ಸ್ಪೀಡ್ ಪೋಸ್ಟ್ ಗಳ ಮೂಲಕ ಡ್ರಗ್ಸ್ ಸರಬರಾಜು ಮಾಡುತ್ತಿರುವುದು ಆತಂಕದ ವಿಚಾರ: ಗೃಹ ಸಚಿವ ಬೊಮ್ಮಾಯಿ

ಸ್ಪೀಡ್ ಪೋಸ್ಟ್ ಗಳ ಮೂಲಕ ಮಾದನ ವಸ್ತುಗಳನ್ನು ಸರಬರಾಜು ಮಾಡಲಾಗುತ್ತಿದ್ದು, ಆಪರಾಧ ಬೇಧಿಸಲು ರಾಜ್ಯ ಪೊಲೀಸರು ಅಪರಾಧಿಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಬೇಕಾಗುತ್ತದ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸ್ಪೀಡ್ ಪೋಸ್ಟ್ ಗಳ ಮೂಲಕ ಮಾದನ ವಸ್ತುಗಳನ್ನು ಸರಬರಾಜು ಮಾಡಲಾಗುತ್ತಿದ್ದು, ಆಪರಾಧ ಬೇಧಿಸಲು ರಾಜ್ಯ ಪೊಲೀಸರು ಅಪರಾಧಿಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಬೇಕಾಗುತ್ತದ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. 

ಮಂಗಳವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಶಾಸಕ ಕೆ.ಜೆ.ಜಾರ್ಜ್ ಅವರು ಸರ್ವಜ್ಞನಗರ ವ್ಯಾಪ್ತಿಯ ಡ್ರಗ್ಸ್ ದಂಧೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಮಾದಕ ವಸ್ತುಗಳ ಮೇಲೆ ನಮ್ಮ ಸರ್ಕಾರ ಯುದ್ಧ ಘೋಷಿಸಿದೆ. ಕೆಲ ಡ್ರಂಗ್ಸ್ ಮಾರಾಟಗಾರರನ್ನು ಬಂಧಿಸಿದರೆ ಪ್ರಯೋಜನವಿಲ್ಲ. ಡ್ರಗ್ಸ್ ಜಾಲಗ ಮೂಲ ಪತ್ತೆ ಮಾಡಿ ಆ ಕಳ್ಳ ವ್ಯವಸ್ಥೆಯ ಬೆನ್ನು ಮೂಳೆ ಮುರಿಯುತ್ತೇವೆಂದು ಹೇಳಿದ್ದಾರೆ.
 
ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರವಲ್ಲ. ಎಲ್ಲ ಕಡೆ ನಡೆದಿದೆ. ಇತ್ತೀಚೆಗೆ ಇಂಟರ್ನೆಟ್ ಮೂಲಕವೂ ದೊಡ್ಡ ಮಟ್ಟದಲ್ಲಿ ಮಾದಕ ವಸ್ತು ಮಾರಾಟ ನಡೆಯುತ್ತಿದೆ. ಟಿಒಆರ್ ಎಂಬ ಸರ್ಚ್ ಎಂಜಿನ್ ಹಾಗೂ ಡಾರ್ಕ್ ವಬ್ ಮೂಲಕವೂ ಿದನ್ನು ತರಿಸಲಾಗುತ್ತಿದೆ. ಇದನ್ನು ನಮ್ಮ ಪೊಲೀಸರು ಬೇಧಿಸುತ್ತಿದ್ದು, ಡ್ರಗ್ಸ್ ಅಂತರಾಷ್ಟ್ರೀಯ ಸಮಸ್ಯೆಯಾಗಿ ಬೆಳೆದಿದೆ ಎಂದು ಆತಂಕ ವ್ಯಕ್ತಪಡಿಸಿದರು. 

ಡಾರ್ಕ್ ವೆಬ್ ಗಳಲ್ಲಿ ಕೇವಲ ಡ್ರಗ್ಸ್ ಮಾತ್ರವಲ್ಲ, ಶಸ್ತ್ರಾಸ್ತ್ರ ವ್ಯಾಪಾರ, ವೇಶ್ಯಾವಾಟಿಕೆ ಸೇರಿ ಹಲವು ಅನಾಚಾರಗಳು ನಡೆಯುತ್ತಿವೆ. ಇಂತಹ ವೆಬ್ ಗಲಿಗೆ ಯಾರು ಬೇಕಾದರೂ ಪ್ರವೇಶ ಮಾಡುವಂತಿಲ್ಲ. ಆಹ್ವಾನ ಸ್ವೀಕರಿಸಿದವರಿಗಷ್ಟೇ ಪ್ರವೇಶಾವಕಾಶ ಇರುತ್ತದೆ. ಜೊತೆಗೆ ಸ್ಪೀಡ್ ಪೋಸ್ಟ್ ಗಳ ಮೂಲಕವೂ ಡ್ರಗ್ಸ್ ಸರಬರಾಜು ಮಾಡಲಾಗುತ್ತಿದೆ. ಹೀಗಾಗಿ ಅಪರಾಧಿಗಲು ಬೇಧಿಸಲು ಪೊಲೀಸರು ಅಪರಾಧಿಗಳಿಗಿಂದ ಒಂದು ಹೆಜ್ಜೆ ಮುಂದೆ ಹೋಗಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಎಲ್ಲಾ ಕ್ರಮ ಕೈಗೊಳ್ಳುತ್ತಿದ್ದೇವೆ. ಅಲ್ಲದೆ, ಮಾದಕ ವಸ್ತುಗಳ ಮಾರಾಟ ನಿಯಂತ್ರಣಕ ಕಾಯ್ದೆ 1989ರ ಕಾಯ್ದೆಯನ್ನು ಬದಲಾಯಿಸಬೇಕಾಗಿದೆ. ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಭರವಸೆನೀಡಿದರು. 

ನಮ್ಮ ಪೊಲೀಸರು ಸ್ಪೀಟ್ ಪೋಸ್ಟ್ ಮೂಲಕ ಮಾದಕ ವಸ್ತು ರವಾನೆಯಾಗುತ್ತಿರುವುದನ್ನು ಬೇಧಿಸಿದ್ದು, ಅಂಚೆ ಇಲಾಖೆಯ ನಾಲ್ವರು ಸಿಬ್ಬಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಉಳಿದಂತೆ 2019ರಲ್ಲಿ 1652 ಪ್ರಕರಣ ದಾಖಲಾಗಿವೆ. ಕಳೆದ ಎರಡು ವರ್ಷಗಳಿಗೆ ಹೋಲಿಕ ಮಾಡಿದರೆ, ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಸಿಂಥೆಟಿಕ್ ಡ್ರಗ್ಸ್ ಗಳನ್ನು ಚಾಕಲೇಟು, ಬಿಸ್ಕೆಟ್ ಮೂಲಕವೂ ಶಾಲಾ-ಕಾಲೇಜು, ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಪೂರೈಸಲಾಗುತ್ತಿದೆ. ಇದೆಲ್ಲವನ್ನೂ ತಡೆಯಲು ಸರ್ಕಾರ ಬದ್ಧವಾಗಿದ್ದು, ಏಪ್ರಿಲ್ ನಲ್ಲಿ ದೊಡ್ಡ ಜಾಗೃತಿ ಅಭಿಯಾನ ಕೈಗೊಳ್ಳುತ್ತಿದ್ದೇವೆಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com