'ಕೊರೋನಾ ವೈರಸ್' ಶಂಕೆ: ಬೆಂಗಳೂರಿನ ಕಚೇರಿಯೊಂದನ್ನು ಸ್ಥಳಾಂತರಿಸಿದ ಇನ್ಫೋಸಿಸ್ 

ಉದ್ಯೋಗಿಯೊಬ್ಬರಲ್ಲಿ ಕೊರೋನಾ ವೈರಾಣು ಸೋಂಕು ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಇನ್ಫೋಸಿಸ್ ಸಂಸ್ಥೆ ತನ್ನ ಕಚೇರಿಯೊಂದನ್ನು ಸ್ಥಳಾಂತರ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಉದ್ಯೋಗಿಯೊಬ್ಬರಲ್ಲಿ ಕೊರೋನಾ ವೈರಾಣು ಸೋಂಕು ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಇನ್ಫೋಸಿಸ್ ಸಂಸ್ಥೆ ಆ ಕಚೇರಿಯನ್ನು ಸ್ಥಳಾಂತರ ಮಾಡಿದೆ.


ನಮ್ಮಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವ ಶಂಕೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಐಐಪಿಎಂ ಕಟ್ಟಡದಲ್ಲಿನ ಕಚೇರಿಯನ್ನು ಸ್ಥಳಾಂತರ ಮಾಡಿದ್ದೇವೆ ಎಂದು ಇನ್ಫೋಸಿಸ್ ನ ಬೆಂಗಳೂರು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಗುರುರಾಜ್ ದೇಶಪಾಂಡೆ ಇ-ಮೇಲ್ ಮೂಲಕ ತಿಳಿಸಿದ್ದಾರೆ.


1990ರಿಂದ ಇನ್ಫೋಸಿಸ್ ಬೆಂಗಳೂರಿನಲ್ಲಿ ವಿಸ್ತಾರವಾದ ಕ್ಯಾಂಪಸ್ ನ್ನು ಹೊಂದಿದ್ದು 12ಕ್ಕೂ ಹೆಚ್ಚು ಕಟ್ಟಡಗಳನ್ನು ಹೊಂದಿದೆ.ಇದರಲ್ಲಿ ಇನ್ಫೋಸಿಸ್ ನ ಅಭಿವೃದ್ಧಿ ಕೇಂದ್ರ ಮತ್ತು ಕಾರ್ಪೋರೇಟ್ ಕಚೇರಿಗಳಿವೆ.

ನಮ್ಮ ಉದ್ಯೋಗಿಗಳ ರಕ್ಷಣೆಗೆ ನಾವು ತೆಗೆದುಕೊಳ್ಳುತ್ತಿರುವ ಕ್ರಮವಾಗಿದ್ದು ನಮ್ಮ ಸುರಕ್ಷತೆಗೆ ನಾವು ಕೆಲಸ ಮಾಡುವ ಸ್ಥಳಗಳನ್ನು ಸೂಕ್ಷ್ಮವಾಗಿ ನೋಡಿಕೊಳ್ಳುತ್ತಿದ್ದೇವೆ ಎಂದು ಇಮೇಲ್ ನಲ್ಲಿ ದೇಶಪಾಂಡೆ ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾಗಳ ಮೂಲಕ ಯಾವುದೇ ಸುಳ್ಳು ಸುದ್ದಿ ಮತ್ತು ವದಂತಿಗಳನ್ನು ಹಬ್ಬಿಸದಂತೆ ಕೂಡ ಉದ್ಯೋಗಿಗಳಿಗೆ ಇನ್ಫೋಸಿಸ್ ಸೂಚಿಸಿದೆ. 

ನಿನ್ನೆ ಆದೇಶ ನೀಡಿದ್ದ ರಾಜ್ಯ ಸರ್ಕಾರ ಎಲ್ಲಾ ಐಟಿ-ಬಿಟಿ ಕಂಪೆನಿಗಳು ಇನ್ನು ಒಂದು ವಾರ ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಆದೇಶ ನೀಡುವಂತೆ ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com