ವಿದೇಶಗಳಿಂದ ಕರ್ನಾಟಕಕ್ಕೆ ಬರುತ್ತೀರಾ? 14 ದಿನ ಪ್ರತ್ಯೇಕವಾಗಿ ಇರಬೇಕು

ರಾಜ್ಯಕ್ಕೆ ವಿದೇಶಗಳಿಂದ ಬರುವ ಪ್ರಯಾಣಿಕರನ್ನು 14 ದಿನಗಳ ಕಾಲ ಪ್ರತ್ಯೇಕವಾಗಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರತ್ಯೇಕ ವಾಸದ ಕೋಣೆಯಲ್ಲಿ ಕೊರೋನಾ ಶಂಕಿತರಲ್ಲದ ಪ್ರಯಾಣಿಕರನ್ನು ಸಹ ಇರಿಸಲಾಗುತ್ತದೆ.
ವಿದೇಶಗಳಿಂದ ಕರ್ನಾಟಕಕ್ಕೆ ಬರುತ್ತೀರಾ? 14 ದಿನ ಪ್ರತ್ಯೇಕವಾಗಿ ಇರಬೇಕು

ಬೆಂಗಳೂರು: ರಾಜ್ಯಕ್ಕೆ ವಿದೇಶಗಳಿಂದ ಬರುವ ಪ್ರಯಾಣಿಕರನ್ನು 14 ದಿನಗಳ ಕಾಲ ಪ್ರತ್ಯೇಕವಾಗಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರತ್ಯೇಕ ವಾಸದ ಕೋಣೆಯಲ್ಲಿ ಕೊರೋನಾ ಶಂಕಿತರಲ್ಲದ ಪ್ರಯಾಣಿಕರನ್ನು ಸಹ ಇರಿಸಲಾಗುತ್ತದೆ.


ಕೋವಿಡ್-19 ಪೀಡಿತ ದೇಶಗಳಿಂದ ಕಳೆದ 14 ದಿನಗಳಲ್ಲಿ ಬಂದ ಪ್ರಯಾಣಿಕರನ್ನು ಪ್ರತ್ಯೇಕ ಸ್ಥಳಗಳಲ್ಲಿ 14 ದಿನಗಳ ಕಾಲ ಇರಿಸಲಾಗುತ್ತದೆ. ಒಂದು ವೇಳೆ ಅವರಲ್ಲಿ ಕೊರೋನಾ ಶಂಕೆಯಿಲ್ಲದಿದ್ದರೂ ಕೂಡ ಇಲ್ಲಿಗೆ ಆಗಮಿಸಿದ ದಿನದಿಂದ 14 ದಿನಗಳ ಕಾಲ ಭಾರತ ಸರ್ಕಾರ ಸೂಚಿಸಿದ ಮಾರ್ಗಸೂಚಿ ಪ್ರಕಾರ ಪ್ರತ್ಯೇಕ ವಾಸಸ್ಥಳಗಳಲ್ಲಿ ಇರಿಸಿ ಅವರಲ್ಲಿ ಸೋಂಕು ಇಲ್ಲ ಎಂದು ದೃಢಪಟ್ಟ ಮೇಲೆ ಮನೆಗೆ ಕಳುಹಿಸಲಾಗುತ್ತದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ವಿದೇಶಗಳಿಂದ ಬಂದವರು ಪ್ರತ್ಯೇಕವಾಗಿ ನೆಲೆಸಿದ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಹಾಯವಾಣಿ 104ಕ್ಕೆ ದಿನಕ್ಕೆ ಎರಡು ಬಾರಿ ಕರೆ ಮಾಡಿ ತಮ್ಮ ವೈದ್ಯಕೀಯ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com