ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಿಸಿದರೆ ರಾಜ್ಯಕ್ಕೆ 130 ಟಿಎಂಸಿ ನೀರು

ಬಾಗಲಕೋಟೆಯ ಚಿಕ್ಕಸಂಗಮದಲ್ಲಿ ಕೃಷ್ಣಾ ಮತ್ತು ಘಟಪ್ರಭಾ ನದಿಗಳು ಸಂಗಮವಾಗುತ್ತವೆ. ಕೃಷ್ಣಾ ನದಿಯು ಆಲಮಟ್ಟಿ ಜಲಾಶಯದಿಂದ ಯಾದಗಿರಿ ಜಿಲ್ಲೆಯಲ್ಲಿರುವ ನಾರಾಯಣಪುರ ಜಲಾಶಯಕ್ಕೆ ಹರಿದು ನಂತರ ಅಲ್ಲಿಂದ ತೆಲಂಗಾಣ ಮತ್ತು ಆಂದ್ರಪ್ರದೇಶಕ್ಕೆ ಹರಿಯುತ್ತದೆ. 
ಆಲಮಟ್ಟಿ ಜಲಾಶಯ
ಆಲಮಟ್ಟಿ ಜಲಾಶಯ

ಬೆಂಗಳೂರು: ಬಾಗಲಕೋಟೆಯ ಚಿಕ್ಕಸಂಗಮದಲ್ಲಿ ಕೃಷ್ಣಾ ಮತ್ತು ಘಟಪ್ರಭಾ ನದಿಗಳು ಸಂಗಮವಾಗುತ್ತವೆ. ಕೃಷ್ಣಾ ನದಿಯು ಆಲಮಟ್ಟಿ ಜಲಾಶಯದಿಂದ ಯಾದಗಿರಿ ಜಿಲ್ಲೆಯಲ್ಲಿರುವ ನಾರಾಯಣಪುರ ಜಲಾಶಯಕ್ಕೆ ಹರಿದು ನಂತರ ಅಲ್ಲಿಂದ ತೆಲಂಗಾಣ ಮತ್ತು ಆಂದ್ರಪ್ರದೇಶಕ್ಕೆ ಹರಿಯುತ್ತದೆ. 

ಆಲಮಟ್ಟಿ ಜಲಾಶಯವನ್ನು 524.256 ಮೀಟರ್ ಗೆ ಏರಿಸಿದರೇ  130 ಟಿಎಂಸಿ ನೀರನ್ನು ಕರ್ನಾಟಕ ಬಳಸಿಕೊಳ್ಳಬಹುದಾಗಿದೆ.  ಆದರೆ ಈ ಸಂಬಂಧ ತೆಲಂಗಾಣ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.  ಆದರೆ ನೀರನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಲಾಗುವುದಿಲ್ಲ ಎಂದು ಕರ್ನಾಟಕ ಸರ್ಕಾರ ಖಡಾ ಖಂಡಿತವಾಗಿ ಹೇಳಿದೆ.

ಜೊತೆಗೆ ಕರ್ನಾಟಕಕ್ಕೆ ಕೇಳುವ ಬದಲು ಆಂದ್ರಪ್ರದೇಶದ ಜೊತೆ ಮಾತುಕತೆ ನಡೆಸಿಕೊಳ್ಳುವಂತೆ ಸೂಚಿಸಿದೆ.  ಇ ಸಂಬಂಧ ಸುಪ್ರೀಂ ಕೋರ್ಟ್ ಶೀಘ್ರದಲ್ಲೇ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಇದರಿಂದ 6 ಸಾವಿರ ಹೆಕ್ಟೇರ್  ಕೃಷಿ ಜಮೀನಿಗೆ ನೀರು ಸಿಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com