ಕೊರೋನಾ ಭೀತಿ: ಮಂಗಳೂರು ಬಂದರಿನಲ್ಲಿ ತಡೆಹಿಡಿಯಲಾಗಿದ್ದ ಹಡಗು ಬಿಡುಗಡೆ
ಕೊರೋನಾ ಭೀತಿ: ಮಂಗಳೂರು ಬಂದರಿನಲ್ಲಿ ತಡೆಹಿಡಿಯಲಾಗಿದ್ದ ಹಡಗು ಬಿಡುಗಡೆ

ಕೊರೋನಾ ಭೀತಿ: ಮಂಗಳೂರು ಬಂದರಿನಲ್ಲಿ ತಡೆಹಿಡಿಯಲಾಗಿದ್ದ ಹಡಗು ಬಿಡುಗಡೆ

ಕೊರೋನಾ ವೈರಸ್ ವಿಶ್ವದಾದ್ಯಂತ ಭೀತಿ ಹುಟ್ಟಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ಬಂದರಿನಲ್ಲಿ ತಡೆಹಿಡಿಯಲಾಗಿದ್ದ ಮಸ್ಕತ್'ನ ಹಡಗನ್ನು ಇದೀಗ ಬಿಡುಗಡೆ ಮಾಡಲಾಗಿದೆ. 

ಬೆಂಗಳೂರು: ಕೊರೋನಾ ವೈರಸ್ ವಿಶ್ವದಾದ್ಯಂತ ಭೀತಿ ಹುಟ್ಟಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ಬಂದರಿನಲ್ಲಿ ತಡೆಹಿಡಿಯಲಾಗಿದ್ದ ಮಸ್ಕತ್'ನ ಹಡಗನ್ನು ಇದೀಗ ಬಿಡುಗಡೆ ಮಾಡಲಾಗಿದೆ. 

ಫೆಬ್ರವರಿ 29 ರಂದು ದುಬೈನಿಂದ ಹೊರಟ ಎಂಎಸ್'ಸಿ ಲಿರಿಕಾ ಎಂಬ ಹೆಸರಿನ ಹಡಕು ಮಸ್ಕತ್, ಓಮನ್ ಮಾರ್ಗವಾಗಿ ಮಂಗಳೂರು ತಲುಪಿತ್ತು. ಶನಿವಾರ ಮಂಗಳೂರಿನ ಅಂತರಾಷ್ಟ್ರೀಯ ಬಂದರಿಗೆ ಪ್ರವೇಶ ಪಡೆಯಲು ಅನುಮತಿ ಕೇಳಿದ್ದು, ಆದರೆ, ಹಡಗಿನಲ್ಲಿ ಓರ್ವ ಸ್ಪಾನಿಶ್ ಹಾಗೂ  ಇಟಲಿ ದೇಶದ ಪ್ರಜೆಯಿದ್ದ ಕಾರಣಕ್ಕಾಗಿ ಹಗಡು ಬಂದರು ಪ್ರವೇಶ ಮಾಡಲು ಎನ್ಎಂಪಿಟಿ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಕೊರೋನಾ ಸೋಂಕು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರವನ್ನು ಅಧಿಕಾರಿಗಲು ತೆಗೆದುಕೊಂಡಿದ್ದರು. 

ಸಮುದ್ರದಲ್ಲಿ ಹಡಗನ್ನು ನಿಲ್ಲಿಸಲಾದ ಸ್ಥಳಕ್ಕೇ ತರಳಿದ ವೈದ್ಯರ ತಂಡ ಹಡಗಿನಲ್ಲಿದ್ದ ಐವರನ್ನು ಎನ್ಎಂಪಿಟಿಗೆ ಕರೆ ತಂದಿದೆ. ಆದರೆ, ಹಡಗು ಬಂದರು ಪ್ರವೇಶ ಮಾಡದಂತೆ ತಡೆಹಿಡಿಯಲಾಗಿದೆ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮಾರ್ಚ್ 31ರ ವರೆಗೂ ಯಾವುದೇ ವಿದೇಶಿ ಹಡಗುಗಳಿಗೆ ಭಾರತದ ಬಂದರು ಪ್ರವೇಶವನ್ನು ನಿಷೇಧಿಸಲಾಗಿದೆ. 

ಇದೀಗ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಬಳಿಕ ಹಡಗನ್ನು ಬಿಡುಗಡೆ ಮಾಡಲಾಗಿದ್ದು, ಕಳೆದ ರಾತ್ರಿಯೇ ಹಡಗು ಸಂಚಾರ ಆರಂಭಿಸಿದೆ ಎಂದು ವರದಿಗಳು ತಿಳಿಸಿವೆ. 

ಈ ನಡುವೆ ಕೊರೋನಾ ಭೀತಿಯಿಂದಾಗಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮವನ್ನು ಬಂದ್ ಮಾಡಲಾಗಿದ್ದು, ಪ್ರತಿಷ್ಟಿತ ಬೊನ್ಸಾಯಿ ಉದ್ಯಾನವನ, ಶುಕವನ ಮತ್ತು ವಿಶ್ವವಸ್ತ್ರ ಮ್ಯೂಸಿಯಂಗಳೂ ಬಂದ್ ಆಗಿವೆ ಎಂದು ತಿಳಿದುಬಂದಿದೆ. 

ಕೊರೋನಾ ವೈರಸ್ ಹಂಪಿಯ ಹೋಳಿ ಹಬ್ಬದ ಸಂಭ್ರಮದ ಮೇಲೂ ಕೂಡ ಕರಿಛಾಯೆ ಮೂಡಿದಿಸಿದೆ. ಬಳ್ಳಾರಿ ಮತ್ತು ಹೊಸಪೇಟೆ ರೈಲ್ವೇ ವಿಲ್ದಾಣಗಳಲ್ಲಿ ಪ್ರವಾಸಿಗರ ಮೇಲೆ ಕಣ್ಗಾವಲಿರಿಸುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

ಇದರಂತೆ ಜನನಿಬಿಡ ಪ್ರದೇಶಗಳಲ್ಲಿ ಹೋಳಿ ಹಬ್ಬ ಆಚರಿಸದಂತೆ ಬೆಳಗಾವಿ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್ ಅವರು ಜನರ ಬಳಿ ಮನವಿ ಮಾಡಿಕೊಂಡಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com