ಹೊಸಪೇಟೆಯಲ್ಲಿ ಹೋಳಿ ಸಂಭ್ರಮ, ಇಲ್ಲ ಕೊರೋನಾ ಭೀತಿ

ಪ್ರತಿವರ್ಷ ವಿಶ್ವವಿಖ್ಯಾತ ಹಂಪಿಯಲ್ಲಿ ನಡೆಯುತಿದ್ದ ಹೋಳಿ ಹಬ್ಬ ಈ ಬಾರಿ ನಡೆಯುತ್ತೋ ಅಥವಾ ಇಲ್ಲವೋ ಎಂಭ ಆತಂಕ ಹೋಳಿ ಪ್ರಿಯರಲ್ಲಿತ್ತು. ಯಾಕೆಂದ್ರೆ ಈ ಬಾರಿ ವಿಶ್ವದೆಲ್ಲೆಡೆ ಹಬ್ಬಿದ್ದ ಕೊರೋನ ವೈರಾಣುವಿನ ಭೀತಿ ಇತ್ತು.
ಹೋಳಿ ಸಂಭ್ರಮ
ಹೋಳಿ ಸಂಭ್ರಮ

ಹೊಸಪೇಟೆ: ಪ್ರತಿವರ್ಷ ವಿಶ್ವವಿಖ್ಯಾತ ಹಂಪಿಯಲ್ಲಿ ನಡೆಯುತಿದ್ದ ಹೋಳಿ ಹಬ್ಬ ಈ ಬಾರಿ ನಡೆಯುತ್ತೋ ಅಥವಾ ಇಲ್ಲವೋ ಎಂಭ ಆತಂಕ ಹೋಳಿ ಪ್ರಿಯರಲ್ಲಿತ್ತು. ಯಾಕೆಂದ್ರೆ ಈ ಬಾರಿ ವಿಶ್ವದೆಲ್ಲೆಡೆ ಹಬ್ಬಿದ್ದ ಕೊರೋನ ವೈರಾಣುವಿನ ಭೀತಿ ಇತ್ತು. ಆದ್ರೆ ಅದ್ಯಾವುದಕ್ಕೂ ಕ್ಯಾರೆ ಎನ್ನದ ಹಂಪಿಯ ಹೋಳಿ ಪ್ರಿಯರು ಪ್ರತಿ ವರ್ಷಕ್ಕಿಂತ ಈ ವರ್ಷ ಕೊಂಚ ಹೆಚ್ಚಿನ ಪ್ರಮಾಣದಲ್ಲೇ ಹೋಳಿ ಹಬ್ಬವನ್ನ ಆಚರಣೆಮಾಡಿದ್ದಾರೆ.

ಹೌದು ಕೆಂಪು, ಕಡು ನೀಲಿ, ಆಕಾಶ ನೀಲಿ, ಹಚ್ಚ ಹಸುರಿನ ಬಣ್ಣದ ರಾಶಿಗಳು ಒಂದು ಕಡೆ, ಮತ್ತೊಂದೆಡೆ ಹೀಗೆ ಸಪ್ತ ಬಣ್ಣಗಳಲ್ಲಿ ಮಿಂದು ಹುಚ್ಚೆದ್ದು ಕುಣಿಯುತ್ತಿರುವ ವಿದೇಶಿ ಪ್ರವಾಸಿಗರು. ಅಂದಹಾಗೆ ಇಂತದ್ದೊಂದು ವಿದೇಶಿಗರ ಬಣ್ಣದೋಕುಳಿ ಕಂಡು ಬಂದಿದ್ದು ನಮ್ಮ ವಿಶ್ವ ವಿಖ್ಯಾತ ಹಂಪಿಯಲ್ಲಿ, ಪ್ರತಿ ವರ್ಷ ಕಾಮನ ಹಬ್ಬ ಬಂತೆಂದ್ರೆ ಸಾಕು ವಿದೇಶಿಗರ ದಂಡೇ ಹಂಪಿಗೆ ಹರಿದು ಬರುತ್ತೆ, ಇನ್ನು ಸ್ಥಳೀಯ ಯುವಕರ ಡೊಲು ಬಡಿತದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ವಿದೇಶಿಗರು ಹೆಣ್ಣು ಗಂಡು ಎಂಭ ಬೇದ ಬಾವವಿಲ್ಲ ಬಣ್ಣಗಳಲ್ಲಿ ಮಿಂದೆದ್ದು ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.

ಇನ್ನು ಈ ಬಾರಿ ಕೊರೋನ ವೈರಸ್ ಭೀತಿಯಿಂದ ಈ ಬಾರಿ ಹಂಪಿಯಲ್ಲಿ ಹೋಳಿ ಹಬ್ಬ ಆಚರಣೆಮಾಡಲಾಗುತ್ತೋ ಅಥವಾ ಇಲ್ಲವೋ ಎಂಭ ಅನುಮಾನಗಳಿದ್ದವು. ಆದ್ರೆ ಈ ವರ್ಷ ಕೊಂಚ ಪ್ರಮಾಣದಲ್ಲಿ ಸ್ಥಳೀಯರು ಸೇರಿದಂತೆ ವಿದೇಶಿಗರು ಹೆಚ್ಚಾಗಿ ಕಂಡು ಬಂದಿದ್ದು ವಿಷೇಶವಾಗಿತ್ತು. ಅದಕ್ಕೆ ಕಾರಣ ಕೊಪ್ಪಳ ಜಿಲ್ಲೆಯ ವಿರೂಪಾಪುರ ಗಡ್ಡೆಯನ್ನ ಅಲ್ಲಿನ ಜಿಲ್ಲಾಡಳಿತ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಆ ಬಾಗದ ಪ್ರವಾಸಿಗರು ಹಂಪಿಯ ರಥ ಬೀದಿ ಮತ್ತು ಜನತಾ ಪ್ಲಾಟ್ ನಲ್ಲಿ ಸೇರಿ ಸಂಭ್ರಮಿಸಿದ್ದು ಕಂಡುಬಂತು. 

ಹೌದು ಕಾಮ ದೇವನನ್ನ ಶಿವ ತನ್ನ ಮೂರನೆ ಕಣ್ಣಿನಿಂದ ದಹಿಸಿದ್ದಕ್ಕಾಗಿ ಇಲ್ಲಿನ ಶಿವನಿಗೆ ವಿರೂಪಾಕ್ಷೇಶ್ವರ ಎಂಬ ಹೆಸರು ಬಂತು ಎಂದು ಪುರಾಣಗಳು ಹೇಳುತ್ತವೆ, ಹಾಗಾಗಿ ನಮ್ಮ ಭಾರತ ದೇಶದ ಸಂಸ್ಕ್ರತಿಯ ಮೇಲೆ ಅಗಾದವಾದ ನಂಬಿಕೆಯನ್ನ ಇಟ್ಟುಕೊಂಡಿರುವ ಬಹುತೇಕ ವಿದೇಶಿಗರು ಹಂಪಿಗೆ ಹೋಳಿ ಹಬ್ಬ ಆಚರಣೆಮಾಡುವ ಸಂಭಂದವೇ ಬರುವುದು ಈ ಹಿಂದಿನಿಂದಲೂ ಇದೆ. ಇನ್ನು ಸ್ಥಳೀಯ ಚಿಕ್ಕ ಪುಟ್ಟ ಮಕ್ಕಳು ವಿದೇಶಿಗರ ಹೆಗಲೇರಿ ಸೇರಿದ್ದವರ ಮೇಲೆ ಮನಸೋ ಇಚ್ಚೆ ಬಣ್ಣ ಎರಚುತ್ತಿದ್ರೆ ಮಕ್ಕಳಾಟಕ್ಕೆ ಮನಸೋತ ವಿದೇಶಿಗರು ಮಕ್ಕಳ ಜೊತೆ ತಾವೂ ಕೂಡ ಮಕ್ಕಳಂತೆ ಬಣ್ಣದಲ್ಲಿ ಮಿಂದೆದ್ದದ್ದು ಎಲ್ಲರ ಗಮನ ಸೆಳೆಯಿತು. ಒಟ್ಟಿನಲ್ಲಿ ವರ್ಷಕ್ಕಿಂತ ವರ್ಷ ಹಂಪಿಯ ಹೋಳಿ ಹಬ್ಬ ಹೆಚ್ಚು ಪ್ರಾಮುಖ್ಯತೆಯನ್ನ ಪಡೆಯುತ್ತಿದ್ದು ವಿದೇಶಿಗರು ಹೋಳಿ ಹಬ್ಬ ಆಚರಣೆಯನ್ನೇ ದ್ರಷ್ಟಿಯಲ್ಲಿಟ್ಟುಕೊಂಡು ಹಂಪಿಗೆ ಪ್ರವಾಸಕ್ಕೆ ಬರುವುದು ಇತ್ತೀಚೆಗೆ ಹೆಚ್ಚಾಗುತ್ತಿರುವುದಂತೂ ಸತ್ಯ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com