ಲೈಂಗಿಕ ಕಿರುಕುಳ ನೀಡಿದ್ದ ಕ್ಯಾಬ್ ಚಾಲಕ‌ ಬಂಧನ
ಲೈಂಗಿಕ ಕಿರುಕುಳ ನೀಡಿದ್ದ ಕ್ಯಾಬ್ ಚಾಲಕ‌ ಬಂಧನ

ಲೈಂಗಿಕ ಕಿರುಕುಳ ನೀಡಿದ್ದ ಕ್ಯಾಬ್ ಚಾಲಕ‌ ಬಂಧನ

ಯುವತಿಗೆ ಲೈಂಗಿಕ‌ ಕಿರುಕುಳ ನೀಡಿದ ಆರೋಪದಡಿ ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.ರಾಮಣ್ಣ ನಾಗರಾಜ್ ಬಂಧಿತ ಕ್ಯಾಬ್ ಚಾಲಕ.

ಬೆಂಗಳೂರು: ಯುವತಿಗೆ ಲೈಂಗಿಕ‌ ಕಿರುಕುಳ ನೀಡಿದ ಆರೋಪದಡಿ ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ರಾಮಣ್ಣ ನಾಗರಾಜ್ ಬಂಧಿತ ಕ್ಯಾಬ್ ಚಾಲಕ.

ಕ್ಯಾಬ್ ಚಾಲಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿ ನೊಂದ ಯುವತಿ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. 

"ಇದೇ ತಿಂಗಳ 7ರಂದು ಮಧ್ಯಾಹ್ನ 12 ಗಂಟೆಗೆ ಮನೆಗೆ ತೆರಳಲು ತಾನು ಕ್ಯಾಬ್ ಬುಕ್ ಮಾಡಿ ಹತ್ತಿದ್ದೆ. ಸ್ವಲ್ಪ ದೂರ ತೆರಳಿದ ಬಳಿಕ ಕಾರು ನಿಲ್ಲಿಸಿದ ಚಾಲಕ, ನಂತರ ತಾನಿದ್ದ ಸೀಟ್ ನಲ್ಲಿ ಬಂದು ಕುಳಿತು ಲೈಂಗಿಕ‌ ಕಿರುಕುಳ ನೀಡಿದ್ದ. ಈ ಸಂದರ್ಭದಲ್ಲಿ ಗಾಬರಿಗೊಂಡ ನಾನು ಜೋರಾಗಿ ಕಿರುಚಿದ್ದೆ. ನಂತರ ಚಾಲಕನ ಸೀಟಿನಲ್ಲಿ ಹೋಗಿ ಕುಳಿತ ಆತ ವೇಗವಾಗಿ ಕಾರು ಚಲಾಯಿಸಿ, ಮನೆಯಿಂದ 100 ಮೀ ದೂರ ಕಾರು ನಿಲ್ಲಿಸಿದ್ದ. 

ತಕ್ಷಣವೇ ಹೆದರಿದ್ದ ತಾನು ಕಾರಿನಿಂದ ಇಳಿದು ಮನೆ ತಲುಪಿದ್ದೆ ಎಂದು ನೊಂದ ಯುವತಿ ದೂರಿ ನಲ್ಲಿ ದಾಖಲಿಸಿದ್ದಾಳೆ‌. ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com