ಬಾಗಲಕೋಟೆ: ನಾಳೆಯಿಂದ ಮೂರು ದಿನಗಳ ವೈಭವದ ಹೋಳಿಯಾಟ ಆರಂಭ

ರಾಷ್ಟ ಮಟ್ಟದ ಖ್ಯಾತಿ ಹೊಂದಿರುವ ಬಾಗಲಕೋಟೆ ಹೋಳಿ ಹಬ್ಬಕ್ಕೆ ಈಗಾಗಲೇ ಚಾಲನೆ ಸಿಕ್ಕಿದ್ದು, ಸೋಮವಾರ ಹುಬ್ಬಾ ನಕ್ಷತ್ರದಲ್ಲಿ ನಗರದ ಕಿಲ್ಲಾ ಓಣಿಯಲ್ಲಿ ಕಾಮ ದಹನ ನಡೆಯಿತು. ಮಂಗಳವಾರದಿಂದ ಮೂರು ದಿನಗಳ ಕಾಲ ಬಣ್ಣದ ರಂಗಿನಾಟ ಆರಂಭಗೊಳ್ಳಲಿದೆ.
ಬಾಗಲಕೋಟೆ: ನಾಳೆಯಿಂದ ಮೂರು ದಿನಗಳ ವೈಭವದ ಹೋಳಿಯಾಟ ಆರಂಭ
ಬಾಗಲಕೋಟೆ: ನಾಳೆಯಿಂದ ಮೂರು ದಿನಗಳ ವೈಭವದ ಹೋಳಿಯಾಟ ಆರಂಭ

ಬಾಗಲಕೋಟೆ: ರಾಷ್ಟ ಮಟ್ಟದ ಖ್ಯಾತಿ ಹೊಂದಿರುವ ಬಾಗಲಕೋಟೆ ಹೋಳಿ ಹಬ್ಬಕ್ಕೆ ಈಗಾಗಲೇ ಚಾಲನೆ ಸಿಕ್ಕಿದ್ದು, ಸೋಮವಾರ ಹುಬ್ಬಾ ನಕ್ಷತ್ರದಲ್ಲಿ ನಗರದ ಕಿಲ್ಲಾ ಓಣಿಯಲ್ಲಿ ಕಾಮ ದಹನ ನಡೆಯಿತು. ಮಂಗಳವಾರದಿಂದ ಮೂರು ದಿನಗಳ ಕಾಲ ಬಣ್ಣದ ರಂಗಿನಾಟ ಆರಂಭಗೊಳ್ಳಲಿದೆ.

ಇಂದು ನಡೆದ ಕಾಮದಹನ ವೇಳೆ ಯುವಕರು ನಿರ್ಭಯಾ ಪ್ರಕರಣದಲ್ಲಿ ಭಾಗಿಯಾಗಿರುವ ಯುವಕರ, ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದವರ ಹಾಗೂ ಕೊರೊನಾ ವೈರಸ್ ಪ್ರತಿಕೃತಿಗಳನ್ನೂ ದಹಿಸಿದರು.
ಕಳೆದೊಂದು ವಾರದಿಂದ ನಗರಾದ್ಯಂತ ನಾನಾ ಪ್ರದೇಶಗಳಲ್ಲಿ ಮಹಿಳಾ ಸಂಘಗಳು ಸೇರಿದಂತೆ ನಾನಾ ಸಂಘಟನೆಗಳು ಹಲಗೆ ಮೇಳ ಆಯೋಜಿಸಿದ್ದರ ಪರಿಣಾಮ ನಗರಾದ್ಯಂತ ಹೋಳಿ ಹಾಡುಗಳೆ ಅನುರಿಣಿಸುತ್ತಿವೆ. ವಾಟ್ಸ್ಪ್, ಫೆಸ್‌ಬುಕ್‌ಗಳಲ್ಲೂ ಹಲಗೆ ಮೇಳದಲ್ಲಿನ ಹೋಳಿ ಪದಗಳು ಸಾಕಷ್ಟು ವೈರಲ್ ಆಗಿವೆ.

ಸೋಮವಾರ ಬೆಳಗ್ಗೆ ವಿಧಿವತ್ತಾಗಿ ತುರಾಯಿ ಹಲಗೆ ಮೆರವಣಿಗೆ ನಡೆದು ಕಿಲ್ಲಾ ಓಣಿಯಲ್ಲಿ ಕಾಮದಹನ ನಡೆಯಿತು ಬಳಿಕ ರಾತ್ರಿಯ ವರೆಗೂ ಉಳಿದ ಕಡೆಗಳಲ್ಲಿ ಕಾಮದ ದಹನ ನಡೆದವು.

