ಬಳ್ಳಾರಿಯಲ್ಲಿ ಶಂಕಿತ ಮೂರು ಕೊರೋನಾ ಪ್ರಕರಣ ಪತ್ತೆ

ಹೈದರಾಬಾದ್ ಕರ್ನಾಟಕದ ಬಳ್ಳಾರಿಯಲ್ಲಿ ಕರೋನ್ ವೈರಾಸ್ ನ ಮೂರು ಶಂಕಿತ  ಪ್ರಕರಣಗಳು ಪತ್ತೆಯಾಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಳ್ಳಾರಿ: ಹೈದರಾಬಾದ್ ಕರ್ನಾಟಕದ ಬಳ್ಳಾರಿಯಲ್ಲಿ ಕರೋನ್ ವೈರಾಸ್ ನ ಮೂರು ಶಂಕಿತ  ಪ್ರಕರಣಗಳು ಪತ್ತೆಯಾಗಿವೆ.

ಒಂದು ಪ್ರಕರಣ ಹೊಸಪೇಟೆಯಲ್ಲಿ ಪತ್ತೆಯಾಗಿದ್ದು. ಈ ವ್ಯಕ್ತಿ ದುಬೈನಿಂದ ಬಂದ್ದಿದ್ದು ಆತನಿಗೆ ಕೊರೋನಾ ರೋಗದ ಕೆಲ ಗುಣ ಲಕ್ಷಣಗಳು ಕಂಡು ಬಂದಿವೆ. ಆತನಿಗೆ ಕೊರೋನಾ ಸೋಂಕ ಇದೆಯಾ ಇಲ್ಲವೆ ಎನ್ನುವ ಕುರಿತು ಪರೀಕ್ಷೆ ಮಾಡಲು ಮಾದರಿಯನ್ನು ಬೆಂಗಳೂರಿಗೆ ಕಳುಹಿಸಲಾಗಿದೆ.

ಮತ್ತೊಂದು ಪ್ರಕರಣ ತೋರಣಗಲ್ಲಿನ ಜಿಂದಾಲ್  ಪ್ರದೇಶದಲ್ಲಿ  ವರದಿಯಾಗಿದ್ದು ಇದನ್ನು ಇಂದು ಪರೀಕ್ಷೆಗೆ ಕಳುಹಿಸಲಾಗಿದೆ ಎನ್ನಲಾಗಿದೆ. ಜಿಲ್ಲಾಧಿಕಾರಿ ನಕುಲ್ ಸುದ್ದಿಗಾರರ ಜತೆ ಮಾತನಾಡಿ, ಈ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ. ಹೊರಗಿನಿಂದ ಬಂದ ವ್ಯಕ್ತಿಗಳಿಗೆ ಸೋಂಕು ಇರಬಹುದು ಎಂಬ ಶಂಕೆ ಮೇರೆಗೆ ಪರೀಕ್ಷೆ ಮಾಡಲು ಸೂಚಿಸಲಾಗಿದೆ. 

ನಮ್ಮಲ್ಲಿನ ಜನರಲ್ಲಿ ಕರೋನಾ ಲಕ್ಷಣಗಳು ಕಂಡು‌ಬಂದಿಲ್ಲ. ಜನರು ಯಾವುದೇ ಕಾರಣಕ್ಕೆ ಈ ಕುರಿತು ವದಂತಿ ಸುದ್ದಿಗಳಿಗೆ ಕಿವಿಗಿಡಬೇಡಿ. ಇಲ್ಲಿ ಸಕಾಲಕ್ಕೆ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಎಲ್ಲಾ ಸಿದ್ದತೆ ಮಾಡಿಕೊಂಡಿದೆ. ಇಂದು ಎರಡು‌ ಪ್ರಕರಣಗಳನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com