ಚಲಿಸುವ ರೈಲಿನಲ್ಲಿ ತುಂಬು ಗರ್ಭಿಣಿ ಸಂಕಷ್ಟ: ಸಹ ಪ್ರಯಾಣಿಕರ ಟ್ವೀಟ್ ನಿಂದ ನೆಮ್ಮದಿಯ ಉಸಿರು ಬಿಟ್ಟ ಮಹಿಳೆ

ಚಲಿಸುತ್ತಿದ್ದ ರೈಲಿನಲ್ಲಿ ನೋವಿನಿಂದ ಬಳಲುತ್ತಿದ್ದನ್ನು ತುಂಬು ಗರ್ಭಿಣಿಯೋರ್ವರಿಗೆ ಸಹ ಪ್ರಯಾಣಿಕರೊಬ್ಬರು ಮಾಡಿದ ಟ್ವೀಟ್ ವೊಂದು ಜೀವ ಉಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಚಲಿಸುತ್ತಿದ್ದ ರೈಲಿನಲ್ಲಿ ನೋವಿನಿಂದ ಬಳಲುತ್ತಿದ್ದನ್ನು ತುಂಬು ಗರ್ಭಿಣಿಯೋರ್ವರಿಗೆ ಸಹ ಪ್ರಯಾಣಿಕರೊಬ್ಬರು ಮಾಡಿದ ಟ್ವೀಟ್ ವೊಂದು ಜೀವ ಉಳಿಸಿದೆ.

ಪಲ್ಲವಿ ಎಂಬುವವರು ತಮ್ಮ ಪತಿ ಶೇಖರ್ ಎಂಬುವವರ ಜೊತೆಗೆ ಮೈಸೂರಿನಿಂದ ಸೋಲ್ಲಾಪುರಕ್ಕೆ ತೆರಳುತ್ತಿದ್ದರು. ಇದೇ ರೈಲಿಲ್ಲಿ ಸುನಿಲ್ ಮಠ್ ಎಂಬುವವರು ಕೂಡ ಪ್ರಯಾಣಿಸುತ್ತಿದ್ದರು. ರೈಲು ಮಂಗಳವಾರ ಬೆಳಿಗ್ಗೆ 9.30ರ ಸುಮಾರಿಗೆ ತುಮಕೂರು ತಲುಪುತ್ತಿದ್ದಂತೆಯೇ ಗರ್ಭಿಣಿ ಮಹಿಳೆಗೆ ನೋವು ಕಾಣಿಸಿಕೊಂಡಿದೆ. ಇದನ್ನು ಕಂಡ ಸುನಿಲ್  ಅವರು ಕೂಡಲೇ ಬೆಂಗಳೂರು ರೈಲ್ವೇ ವಿಭಾಗಕ್ಕೆ ಟ್ವೀಟ್ ಮಾಡುವ ಮೂಲಕ ವಿಚಾರ ತಿಳಿಸಿದ್ದಾರೆ. ಸಹಾಯಕ್ಕೆ ಧಾವಿಸುವಂತೆ ಮನವಿ ಮಾಡಿಕೊಂಡಿದ್ದಾರೆ. 

ಈ ಟ್ವೀಟ್'ಗೆ ತ್ವರಿತಗತಿಯಲ್ಲಿ ಪ್ರತಿಕ್ರಿಯೆ ನೀಡಿರುವ ರೈಲ್ವೇ ಅಧಿಕಾರಿಗಳು, ಫೋನ್ ನಂಬರ್ ನೀಡುವಂತೆ ತಿಳಿಸಿದ್ದಾರೆ. ಫೋನ್ ನಂಬರ್ ನೀಡಿದ ಐದು ನಿಮಿಷಗಳಲ್ಲೇ ಕರೆ ಮಾಡಿದ ಅಧಿಕಾರಿಗಳು, ಮಹಿಳೆಯ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದು, ತಿಪಟೂರು ರೈಲ್ವೇ ನಿಲ್ದಾಣಕ್ಕೆ ಆ್ಯಂಬುಲೆನ್ಸ್, ವೈದ್ಯಕೀಯ ಸಿಬ್ಬಂದಿ ಹಾಗೂ ಇತರೆ ಅಧಿಕಾರಿಗಳನ್ನು ಕಳುಹಿಸಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಮಹಿಳೆ ಆರೋಗ್ಯ ಸುಧಾರಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವರದಿಗಳು ತಿಳಿಸಿವೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಕೆ.ವರ್ಮಾ ಅವರು, ಟ್ವಿಟರ್ ಸಾಕಷ್ಟು ಸಹಾಯ ಮಾಡುತ್ತಿದ್ದು, ತುರ್ತುಪರಿಸ್ಥಿತಿಯಲ್ಲಿ ಸಹಾಯಕ್ಕೆ ನೆರವಾಗುತ್ತಿದೆ. ಪ್ರಯಾಣಿಕರೋರ್ವರಿಗೆ ಸಹಾಯ ಮಾಡಿದ್ದು ಸಾಕಷ್ಟು ತೃಪ್ತಿ ತಂದಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com