ನಿಯಮಿತವಾಗಿ ಹಾಜರಾಗುತ್ತಿರಲಿಲ್ಲ. ಅಲ್ಲದೆ ತರಗತಿಗೆ ಮದ್ಯಪಾನ ಮಾಡಿ ಬರುತ್ತಿದ್ದ. ಇದರಿಂದಾಗಿ ಆತನ ನಡವಳಿಕೆಗಳನ್ನು ಬದಲಿಸಿಕೊಳ್ಳುವಂತೆ ಕಾಲೇಜು ಉಪನ್ಯಾಸಕರು ಅವನಿಗೆ ತಿಳಿಹೇಳಿದ್ದಾರೆ.

ಚರಣ್ ನಿಯಮಿತವಾಗಿ ತರಗತಿಗೆ ಹಾಜರಾಗುತ್ತಿಲ್ಲದ ಕಾರಣ ಪರೀಕ್ಷೆಗೆ ಹಾಜರಾಗಲು ಹಾಜರಾತಿ ಕೊರತೆಯನ್ನು ಎದುರಿಸುತ್ತಿದ್ದ. ಹಾಜರಾತಿ ಕೊರತೆಯಿಂದಾಗಿ ಪರೀಕ್ಷೆಗೆ ಹಾಜರಾಗಲು ತೊಂದರೆಯಾಗಬಹುದು ಎಂದು ಕಾಲೇಜಿನ ಪ್ರಾಂಶುಪಾಲ ಎಂ ಆರ್ ಮಂಜುನಾಥ್ ಚರಣ್ ಗೆ ಎಚ್ಚರಿಕೆಯನ್ನೂ ನೀಡಿದ್ದರು. ಈ ಬಗ್ಗೆ ತಾನು ಇತರೆ ಸಹೋದ್ಯೋಗಿಗಳ ಜತೆ ಚರ್ಚಿಸುತ್ತೇನೆ ಎಂದು ಅವರು ಹೇಳೀದ್ದರು.

ಮಂಗಳವಾರ ಚರಣ್ ತಂದೆ ಚಂದ್ರಶೆಟ್ಟಿ ಕೂಡ ಪ್ರಾಂಶುಪಾಲರನ್ನು ಭೇಟಿಯಾಗಿದ್ದಾರೆ. ಆದರೆ ಬುಧವಾರ ಮಧ್ಯಾಹ್ನ  1.30 ಕ್ಕೆ ಕಾಲೇಜಿನಿಂದ ಮನೆಗೆ ಆಗಮಿಸಿದ್ದ ಚರಣ್ ಮನೆಯಲ್ಲಿ ಬ್ಯಾಗನ್ನಿಟ್ಟು ಹೊರಹೋದವನು ಮತ್ತೆ ಹಿಂತಿರುಗಿಲ್ಲ. ಚರಣ್ ತಾನು ಸಾಯುವ ಮುನ್ನ ತನ್ನೋರ್ವ ಸ್ನೇಹಿತನಿಗೆ ಮೊಬೈಲ್ ಸಂದೇಶ ರವಾನಿಸಿದ್ದಾನೆ. "ನನಗೆ ಕಾಲೇಜಿನಲ್ಲಿ ಉಪನ್ಯಾಸಕರಿಂದ ಅವಮಾನವಾಗಿದೆ. ಇದನ್ನು ನನ್ನಿಂದ ಸಹಿಸಲು ಸಾಧ್ಯವಿಲ್ಲ ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ" ಎಂದು ಸಂದೇಶ ರವಾನಿಸಿದ್ದಾನೆ.

ಬುಧವಾರ ಸಂಜೆ 5.45 ರ ಸುಮಾರಿಗೆ ಮೈರ್ಕೋಮೆ ಅರಣ್ಯ ಪ್ರದೇಶದಲ್ಲಿ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಚರಣ್ ಮೃತದೇಹ ಪತ್ತೆಯಾಗಿದೆ. ಅಲ್ಲದೆ ಘಟನಾ ಸ್ಥಳದಲ್ಲಿ ಸಹ ಡೆತ್ ನೋಟ್ ದೊರಕಿದ್ದು ಅದರಲ್ಲಿ ತನ್ನ ಉಪನ್ಯಾಸಕರಿಂದಾದ ಅವಮಾನದಿಂದ ನೊಂದು ಆತ್ಮಹತ್ಯೆ ನಿರ್ಧಾರ ಮಾಡಿದ್ದೇನೆ ಎಂದು ಬರೆದಿದೆ. ಚರಣ್ ಅವರ ತಂದೆಯ ದೂರಿನ ಆಧಾರದ ಮೇಲೆ ಕಾಲೇಜಿನ ಮೂರು ಅಧ್ಯಾಪಕರ ವಿರುದ್ಧ ಐಪಿಸಿಯ ಸೆಕ್ಷನ್ 306 (ಆತ್ಮಹತ್ಯೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬ್ರಹ್ಮವಾರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಘವೇಂದ್ರ ಸಿ ಪತ್ರಿಕೆ ತಿಳಿಸಿದರು. ಇದೇ ವೇಳೆ ಪೋಲೀಸರ ಪ್ರಾಥಮಿಕ ತನಿಖೆ ವೇಳೆ ಮೃತನ ತಂದೆ ತನ್ನ ಮಗ ಕುಟುಂಬ ಸದಸ್ಯರು ಹೇಳಿದಂತೆ ನಡೆದುಕೊಳ್ಳುತ್ತಿರಲಿಲ್ಲ. ಅವನದೇ ಹಠ ಸಾಧಿಸುತ್ತಿದ್ದನೆಂದು ಒಪ್ಪಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com