ಕರ್ನಾಟಕ ವೈದ್ಯರ ನಿರ್ಲಕ್ಷ್ಯ, ಹೈದರಾಬಾದ್‌ಗೆ ಕರೆದುಕೊಂಡು ಹೋಗಬೇಕಾಯಿತು: ಕೊರೋನಾಗೆ ಬಲಿಯಾದ ವೃದ್ಧನ ಮಗ

ಕಲಬುರಗಿಯಲ್ಲಿ ಕರೋನಾ ವೈರಸ್ ಗೆ ಮೊದಲ ಬಲಿಯಾಗಿದ್ದು ಇದು ಇಡೀ ಭಾರತವನ್ನು ತಲ್ಲಣಗೊಳ್ಳುವಂತೆ ಮಾಡಿದೆ. ಮೂರ್ನಾಲ್ಕು ಆಸ್ಪತ್ರೆಗಳಿಗೆ ಕರೆದುಕೊಂಡು ಹೋದರು ತಂದೆಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಿಲ್ಲ.
ವೈದ್ಯರು
ವೈದ್ಯರು

ಕಲಬುರಗಿ: ಕಲಬುರಗಿಯಲ್ಲಿ ಕರೋನಾ ವೈರಸ್ ಗೆ ಮೊದಲ ಬಲಿಯಾಗಿದ್ದು ಇದು ಇಡೀ ಭಾರತವನ್ನು ತಲ್ಲಣಗೊಳ್ಳುವಂತೆ ಮಾಡಿದೆ. ಮೂರ್ನಾಲ್ಕು ಆಸ್ಪತ್ರೆಗಳಿಗೆ ಕರೆದುಕೊಂಡು ಹೋದರು ತಂದೆಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಿಲ್ಲ. ಹೀಗಾಗಿ ನಾನು ತಂದೆಯನ್ನು ಹೈದರಾಬಾದ್ ಗೆ ಕರೆದುಕೊಂಡು ಹೋಗಲಾಯಿತು ಎಂದು ತಂದೆಯ ಸಾವಿನ ಕುರಿತಂತೆ ಮಗ ಅಳಲನ್ನು ತೋಡಿಕೊಂಡಿದ್ದಾರೆ. 

ನಮ್ಮ ತಂದೆಗೆ ಮಾರ್ಚ್ 9ರಂದು ಜ್ವರ ಹೆಚ್ಚಾದಾಗ ಅವರನ್ನು ಸ್ಥಳೀಯವಾಗಿ ಹಲವು ಆಸ್ಪತ್ರೆಗಳಿಗೆ ಕರೆದುಕೊಂಡು ಹೋದೆವು, ಆದರೆ ಯಾವ ಆಸ್ಪತ್ರೆಯವರು ದಾಖಲಿಸಿಕೊಳ್ಳಲು ಮುಂದಾಗಲಿಲ್ಲ. ಹೀಗಾಗಿ ಕೊನೆಗೆ ಅವರನ್ನು ಹೈದರಾಬಾದ್ ಗೆ ಕರೆದುಕೊಂಡು ಹೋದೆವು. ಅಲ್ಲಿ ಸಹ ಮೂರ್ನಾಲಕ್ಕು ಆಸ್ಪತ್ರೆಗಳಿಗೆ ಕರೆದುಕೊಂಡು ಹೋದೆವು. ಅದು ಪ್ರಯೋಜನವಾಗಲಿಲ್ಲ. ಮತ್ತೆ ವಾಪಸ್ಸು ಕರೆದುಕೊಂಡು ಬರುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಮಾರ್ಗ ಮಧ್ಯೆ ತಂದೆ ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ. 

ಕಲಬುರಗಿಯ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದರೆ ನಮ್ಮ ತಂದೆ ಬದುಕುಳಿಯುತ್ತಿದ್ದರು ಎಂದು ಆರೋಗ್ಯ ಇಲಾಖೆ ಮೇಲೆ ಮೃತನ ಮಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com