ಇನ್ನೆನಿದ್ದರೂ ಮಂಗಳವಾರದಿಂದ ಮೂರು ದಿನಗಳ ಕಾಲ ಬಣ್ಣದ ರಂಗಿನಾಟ, ಬಣ್ಣದ ಬಂಡಿ, ಸೋಗಿನ ಬಂಡಿಗಳದ್ದೇ ಪಾರುಪತ್ಯ. ಇಲ್ಲಿನ ಹೋಳಿಯ ವೈಭವ ವರ್ಣಿಸಲಸದಳ. ಕಣ್ಣಾರೆ ಕಂಡು ಸಂಭ್ರಮಿಸಬೇಕು.
ಮೂರು ದಿನಗಳ ಕಾಲ ನಿತ್ಯ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೂ ಮಹಿಳೆಯರು ಸೇರಿದಂತೆ ಎಲ್ಲರೂ ನಗರದಲ್ಲಿ ಬಣ್ಣದಾಟವಾಡುತ್ತಾರೆ. ಪರಸ್ಪರರು ಬಣ್ಣವಾಡಿ ಸಂತಸ ಪಡುತ್ತಾರೆ. ಮಧ್ಯಾಹ್ನದ ಬಳಿಕ ಒಂದೊಂದು ಓಣಿಯವರ ಬಣ್ಣದ ಬಂಡಿಗಳ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯುತ್ತದೆ.

ಆಧುನಿಕತೆಗೆ ಹೊಂದಿಕೊಂಡಿರುವ ಬಣ್ಣದಾಟದಲ್ಲಿ ಚಕ್ಕಡಿಗಳ ಜತೆಗೆ ಟ್ರಾö್ಯಕ್ಟರ್‌ಗಳಲ್ಲೂ ಯುವಕರು ಬ್ಯಾರಲ್‌ಗಳಲ್ಲಿ ಬಣ್ಣದ ನೀರು ತುಂಬಿಕೊಂಡು ಮೆರವಣಗೆಯಲ್ಲಿ ಪರಸ್ಪರ ಎರಚಾಡಿ ಸಂಭ್ರಮಿಸುತ್ತಾರೆ. ಬಣ್ಣದ ಬಂಡಿಗಳ ಮೆರವಣಿಗೆ ಜನತೆ ರಸ್ತೆಗಳ ಇಕ್ಕೆಲಗಳಲ್ಲಿ ನಿಂತು ನೋಡುವುದು ವಿಶೇಷ.

ಬಣ್ಣದ ಬಂಡಿ ಮುಗಿದ ಬಳಿಕ ರಾತ್ರಿ ವೇಷದ ಬಂಡಿಗಳ ಮೆರವಣಿಗೆ ಆರಂಭಗೊಳ್ಳುತ್ತದೆ. ರಾಷ್ಟ ಪುರುಷರು, ಇತಿಹಾಸ ಪುರುಷರ ವೇಷಗಳಲ್ಲಿ ಯುವಕರು ಕಾಣಿಸಿಕೊಳ್ಳುವ ಮೂಲಕ ಸಾರ್ವಜನಿಕರ ಗಮನ ಸೆಳೆಯುತ್ತಾರೆ.
ಸತತ ಮೂರು ದಿನಗಳ ಕಾಲ ನಡೆಯುವ ಇಲ್ಲಿನ ಹೋಳಿ ರಾಷ್ಟ ಮಟ್ಟದಲ್ಲಿ ತನ್ನ ಛಾಪು ಮೂಡಿಸಿದೆ. ಇಂದಿಗೂ ಅದನ್ನು ಉಳಿಸಿಕೊಂಡು ಬಂದಿದೆ. ವಿಶ್ವದಾದ್ಯಂತ ಹರಡಿರುವ ಕೊರೊನಾ ವೈರಸ್ ಭೀತಿಯ ಮಧ್ಯೆಯೂ ಇಲ್ಲಿ ಹೋಳಿ ಹಬ್ಬ ಅದ್ಧೂರಿಯಿಂದ ನಡೆಯುತ್ತಿದೆ.

ವಿಠ್ಠಲ ಆರ್. ಬಲಕುಂದಿ
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com