ಹಾಸನ: ನಿರ್ಮಾಣ ಹಂತದ ಮೇಲ್ಸೇತುವೆ ಕುಸಿತ; 'ಕರೋನಾ'ದಿಂದ ತಪ್ಪಿದ ಅನಾಹುತ!

 ನಿರ್ಮಾಣ ಹಂತದ ಮೇಲ್ಸೇತುವೆ ಕುಸಿದು ಬಿದ್ದಿರುವ ಘಟನೆ ಹಾಸನದಲ್ಲಿ ನಡೆದಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಹಾನಿಯಾಗಿಲ್ಲ. 
ಮೇಲ್ಸೇತುವೆ ಕುಸಿತ
ಮೇಲ್ಸೇತುವೆ ಕುಸಿತ

ಹಾಸನ: ನಿರ್ಮಾಣ ಹಂತದ ಮೇಲ್ಸೇತುವೆ ಕುಸಿದು ಬಿದ್ದಿರುವ ಘಟನೆ ಹಾಸನದಲ್ಲಿ ನಡೆದಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಹಾನಿಯಾಗಿಲ್ಲ. 

ಹಾಸನದ ಹೃದಯ ಭಾಗದಲ್ಲಿರುವ ಬಸ್​ ನಿಲ್ದಾಣದಿಂದ ಎನ್​ಆರ್​ ವೃತ್ತದವರೆಗೆ ನಿರ್ಮಾಣವಾಗುತ್ತಿದ್ದ ಮೇಲ್ಸೇತುವೆ ಕುಸಿದು ಬಿದ್ದಿದೆ. ಪ್ರತಿ ನಿತ್ಯ ಇದರ ಕೆಳಗಡೆ ಅಂಗಡಿಗಳು ಮತ್ತು ತಳ್ಳುವ ಗಾಡಿಯಲ್ಲಿ ಹೋಟೆಲ್​ ನಡೆಲಾಗುತ್ತಿತ್ತು.

ಹೆಚ್ಚಿನ ಸಂಖ್ಯೆಯಲ್ಲಿ ಜನ ಯಾವಾಗಲೂ ಸೇತುವೆಯ ಕೆಳಗಿರುತ್ತಿದ್ದರು, ಆದರೆ ಹೆಚ್ಚಿದ ಕೊರೋನಾ ಭೀತಿಯಿಂದ ಪ್ರಾಣಾಪಾಯ ತಪ್ಪಿದೆ.

ಕೇಂದ್ರ ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರ ಸಹಭಾಗಿತ್ವದಲ್ಲಿ 42 ಕೋಟಿ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗುತ್ತಿತ್ತು.  ದಶಕಗಳಿಂದ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು,  ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ  ಅಧಿಕಾರಕ್ಕೆ ಬಂದಾಗ ಇದಕ್ಕೆ ಅನುಮೋದನೆ ನೀಡಲಾಗಿತ್ತು. ಘಟನೆ ನಡೆದಗಾ ಕಂಟ್ರಾಕ್ಟರ್ ಮತ್ತು ಎಂಜಿನೀಯರ್ ಇರಲಿಲ್ಲ.

ಈ ಮೇಲ್ಸೇತುವೆ ಕೆಳಗೆ ಪ್ರತಿನಿತ್ಯ ಹತ್ತಾರು ಬೀದಿ ಬದಿ ಕ್ಯಾಂಟೀನ್​ಗಳು ತೆರೆದಿರುತ್ತಿದ್ದವು. ವಾಹನ ಸಂಚಾರರು ಸೇರಿದಂತೆ ಅನೇಕರು ಇಲ್ಲಿ ಕೆಲವರು ತಿಂಡಿ ತಿನ್ನುತ್ತಿದ್ದರು. ಆದರೆ, ವಿಶ್ವದೆಲ್ಲೆಡೆ ಮೂಡಿರುವರುವ ಕೊರೋನಾ ಭೀತಿ ಹಿನ್ನೆಲೆ ನಿನ್ನೆಯಿಂದ ರಸ್ತೆ ಬದಿ ಕ್ಯಾಂಟೀನ್ ತೆರೆಯದಂತೆ ಜಿಲ್ಲಾಡಳಿತ ಸೂಚಿಸಿತ್ತು. ಇದೇ ಹಿನ್ನೆಲೆ ಇಂದು ಫ್ಲೈ ಓವರ್​ ಕೆಳಗೆ ಎಂದಿನ ಜನಸಂದಣಿ ಇರಲಿಲ್ಲ. ಈ ಹಿನ್ನೆಲೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com