ಅಯೋಧ್ಯೆಯಲ್ಲಿ ರಾಮಭಕ್ತಿ, ಕೊಪ್ಪಳದಲ್ಲಿ ಹನುಮ ಶಕ್ತಿ; ಆಂಜನೇಯಸ್ವಾಮಿ ದೇವಾಲಯಕ್ಕೆ 20 ಕೋಟಿ
ಪ್ರವಾಸೋದ್ಯಮ ಇಲಾಖೆಗೆ ಬಜೆಟ್ ನಲ್ಲಿ 500 ಕೋೋಟಿ ರು ಮೀಸಲಿಟ್ಟಿರುವ ಮುಖ್ಯಮಂತ್ರಿ ಯಡಿಯೂರಪ್ಪ ಕೊಪ್ಪಳದ ಆಂಜನೇಯ ಸ್ವಾಮಿ ದೇವಾಲದ ಅಭಿವೃದ್ಧಿಗಾಗಿ 20 ಕೋಟಿ ರೂ ನೀಡಿದ್ದಾರೆ.
Published: 06th March 2020 12:16 PM | Last Updated: 06th March 2020 12:16 PM | A+A A-

ಹನುಮ ಜನ್ಮ ಸ್ಥಳ
ಬೆಂಗಳೂರು: ಪ್ರವಾಸೋದ್ಯಮ ಇಲಾಖೆಗೆ ಬಜೆಟ್ ನಲ್ಲಿ 500 ಕೋೋಟಿ ರು ಮೀಸಲಿಟ್ಟಿರುವ ಮುಖ್ಯಮಂತ್ರಿ ಯಡಿಯೂರಪ್ಪ ಕೊಪ್ಪಳದ ಆಂಜನೇಯ ಸ್ವಾಮಿ ದೇವಾಲದ ಅಭಿವೃದ್ಧಿಗಾಗಿ 20 ಕೋಟಿ ರೂ ನೀಡಿದ್ದಾರೆ.
ಬಿಜೆಪಿಯ ಪ್ರಣಾಳಿಕೆಯಲ್ಲಿ ಅಯೋಧ್ಯೆ ಸಮಿತಿ ರಚನೆ ಒಂದು ಭಾಗವಾಗಿತ್ತು, ಅದರ ಅಂಗವಾಗಿ ಕೊಪ್ಪಳದ ದೇವಾಲಯ ಅಭಿವೃದ್ಧಿಗೆ ಹಣ ನೀಡಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಯೋಧ್ಯೆ ಟ್ರಸ್ಟ್ ನಿರ್ಮಾಣವಾದ ಮಾದರಿಯಲ್ಲಿಯೇ ಆಂಜನೇಯ ಟ್ರಸ್ಟ್ ಸ್ಥಾಪಿಸಲಾಗಿದೆ. ಸರ್ಕ್ಯೂಟ್ ಪೂರ್ಣಗೊಳಿಸುವಲ್ಲಿ ಸರ್ಕಾರದ ಕ್ರಮ ಉತ್ತಮವಾದುದ್ದಾಗಿದೆ.
ರಾಮಾಯಣದಲ್ಲಿ ಕಿಷ್ಕಿಂಧೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಬಗ್ಗೆ ಉಲ್ಲೇಖವಿದೆ. ಎಂದು ಹೇಳಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ ಕಾರ್ಯಗಳನ್ನು ತ್ವರಿತವಾಗಿ ಮಾಡಲು ಸರ್ಕಾರ ಮುಂದಾಗಿರುವುದು ಒಳ್ಳೆಯದೇ, ಆದರೆ ಹಪಿ ಮತ್ತಿತರ ಪಾರಂಪರಿಕ ಸ್ಥಳಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ ಎಂದು ಕೆಲ ತಜ್ಞರು ಅಸಮಾಧನ ವ್ಯಕ್ತ ಪಡಿಸಿದ್ದಾರೆ.
ನೀತಿ ನಿಯಮಗಳನ್ನು ರೂಪಿಸುವಾಗ ಸರ್ಕಾರ ಸ್ಥಳೀಯರ ಅಗತ್ಯತೆ ಮತ್ತು ಬೇಡಿಕೆಗಳ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ.