ಸರ್ಕಾರದ ಆದೇಶ ಪಾಲಿಸದ ಶಾಲೆಗಳ ವಿರುದ್ಧ ಕಠಿಣ ಕ್ರಮ; ಸಚಿವ ಸುರೇಶ್ ಕುಮಾರ್ ಎಚ್ಚರಿಕೆ

ಸರ್ಕಾರದ ಆದೇಶ ಪಾಲಿಸುವುದು‌ ಎಲ್ಲ ಶಾಲೆಗಳ ಕರ್ತವ್ಯ, ಸರ್ಕಾರದ ಈ ಆದೇಶ ಪಾಲಿಸದಿರುವ ಶಾಲೆಗಳು ಅದೆಷ್ಟೇ ಪ್ರಭಾವಶಾಲಿಯಾಗಿದ್ದರೂ ಅವುಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಸುರೇಶ್ ಕುಮಾರ್
ಸುರೇಶ್ ಕುಮಾರ್

ಬೆಂಗಳೂರು: ಸರ್ಕಾರದ ಆದೇಶ ಪಾಲಿಸುವುದು‌ ಎಲ್ಲ ಶಾಲೆಗಳ ಕರ್ತವ್ಯ, ಸರ್ಕಾರದ ಈ ಆದೇಶ ಪಾಲಿಸದಿರುವ ಶಾಲೆಗಳು ಅದೆಷ್ಟೇ ಪ್ರಭಾವಶಾಲಿಯಾಗಿದ್ದರೂ ಅವುಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಪ್ರಪಂಚದಾದ್ಯಂತ ಸಾವಿರಾರು ಜನರ ಉಸಿರು ನಿಲ್ಲಿಸಿರುವ ಕೋವಿಡ್-19 ಈಗ ಭಾರತದಲ್ಲೂ ಆವರಿಸಿದೆ. ಅಷ್ಟೇ ಅಲ್ಲದೆ ರಾಜ್ಯದಲ್ಲೂ ಸೋಂಕು‌ ಪ್ರಕರಣಗಳು ದೃಢಪಟ್ಟಿವೆ. ಮಕ್ಕಳಲ್ಲಿ ಸೋಂಕು ಬೇಗ ಹರಡುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಭೆ ನಡೆಸಿ‌ ಮಾರ್ಚ್.9 ರಿಂದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ‌ ಎಲ್.ಕೆ.ಜಿ ಮತ್ತು ಯು.ಕೆ.ಜಿ, ನರ್ಸರಿ, ಅಂಗನವಾಡಿ ಮತ್ತು 1ರಿಂದ 5ನೇ ತರಗತಿ ವರೆಗೆ ಪ್ರಾಥಮಿಕ ಶಾಲೆಗಳಿಗೆ ಸಾರ್ವಜನಿಕ‌ ಶಿಕ್ಷಣ ಇಲಾಖೆ ರಜೆ ಘೋಷಿಸಿದೆ.

ಈಗಾಗಲೇ ರಾಜ್ಯದಾದ್ಯಂತ ಎಲ್ಲಾ ಶಾಲೆಗಳಲ್ಲಿ ಶೀಘ್ರವಾಗಿ ಪರೀಕ್ಷೆ ನಡೆಸಿ ರಜೆ ನೀಡುವಂತೆ ಪರೀಕ್ಷಾ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಆದರೆ, ನಗರದ ಕೆಲ ಖಾಸಗಿ ಶಾಲೆಗಳು‌ ಸರ್ಕಾರದ ಆದೇಶ ಪಾಲಿಸದೆ ತಮ್ಮದೇ ರೀತಿ ನಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ‌ ಶಿಕ್ಷಣ ಸಚಿವರು ಆದೇಶ ಪಾಲಿಸದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರದ, ಆದೇಶವನ್ನು‌ ಪಾಲಿಸುವುದು ಈ ಪ್ರದೇಶದಲ್ಲಿರುವ ಎಲ್ಲಾ‌ ಶಾಲೆಗಳ ಕರ್ತವ್ಯ. ಕೆಲವು ಖಾಸಗಿ ಶಾಲೆಗಳು ಸರ್ಕಾರದ ಈ ಆದೇಶಕ್ಕೆ ಗೌರವ ಕೊಡದೆ ತಮ್ಮದು ಬೇರೆ ಸಾಮ್ರಾಜ್ಯ ಎಂದು ತಿಳಿದು ವ್ಯತಿರಿಕ್ತವಾಗಿ ವರ್ತಿಸುವುದು ತಿಳಿದುಬಂದಿದ್ದು, ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸದೇ ಇರುವ ಖಾಸಗಿ ಶಾಲೆಗಳಿಗೆ ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರದ ಈ ಆದೇಶ ಪಾಲಿಸದಿರುವ ಶಾಲೆಗಳು ಅದೆಷ್ಟು ಪ್ರಭಾವಶಾಲಿಯಾಗಿದ್ದರೂ ಅವುಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಎಳೆ ಮಕ್ಕಳ ಹಿತದೃಷ್ಟಿಯಿಂದ ಎಂದು ಮನಗಾಣಬೇಕು. ಸರ್ಕಾರದ ಆದೇಶ ಪಾಲಿಸದಿರುವುದು ನಮ್ಮ ಪ್ರತಿಷ್ಠೆ ಎಂದುಕೊಂಡಿರುವ ಶಾಲೆಗಳಿಗೆ ಮಕ್ಕಳ ಹಿತಕ್ಕಿಂತ ನಿಮ್ಮ‌ ಪ್ರತಿಷ್ಠೆ ಮುಖ್ಯವಲ್ಲ ಎಂದು ಸಚಿವರು ಖಡಕ್ ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com