ಮಕ್ಕಳ ಪರೀಕ್ಷೆ ಮುಗಿಸುವ ಆತುರದಲ್ಲಿ ಶಾಲೆಗಳು: ಸರ್ಕಾರದ ಆದೇಶ ಕುರಿತು ಪೋಷಕರಲ್ಲಿ ಆತಂಕ

ಕೊರೋನಾ ವೈರಸ್ ಹರಡುವ ಭೀತಿಯ ಪರಿಣಾಮ ಖಾಸಗಿ ಶಾಲೆಗಳು ಆತುರಾತುರವಾಗಿ ಪರೀಕ್ಷಗಳನ್ನು ಮುಗಿಸಿ ಪ್ರಸಕ್ತ ಶೈಕ್ಷಣಿಕ ವರ್ಷ ಪೂರ್ಣಗೊಳಿಸುವ ಆತುರದಲ್ಲಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ಹರಡುವ ಭೀತಿಯ ಪರಿಣಾಮ ಖಾಸಗಿ ಶಾಲೆಗಳು ಆತುರಾತುರವಾಗಿ ಪರೀಕ್ಷಗಳನ್ನು ಮುಗಿಸಿ ಪ್ರಸಕ್ತ ಶೈಕ್ಷಣಿಕ ವರ್ಷ ಪೂರ್ಣಗೊಳಿಸುವ ಆತುರದಲ್ಲಿವೆ. 

ಪೂರ್ವ ಪ್ರಾಥಮಿಕ ಶಾಲೆಗಳಿಗೆ ರಜೆ ನೀಡಿದ ಸರ್ಕಾರ ಆನಂತರ 5ನೇ ತರಗತಿ ವರೆಗಿನ ಮಕ್ಕಳಿಗೆ ರಜೆ ನೀಡಿತ್ತು. ಜೊತೆಗೆ ಪರೀಕ್ಷೆ ಪೂರ್ಣಗೊಳಿಸಲು ಗಡುವು ನಿಗದಿ ಮಾಡಿದೆ. ಆದರೆ, ಕೊರೋನಾ ಆರ್ಭಟ ಹೆಚ್ಚಾದಂತೆ ಸರ್ಕಾರದ ಮುಂದೆ ಯಾವ ಆದೇಶ ಕೈಗೊಳ್ಳುತ್ತದೆ ಎಂಬ ಶಂಕೆ ಶಾಲಾ ಆಡಳಿತ ಮಂಡಳಿಗಳನ್ನು ಕಾಡಿದ್ದು, ಇದೂ ಕೂಡ ಆತುರಕ್ಕೆ ಕಾರಣವಾಗಿದೆ. 

ಈಗಾಗಲೇ ರಾಜ್ಯ ಸರ್ಕಾರ 1ರಿಂದ 5ನೇ ತರಗತಿ ಮಕ್ಕಳಿಗೆ ರಜೆ ಘೋಷಿಸಿ, 6ರಿಂದ 9ನೇ ತರಗತಿ ಮಕ್ಕಳಿಗೆ ಮಾರ್ಚ್ 23ರೊಳಗೆ ಪರೀಕ್ಷೆ ಮುಗಿಸುವಂತೆ ಸೂಚನೆ ನೀಡಿದೆ. ಹೀಗಾಗಿ ಪರೀಕ್ಷೆಗಲ ನಡುವೆ ಬಿಡುವು ನೀಡುತ್ತಿದ್ದ ಖಾಸಗಿ ಶಾಲೆಗಳು ಯಾವುದೇ ರಜೆ ನೀಡದೆ ನಿರಂತರವಾಗಿ ಪರೀಕ್ಷೆ, ಪ್ರಾಯೋಗಿಕ ಪರೀಕ್ಷಗಳು ಹಾಗೂ ಮೌಖಿಕ ಪರೀಕ್ಷೆಗಳನ್ನು ಮಾಡತೊಡಗಿವೆ.

ಬಹುತೇಕ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಪ್ರಶ್ನೆಪತ್ರಿಕೆಗಳ ಮುದ್ರಣ ಸೇರಿದಂತೆ ಇನ್ನಿತರೆ ಪರೀಕ್ಷಾ ಸಿದ್ಧತೆ ಮಾಡಿಕೊಂಡಿವೆ. ಹೀಗಾಗಿ ಪರೀಕ್ಷೆ ಮುಗಿಸುವ ಉಮೇದಿಯಲ್ಲಿವೆ. ಆದರೆ, ಒಂದು ಪರೀಕ್ಷೆಗಳ ನಡುವೆ ರಜೆ ಅಂತರ ಕಡಿತಗೊಳಿಸಿ ನಿರಂತರವಾಗಿ ಪರೀಕ್ಷೆ ನಡೆಸುತ್ತಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com