ಮಾರಕ ಕೊರೋನಾಗೆ ಭಾರತದಲ್ಲಿ ಮೊದಲ ಬಲಿ, ಕಲಬುರಗಿಯಲ್ಲಿ ಕೊರೋನಾದಿಂದ ವೃದ್ಧ ಸಾವು

 ಕೆಲ ದಿನಗಳ ಹಿಂದೆ ಸೌದಿ ಅರೇಬಿಯಾದಿಂದ ಆಗಮಿಸಿದ್ದ ಕಲಬುರಗಿಯ 76 ವರ್ಷದ ವೃದ್ಧ ಕೊರೋನಾ ವೈರಸ್ ನಿಂದಲೇ ಸಾವನ್ನಪ್ಪಿರುವುದು ಇದೀಗ ದೃಢಪಟ್ಟಿದೆ. ವೃದ್ದ ಕೊರೋನಾದಿಂದಲೇ ಮೃತಪಟ್ಟಿರುವುದು ಹೌದೆಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
ಮಾರಕ ಕೊರೋನಾಗೆ ಭಾರತದಲ್ಲಿ ಮೊದಲ ಬಲಿ, ಕಲಬುರಗಿಯಲ್ಲಿ ಕೊರೋನಾದಿಂದ ವೃದ್ಧ ಸಾವು

ಕಲಬುರಗಿ: ಕೆಲ ದಿನಗಳ ಹಿಂದೆ ಸೌದಿ ಅರೇಬಿಯಾದಿಂದ ಆಗಮಿಸಿದ್ದ ಕಲಬುರಗಿಯ 76 ವರ್ಷದ ವೃದ್ಧ ಕೊರೋನಾ ವೈರಸ್ ನಿಂದಲೇ ಸಾವನ್ನಪ್ಪಿರುವುದು ಇದೀಗ ದೃಢಪಟ್ಟಿದೆ. ವೃದ್ದ ಕೊರೋನಾದಿಂದಲೇ ಮೃತಪಟ್ಟಿರುವುದು ಹೌದೆಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ಫೆ.29ಕ್ಕೆ ಸೌದಿ ಅರೇಬಿಯಾದಿಂದ ಬಂದಿದ್ದ ವೃದ್ದ ಎರಡು ದಿನಗಳ ಹಿಂದೆ ಸಾವನ್ನಪ್ಪಿದ್ದರು. ಇದು ಕೊರೋನಾದಿಂದ ಸಂಭವಿಸಿದ ದೇಶದ ಮೊದಲ ಸಾವಿನ ಪ್ರಕರಣವಾಗಿದೆ. 

ಸೌದಿ ಉಮ್ರಾ ಯಾತ್ರೆ ಕೈಗೊಂಡಿದ್ದ ವೃದ್ದ ಹೈದರಾಬಾದ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಈ ಸಂಬಂಧ ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದು " ಕಲಬುರ್ಗಿಯಲ್ಲಿ ಮೊನ್ನೆ ಮೃತಪಟ್ಟ 76 ವರ್ಷದ #COVID19 ಶಂಕಿತರಿಗೆ ಸೋಂಕು ತಗಲಿದ್ದು ಖಚಿತವಾಗಿದೆ. ಇವರೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಗುರುತಿಸಿ ಪ್ರತ್ಯೇಕವಾಗಿರಿಸಿ ನಿಗಾವಹಿಸಲಾಗಿದೆ." ಎಂದಿದ್ದಾರೆ.

ಇಂದು ಬೆಂಗಳೂರಿನಲ್ಲಿ ಗ್ರೀಸ್ ನಿಂದ ಹನಿಮೂನ್ ಮುಗಿಸಿ ವಾಪಾಸಾಗಿದ್ದ ಯುವಕನಿಗೆ ಕೊರೋನಾ ಇರುವುದು ಖಚಿತವಾಗಿತ್ತು. ಕರ್ನಾಟಕದಲ್ಲಿ ಇದುವರೆಗೆ ಐವರಿಗೆ ಸೋಂಕು ದೃಢಪಟ್ಟಿದ್ದರೆ ಭಾರತದಲ್ಲಿ ಒಟ್ಟೂ 78ಮಂದಿ ರೋಗದಿಂದ ಬಾಧಿತರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com