ಗೂಗಲ್ ಟೆಕ್ಕಿ ಪತ್ನಿಗೂ ಕೊರೋನಾ: ವಿಮಾನ, ರೈಲಿನಲ್ಲಿ ಪ್ರಯಾಣಿಸಿ ಆಗ್ರಾಗೆ ಎಸ್ಕೇಪ್, ಹೆಚ್ಚಿದ ಆತಂಕ

ಪತಿಗೆ ಬಂದಿರುವ ಕೊರೋನಾ ವೈರಸ್ ತನಗೂ ಬರಬಹುದು ಎಂದು ಬೆದರಿದ ಗೂಗಲ್ ಟೆಕ್ಕಿ ಪತ್ನಿ ಆಗ್ರಾಗೆ ಏಸ್ಕೇಪ್ ಆಗಿದ್ದು, ಇದೀಗ ಆಕೆಯಲ್ಲೂ ಡೆಡ್ಲಿ ವೈರಸ್ ಪತ್ತೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪತಿಗೆ ಬಂದಿರುವ ಕೊರೋನಾ ವೈರಸ್ ತನಗೂ ಬರಬಹುದು ಎಂದು ಬೆದರಿದ ಗೂಗಲ್ ಟೆಕ್ಕಿ ಪತ್ನಿ ಆಗ್ರಾಗೆ ಏಸ್ಕೇಪ್ ಆಗಿದ್ದು, ಇದೀಗ ಆಕೆಯಲ್ಲೂ ಡೆಡ್ಲಿ ವೈರಸ್ ಪತ್ತೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಇತ್ತೀಚೆಗಷ್ಟೇ ಈ ದಂಪತಿ ಹನಿಮೂನ್'ಗೆ ಗ್ರೀಸ್ ರಾಷ್ಟ್ರಕ್ಕೆ ತೆರಳಿದ್ದರು. ಬಳಿಕ ಬೆಂಗಳೂರಿಗೆ ವಾಪಸ್ ಆಗಿದ್ದರು. ಇದಾದ ಬಳಿಕ ಟೆಕ್ಕಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿತ್ತು. ವೈರಸ್ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಟೆಕ್ಕಿಯನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಟೆಕ್ಕಿ ಗುಣಮುಖರಾಗಿದ್ದಾರೆಂದು ತಿಳಿದುಬಂದಿದೆ. ಆದರೆ, ಅವರ ಪತ್ನಿಯಲ್ಲೂ ವೈರಸ್ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. 

ತಮ್ಮ ಪತಿಗೆ ಬಂದಿರುವ ವೈರಸ್ ತನಗೂ ಬರಬಹುದೆಂದು ಭೀತಿಗೊಳಗಾದ ಮಹಿಳೆ ಮಾರ್ಚ್ 8 ರಂದು ವಿಮಾನ ಮೂಲಕ ದೆಹಲಿಗೆ ತೆರಳಿದ್ದರು. ಬಳಿಕ ಅಲ್ಲಿಂದ ತನ್ನ ಪಾಲಕರ ಜೊತೆಗೆ ರೈಲಿನಲ್ಲಿ ಆಗ್ರಾಗೆ ಪ್ರಯಾಣಿಸಿದ್ದರು. ಮಹಿಳೆ ಆಗ್ರಾಗೆ ತೆರಳಿದ ವಿಚಾರ ತಿಳಿದ ಬೆಂಗಳೂರಿನ ಆರೋಗ್ಯಾಧಿಕಾರಿಗಳು ಕೂಡಲೇ ಉತ್ತರಪ್ರದೇಶ ಸರ್ಕಾರದ ಅಧಿಕಾರಿಗಳ ಗಮನಕ್ಕೆ ತಂದಿದ್ದರು. 

ಬಳಿಕ ಆಗ್ರಾದಲ್ಲಿ ಮಹಿಳೆ ಉಳಿದುಕೊಂಡಿದ್ದ ಮನೆಗೆ ಅಲ್ಲಿನ ಆರೋಗ್ಯ ಇಲಾಖೆಯ ್ಧಿಕಾರಿಘಲು ಭೇಟಿ ನೀಡಿದ್ದರು. ಆದರೆ, ಮಹಿಳೆಯ ಕುಟುಂಬಸ್ಥರು ತಪಾಸಣೆಗೆ ಸ್ಪಂದನೆ ನೀಡಿರಲಿಲ್ಲ. ಬಳಿಕ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಪೊಲೀಸರನ್ನು ಸ್ಥಳಕ್ಕೆ ಕರೆಸಿ ನಂತರ ಮಹಿಳೆಯನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ತಪಾಸಣೆ ನಡೆಸಿದ್ದರು. ಈ ವೇಳೆ ಮಹಿಳೆಯಲ್ಲಿ ವೈರಸ್ ಇರುವುದು ದೃಢಪಟ್ಟಿದೆ. 

ಇನ್ನು ಮಹಿಳೆ ಜೊತೆ ಅದೇ ಮನೆಯಲ್ಲಿ 8 ಮಂದಿ ವಾಸವಿದ್ದು, ಅವರನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ. 

ಆರೋಗ್ಯಾಧಿಕಾರಿಗಳು ಸೋಂಕಿತ ಟೆಕ್ಕಿ ಪತ್ನಿಯನ್ನು ವಿಚಾರಣೆ ನಡೆಸಿದ್ದು, ಈ ವೇಳೆ ಮಹಿಳೆ ಕೆಲ ವಿಚಾರಗಳನ್ನು ಬಹಿರಂಗಪಡಿಸಿದ್ದಾಳೆ. ಫೆಬ್ರವರಿ ತಿಂಗಳಿನಲ್ಲಿ ಗೂಗಲ್ ಉದ್ಯೋಗಿ ಜೊತೆಗೆ ವಿವಾಹವಾಗಿತ್ತು. ಬಳಿಕ ಹನಿಮೂನ್ ಗೆಂದು ಇಟಲಿಗೆ ತೆರಳಿದ್ದೆವು. ಅಲ್ಲಿಂದ ಗ್ರೀಸ್ ಹಾಗೂ ಫ್ರಾನ್ಸ್'ಗೆ ಪ್ರಯಾಣಿಸಿದ್ದೆವು. ಫೆಬ್ರವರಿ 27 ರಂದು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದು, ಅಲ್ಲಿಂದ ಮತ್ತೆ ಬೆಂಗಳೂರಿಗೆ ಬಂದಿದ್ದೆವು ಎಂದು ಹೇಳಿದ್ದಾಳೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com