ತೆರಿಗೆ ಇಲಾಖೆಗೆ ವಂಚನೆ: ಮೂವರು ಇನ್ಫೋಸಿಸ್ ಟೆಕಿಗಳ ಬಂಧನ

ಆದಾಯ ತೆರಿಗೆ ವಂಚನಗೆ ಸಹಕರಿಸುತ್ತಿದ್ದ ಆರೋಪದ ಮೇರೆಗ ಇನ್ಫೋಸಿಸ್ ಸಾಫ್ಟ್ ವೇರ್ ಕಂಪನಿಯ ಮೂವರು ಉದ್ಯೋಗಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 
ತೆರಿಗೆ ಇಲಾಖಾಗೆ ವಂಚನೆ: ಮೂವರು ಇನ್ಫೋಸಿಸ್ ಟೆಕಿಗಳ ಬಂಧನ
ತೆರಿಗೆ ಇಲಾಖಾಗೆ ವಂಚನೆ: ಮೂವರು ಇನ್ಫೋಸಿಸ್ ಟೆಕಿಗಳ ಬಂಧನ

ಬೆಂಗಳೂರು: ಆದಾಯ ತೆರಿಗೆ ವಂಚನಗೆ ಸಹಕರಿಸುತ್ತಿದ್ದ ಆರೋಪದ ಮೇರೆಗ ಇನ್ಫೋಸಿಸ್ ಸಾಫ್ಟ್ ವೇರ್ ಕಂಪನಿಯ ಮೂವರು ಉದ್ಯೋಗಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 

ಇನ್ಫೋಸಿಸ್ ಕಂಪನಿಯ ಕಲ್ಯಾಣ್ ಕುಮಾರ್, ಪ್ರಕಾಶ್ ಹಾಗೂ ದೇವೇಶ್ವರ್ ರೆಡ್ಡಿ ಬಂಧಿತರಾಗಿದ್ದು, ಆರೋಪಿಗಳಿಂದ ರೂ.3 ಲಕ್ಷ ಜಪ್ತಿ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆಯ ಸೆಂಟ್ರಲ್ ಪ್ರೊಸೆಸಿಂಗ್ ಸೆಂಟರ್ ನಲ್ಲಿ ಈ ಮೂವರು ಕೆಲಸ ಮಾಡುತ್ತಿದ್ದರು. 

ಈ ಮೂವರು ತೆರಿಗೆದಾರರಿಂದ ಹಣ ಪಡೆದು ತೆರಿಗೆ ವಂಚನೆಗೆ ನೆರವಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಐಟಿ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆಂಧ್ರಪ್ರದೇಶ ಮೂಲದ ಆರೋಪಿಗಳು, ಹಲವು ದಿನಗಳಿಂದ ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ತೆರಿಕೆ ಇಲಾಖೆಯು ಸಿಪಿಸಿ ಪ್ರಾಜೆಕ್ಟ್'ಗೆ ಇನ್ಫೋಸಿಸ್ ಸಂಸ್ಥೆಯ ನೆರವನ್ನು ಐಟಿ ಇಲಾಖೆ ಪಡಿದೆದ. ಆಗ ಕಲ್ಯಾಣ್, ಪ್ರಕಾಶಅ ಹಾಗೂ ದೇವೇಶ್ವರ್ ಅವರನ್ನು ಸಿಪಿಸಿ ಪ್ರಾಜೆಕ್ಟ್'ಗೆ ಕಂಪನಿ ನಿಯೋಜಿಸಿತ್ತು. ವಾರ್ಷಿಕ ತೆರಿಗೆ ಪಾವತಿ ಕುರಿತು ಇಲಾಖೆಗೆ ಸಾರ್ವಜನಿಕರು ದಾಖಲೆ ಸಲ್ಲಿಸುತ್ತಾರೆ. ಆಗ ಮರುಪಾವತಿ ಮಾಡಿಕೊಳ್ಳುವವರೆಗೆ ಏಳು ದಿನಗಳಲ್ಲಿ ಹಣ ಪಡೆಯಲು ಅವಕಾಶವಿರುತ್ತದೆ. ಇದನ್ನೇ ಬಳಸಿಕೊಂಡ ಆರೋಪಿಗಳು ತೆರಿಗೆದಾರರಿಂದ ಹಣ ಪಡೆದು ಸುಳ್ಲು ಮಾಹಿತಿ ನೀಡಿ ಇಲಾಖೆಗೆ ವಂಚಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಈ ಬಗ್ಗೆ ಮಾಹಿತಿ ಪಡೆದ ಐಟಿ ನಿರ್ದೇಶಕ ಸಿಬಿಚೆನ್ ಮ್ಯಾಥ್ಯೂ, ಶಂಕೆಮೇರೆಗೆ ಆರೋಪಿಗಳ ವಿರುದ್ಧ ಮೊದಲು ಇಲಾಖಾ ಮಟ್ಟದ ಆಂತರಿಕ ವಿಚಾರಣೆ ನಡೆಸಿದರು. ಆಗ ಕಮಿಷನ್ ಪಡೆದು ತೆರಿಗೆ ವಂಚನೆಗೆ ಆರೋಪಿಗಳು ಸಹಕರಿಸಿರುವುದು ಖಚಿತವಾಯಿತು. ಈ ವರದಿ ಆಧರಿಸಿ ಎಲೆಕ್ಟ್ರಾನಿಟ್ ಸಿಟಿ ಠಾಣೆಯಲ್ಲಿ ಐಟಿ ನಿರ್ದೇಶಕರು ದೂರು ನೀಡಿದ್ದರು. ವಂಚನೆ ಸೇರಿದಂತೆ ವಿವಿಧ ಪರಿಚ್ಚೇದದ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com