ಮಕ್ಕಳ 'ಸಮ್ಮರ್ ಕ್ಯಾಂಪ್' ಮೇಲೂ ಬಿತ್ತು ಕೊರೋನಾ ಕರಿ ನೆರಳು

ವಿಶ್ವದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ರಾಷ್ಟ್ರಗಳ ವ್ಯಾಪಾರ ವಹಿವಾಟು, ಐಟಿ-ಬಿಟಿ ಕಂಪನಿಗಳು, ಸಂಚಾರ ವ್ಯವಸ್ಥೆ ಸೇರಿದಂತೆ ಎಲ್ಲರ ವ್ಯವಸ್ಥೆ ಮೇಲೂ ಗಂಭೀರ ಪರಿಣಾಮ ಬೀರುತ್ತಿದ್ದು, ಇದೀಗ ಮಕ್ಕಳ ಸಮ್ಮರ್ ಕ್ಯಾಂಪ್ ಮೇಲೂ ಪರಿಣಾಮ ಬೀರಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿಶ್ವದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ರಾಷ್ಟ್ರಗಳ ವ್ಯಾಪಾರ ವಹಿವಾಟು, ಐಟಿ-ಬಿಟಿ ಕಂಪನಿಗಳು, ಸಂಚಾರ ವ್ಯವಸ್ಥೆ ಸೇರಿದಂತೆ ಎಲ್ಲರ ವ್ಯವಸ್ಥೆ ಮೇಲೂ ಗಂಭೀರ ಪರಿಣಾಮ ಬೀರುತ್ತಿದ್ದು, ಇದೀಗ ಮಕ್ಕಳ ಸಮ್ಮರ್ ಕ್ಯಾಂಪ್ ಮೇಲೂ ಪರಿಣಾಮ ಬೀರಿದೆ. 

ಕೊರೋನಾ ವೈರಸ್ ದೇಶದಾದ್ಯಂತ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ಪ್ರಾಥಮಿಕ ಶಾಲಾ ಮಕ್ಕಳಿಗೆ ರಜೆ ಘೋಷಣೆ ಮಾಡಿದೆ. ಇದರ ಪರಿಣಾಮ ಭೀತಿಗೊಳಗಾಗಿರುವ ಪೋಷಕರು ಮಕ್ಕಳನ್ನು ಸಮ್ಮರ್ ಕ್ಯಾಂಪ್'ಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. 

ನನ್ನ ಮಗುವನ್ನು ಸಮ್ಮರ್ ಕ್ಯಾಂಪ್'ಗೆ ಕಳುಹಿಸುವ ಬಗ್ಗೆ ನಾನು ಚಿಂತಿಸಿಲ್ಲ. ಸಮ್ಮರ್ ಕ್ಯಾಂಪ್ ಅಷ್ಟೇ ಅಲ್ಲ, ಸ್ವಿಮ್ಮಿಂಗ್, ಡ್ರಾಯಿಂಗ್, ಪೇಟಿಂಗ್, ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಲು ಬಿಡುವುದಿಲ್ಲ. ಈ ಎಲ್ಲಾ ಪ್ರದೇಶಗಳಲ್ಲಿಯೂ ಹೆಚ್ಚೆಚ್ಚು ಜನರು ಇರುವುದಲಿಂದ ಮಕ್ಕಳಿಗೆ ವೈರಸ್ ಬಹುಬೇಗ ತಟ್ಟುತ್ತದೆ. ನಾವೂ ಕೂಡ ಎಲ್ಲಿಯೂ ಪ್ರಯಾಣಿಸುವುದಿಲ್ಲ. ಕೇವಲ ಮನೆಯ ಒಳಗಡೆ ಮಾತ್ರ ಮಕ್ಕಳಿಗೆ ಆಟವಾಡಲು ಅವಕಾಶ ಮಾಡಿಕೊಡಲಾಗುವುದು ಎಂದು ಪೋಷಕರೊಬ್ಬರು ಹೇಳಿದ್ದಾರೆ. 

ಶಾಲೆಗಳಲ್ಲಿ ಸಮಸ್ಯೆಗಳು ಎದುರಾಗುವುದರಿಂದಲೇ ಶಾಲೆಗಳನ್ನು ಸರ್ಕಾರ ಬಂದ್ ಮಾಡಿಸಿದೆ. ಸಮ್ಮರ್ ಕ್ಯಾಂಪ್ ಗಳಲ್ಲೂ ಇಂತಹದ್ದೇ ಸಮಸ್ಯೆಗಳಿರುತ್ತವೆ. ನನ್ನ ಮಗಳಿನ್ನೂ 5 ವರ್ಷ. ಮುಂದೆ ಸಮಸ್ಯೆ ಅನುಭವಿಸುವುದಕ್ಕಿಂತಲೂ ಈಗಲೇ ಮುಂಜಾಗ್ರತೆ ತೆಗೆದುಕೊಳ್ಳುವುದು ಒಳ್ಳೆಯದು. ನಾವು ಪ್ರಯಾಣ ಬೆಳೆಸುತ್ತೇವೆ. ಆದರೆ, ಪ್ರಯಾಣದುದ್ದಕ್ಕೂ ಭಯವಂತೂ ಇರುತ್ತದೆಎಂದು ನಾದಿರ್ ಅಸ್ಲಾಂ ಎಂಬುವವರು ತಿಳಿಸಿದ್ದಾರೆ. 

ನನಗೆ ಇಬ್ಬರು ಮಕ್ಕಳಿದ್ದ ಒಬ್ಬ 2ನೇ ತರಗತಿ ಹಾಗೂ ಮತ್ತೊಬ್ಬ 7ನೇ ತರಗತಿ ಓದುತ್ತಿದ್ದಾರೆ. ಈಗಾಗಲೇ ನನ್ನ ಚಿಕ್ಕ ಮಗನಿಗೆ ಶಾಲೆ ರಜೆ ನೀಡಿದೆ. ಆದರೆ, ಕೊರೋನಾ ವೈರಸ್ ಭೀತಿ ಇರುವ ಪರಿಣಾಮ ಎಲ್ಲಿ ಕರೆದುಕೊಂಡು ಹೋಗುವುದಕ್ಕೂ ಭಯವಾಗುತ್ತಿದೆ. ಹೀಗಾಗಿ ಡ್ಯಾನ್ಸ್ ಕ್ಲಾಸ್ ಬಿಡಿಸುವ ಬಗ್ಗೆ ಚಿಂತನೆ ನಡೆಸಿದ್ದೇವಂದು ಲತಾ ಎಂಬುವವರು ಹೇಳಿದ್ದಾರೆ. 

ಬೇಸಿಗೆ ರಜೆ ಬರುತ್ತಿದ್ದಂತೆಯೇ ಮಕ್ಕಲನ್ನು ಸ್ವಿಮ್ಮಿಂಗ್, ಡ್ಯಾನ್ಸ್ ಕ್ಲಾಸ್ ಗಳಿಗೆ ಕಳುಹಿಸಿದ್ದೆವು. ಬಳಿಕ ಚೆನ್ನೈಗೆ ತೆರಳಿ ಕಾಲ ಕಳೆಯುತ್ತಿದ್ದೆವು. ಇದೀಗ ಕಾಲರಾದಂತಹ ರೋಗ ಕೂಡ ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲಿಯೂ ಕಳುಹಿಸುವುದಿಲ್ಲ. ಮನೆಯಲ್ಲಿಯೇ ತಮ್ಮ ಸ್ನೇಹಿತರೊಂದಿಗೆ ಆಟವಾಡಲು ಬಿಡುತ್ತಿದ್ದೇವೆಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com